ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ತೀರ್ಪು: ಬೆಂಗಳೂರಿಗರ ಮೊಗದಲ್ಲಿ ಹರ್ಷದ ಬುಗ್ಗೆ

|
Google Oneindia Kannada News

ಬೆಂಗಳೂರು, ಫೆಬ್ರವರಿ16 : ಕಾವೇರಿ ನದಿ ನೀರಿನ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಆದೇಶಕ್ಕೆ ಸಾರ್ವಜನಿಕರಿಂದ ಹರ್ಷ ವ್ಯಕ್ತವಾಗಿದೆ. ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಕುರಿತಾಗಿ ಒನ್ ಇಂಡಿಯಾ ಟೀಮ್ ಸಾರ್ವಜನಿಕ ಬಳಿ ಅಭಿಪ್ರಾಯ ಕಲೆ ಹಾಕಿದೆ.

ಇವತ್ತಿನ ಕವೇರಿ ತೀರ್ಪು ಸಿಹಿಯೂ ಅಲ್ಲ ಕಹಿಯೂ ಅಲ್ಲ ಎಂದೆಸಿಸುತ್ತಿದೆ ಎಂದು ಕೆಲವು ಹೇಳಿದರೆ ಇನ್ನು ಕೆಲವರು ಕರ್ನಾಟಕಕ್ಕೆ ನೀಡಿರುವ ನೀರು ಕಡಿಮೆಯೇ ಎಂದೆನಿಸುತ್ತದೆ ಎಂದು ಹೇಳಿದ್ದಾರೆ. ಮಹಾದಾಯಿ ಬೇರೆ ಅಲ್ಲ ನಮ್ಮ ಕಾವೇರಿ ಬೇರಿ ಅಲ್ಲ ರೈತರೆಲ್ಲರೂ ಒಂದೇ, ಹೊರರಾಜ್ಯದಿಂದ ಬಂದು ನಮ್ಮ ನೀರನ್ನು ಬಳಕೆ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಹರಿಯುವ ನೀರಿಗೆ ಯಾರ ಅಪ್ಪಣೆಯೂ ಬೇಕಿಲ್ಲ ಆದರೆ ಆದರೆ ನಮ್ಮ ಪರಿಸ್ಥಿತಿಯನ್ನು ನೋಡಿ ಪ್ರಮಾಣದ ನೀರು ಕೇಳಬೇಕು.

ಸುಪ್ರೀಂ ಕೋರ್ಟ್ ಕಾವೇರಿ ತೀರ್ಪಿಗೆ ಯಾರು, ಏನೆಂದರು?ಸುಪ್ರೀಂ ಕೋರ್ಟ್ ಕಾವೇರಿ ತೀರ್ಪಿಗೆ ಯಾರು, ಏನೆಂದರು?

ನದಿಯಲ್ಲಿ ನೀರು ಜಾಸ್ತಿ ಇದ್ದಾಗ ತಮಿಳುನಾಡಿನವರು ಕೇಳುವುದೇ ಬೇಡ ನೀರನ್ನು ನಾವಾಗಿಯೇ ನೀಡುತ್ತೇವೆ ಆದರೆ ಕಡಿಮೆ ಇದ್ದಾಗ ಜಗಳವಾಡದೆ ಶಾಂತಿ ರೀತಿಯಿಂದ ವರ್ತಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Cauvery verdict: Smile on Bengaluru face

ಕರ್ನಾಟಕ ತಮಿಳುನಾಡಿಗೆ ಬಿಡುತ್ತಿದ್ದ 192 ಟಿಎಂಸಿ ಅಡಿ ನೀರನ್ನು ಕಡಿತಗೊಳಿಸಿ 177.75 ಟಿ.ಎಂಸಿ ಅಡಿ ನೀರನ್ನಷ್ಟೇ ಬಿಡಲು ಸುಪ್ರೀಂ ಆದೇಶಿಸಿದೆ. ಇದರಿಂದ ಕರ್ನಾಟಕ ಹೆಚ್ಚುವರಿ 14.25 ನೀರನ್ನು ಉಳಿಸಿಕೊಳ್ಳಬಹುದಾಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಹಲವರು ಟ್ವೀಟ್ ಮಾಡಿದ್ದು, ಕೆಲವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದರೆ, ಮತ್ತಷ್ಟು ಜನ ಇದು ಕನ್ನಡಿಗರು ಖುಷಿ ಪಡುವ ವಿಚಾರವಲ್ಲ ಎಂದಿದ್ದಾರೆ.

English summary
Citizen of Bengaluru finally breathed after most awaited verdict on Cauvery water dispute by Supreme Court on Friday. Most of the people express their pleasure on the verdict which allocated 4.75 TMC of water for the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X