ಸಿದ್ದರಾಮಯ್ಯ ಅವರಿಗೆ ನಾಲ್ಕು ಸಲಹೆ ನೀಡಿದ ಎಸ್ಸೆಂ ಕೃಷ್ಣ

Posted By:
Subscribe to Oneindia Kannada

ಬೆಂಗಳೂರು, ಸೆ. 22: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್ಸೆಂ ಕೃಷ್ಣರನ್ನು ಬುಧವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಎಸ್ಸೆಂ ಕೃಷ್ಣ ಅವರು ನಾಲ್ಕು ಸಲಹೆಗಳನ್ನು ನೀಡಿದ್ದಾರೆ.

ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲರನ್ನು ಭೇಟಿ ಮಾಡಿ ವಿಶೇಷ ಅಧಿವೇಶನ ಕರೆಯುವಂತೆ ಕೋರಿದ ಬಳಿಕ ಸಿದ್ದರಾಮಯ್ಯ ಅವರು ನೇರವಾಗಿ ಸದಾಶಿವನಗರದಲ್ಲಿರುವ ಎಸ್ ಎಂ ಕೃಷ್ಣರ ಮನೆಗೆ ತೆರಳಿದರು. ಮನೆಗೆ ಬಂದ ಸಿದ್ದರಾಮಯ್ಯರನ್ನು ಬಾಗಿಲ ಬಳಿ ನಿಂತು ಸ್ವಾಗತಿಸಿದ ಕೃಷ್ಣ ಅವರು ಮನೆಯೊಳಗೆ ಕರೆದೊಯ್ದರು. ಇದೇ ಸಂದರ್ಭದಲ್ಲಿ ಕಷ್ಟಕಾಲದಲ್ಲಿ ಕೃಷ್ಣ ದಾರಿತೋರಿಸಬೇಕು ಅಂತಾ ಸಿಎಂ ನಗೆಚಟಾಕಿ ಹಾರಿಸಿದ್ರು.[ಸುಪ್ರೀಂ ಆದೇಶ ವಿರುದ್ಧ ನಿಂತರೆ, ಕರ್ನಾಟಕದ ಗತಿ ಏನು?]

Cauvery water dispute : SM Krishna suggestions to CM Siddaramaiah

ಸಿಎಂಗೆ ಕೃಷ್ಣ ನಾಲ್ಕು ಸಲಹೆಗಳನ್ನು ನೀಡಿದ್ದಾರೆ.
* ಪ್ರಮುಖವಾಗಿ ಕಾವೇರಿ ಜಲಾನಯನ ಪ್ರದೇಶಗಳ ಕೆರೆಗಳ ಹೂಳು ತೆಗೆಸುವುದು.
* ಕಾವೇರಿ ಜಲಭಾಗ್ಯ ನಿಗಮಕ್ಕೆ ಆರ್ಥಿಕ ಶಕ್ತಿ ತುಂಬಿ, ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಅವಧಿ ವಿಸ್ತರಣೆ
* 6 ತಿಂಗಳ ಕಾಲ ರೈತರ ಸಾಲದ ಬಡ್ಡಿ ಮನ್ನಾ ವಿಸ್ತರಿಸಿ ಹಾಗೂ ಕಾವೇರಿ ಜಲಾನಯನ ವ್ಯಾಪ್ತಿ ರೈತರಿಗೆ ಸೂಕ್ತ ಪರಿಹಾರ ನೀಡುವುದು.
* ರೈತರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಾಪಾಸ್ ಪಡೆಯುವಂತೆ ಸಲಹೆ ನೀಡಿದರು.[ಕಾವೇರಿ ನೀರು ಬಿಡದಿರುವ ಬಗ್ಗೆ ಸೆ. 23ರಂದು ಅಧಿಕೃತ ಪ್ರಕಟಣೆ]

Cauvery water dispute : SM Krishna suggestions to CM Siddaramaiah

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಒಪ್ಪಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದ ಕೃಷ್ಣ ಅವರು ಮಹಾತ್ಮಾ ಗಾಂಧೀಜಿ ಅವರ ಉಕ್ತಿ 'ಕಾನೂನು ಅನುಪಯುಕ್ತವಾದಾಗ ಅದರ ಉಲ್ಲಂಘನೆಯೇ ಧರ್ಮ' ಉಲ್ಲೇಖಿಸಿದರು.[ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿನ ಅರ್ಥವೇನು: ಮುಂದೇನಾಗಬಹುದು?]

ನಾನು ಸಿಎಂ ಆಗಿದ್ದಾಗ ಒಟ್ಟಾರೆ 38 ಕೋಟಿ ರು ಪರಿಹಾರ ನೀಡಿದ್ದೆ. ಸೆಪ್ಟೆಂಬರ್ ಕೊನೆ ತನಕ ಅಸಲು ಕಟ್ಟಿದರೆ ಸಾಲಮನ್ನಾ ಮಾಡಲಾಗುತ್ತಿತ್ತು. ಮುಂದಿನ ಮಾರ್ಚ್ ತನಕ ವಿಸ್ತರಣೆ ಮಾಡಿ, ರೈತರಿಗೆ ಧೈರ್ಯ ತುಂಬಿ, ಕಾನೂನು ಹೋರಾಟದ ಮುಂದುವರೆಯಲಿ ಎಂದು ಸಿದ್ದರಾಮಯ್ಯ ಅವರಿಗೆ ಸೂಚಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cauvery water dispute : Chief Minister Siddaramaiah visited former Chief Minister SM Krishna at his Sadashivnagar residence and discussed the Cauvery river water sharing issue.
Please Wait while comments are loading...