ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಲಾಟೆ, ಪೊಲೀಸರ ಹೇಳಿಕೆ ಮಾತ್ರ ನಂಬಿ!

Posted By:
Subscribe to Oneindia Kannada

ಬೆಂಗಳೂರು, ಸೆ. 13: ಸಾಮಾಜಿಕ ಜಾಲ ತಾಣಗಳಿಂದ ಹೊತ್ತಿಕೊಂಡ ಕಾವೇರಿ ಕಿಚ್ಚು ಈಗ ಬೆಂಗಳೂರಿನ ಅನೇಕ ಕಡೆಗಳಲ್ಲಿ ವ್ಯಾಪಿಸಿದೆ. ನಗರದ 16 ಕಡೆಗಳಲ್ಲಿ ಕರ್ಫ್ಯೂ, ಕೆಲವು ಕಡೆ ಸಿಆರ್ ಪಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ನಡುವೆ ಬೆಂಗಳೂರು ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿದ್ದು, ಅಧಿಕೃತ ಖಾತೆಯಿಂದ ಬಂದ ಸುದ್ದಿಯನ್ನು ಮಾತ್ರ ನಂಬುವಂತೆ ಕೋರಿದ್ದಾರೆ.

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್ ಆದೇಶ ಬಂದ ನಂತರ ನಗರದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ 16 ಬಡಾವಣೆಗಳಲ್ಲಿ ಸೆಪ್ಟೆಂಬರ್ 13ರಿಂದ 14ರವರೆಗೆ ಕರ್ಫ್ಯೂ ಜಾರಿ ಮಾಡಲಾಗಿದ್ದು, ಕಂಡಲ್ಲಿ ಗುಂಡಿಗೆ ಆದೇಶ ನೀಡಲಾಗಿದೆ. [ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಮೀರಬಹುದು]

Cauvery Issue : For updates/situation status Get Update from @BlrCityPolice official handle

ನಗರದಲ್ಲಿ 15 ಸಾವಿರ ಪೊಲೀಸರು, 10 ಪ್ಯಾರಾ ಮಿಲಿಟರಿ ಫೋರ್ಸ್, 30 ಸಿಆರ್ ಪಿಎಫ್ ತುಕುಡಿ, 20 ಕೆಎಸ್ಆರ್ಪಿ ತುಕುಡಿಗಳನ್ನು ನಿಯೋಜಿಸಲಾಗಿದೆ. [Live updates : ಹಲವು ಕಡೆ ಬಿಎಂಟಿಸಿ ಬಸ್ ಸಂಚಾರ ಆರಂಭ]

ಮಂಗಳವಾರ ನಗರದಾದ್ಯಂತ ಬಿಎಂಟಿಸಿ, ಆಟೋ, ಟ್ಯಾಕ್ಸಿಗಳು ಕೂಡ ಸಂಚರಿಸುವುದು ಅನುಮಾನ. [ಕಾವೇರಿದ ವಿವಾದ : ಬೆಂಗಳೂರಿನ 16 ಪ್ರದೇಶಗಳಲ್ಲಿ ಕರ್ಫ್ಯೂ]


ಇಂದಿನ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ಕೆಲವು ಪ್ರದೇಶಗಳಲ್ಲಿ ಬಿಎಂಟಿಸಿ ಸಂಚಾರ ಆರಂಭಿಸಿದೆ.


ಯಾವುದೇ ರೀತಿ ಅಹಿತಕರ ಘಟನೆ ನಡೆದಿಲ್ಲ ಎಂದು ಅಪ್ಡೇಟ್ ಮಾಡಿದ್ದಾರೆ.

ಏನು ವರದಿ ಮಾಡಬೇಕು? ಹೇಗೆ ವರದಿ ಮಾಡಬೇಕು? ಮಾಧ್ಯಮಗಳಿಗೆ ವಾರ್ತಾ ಇಲಾಖೆ ಪಾಠ
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
#CauveryProtests check updates/situation status from @BlrCityPolice official handle only !No major untoward incident reported in the city so far.Almost peaceful.Bmtc also started plying in many areas.Dont get instigated by rumours
Please Wait while comments are loading...