ಕಾವೇರಿ ಕಿಚ್ಚು : ಬೆಂಗಳೂರಲ್ಲಿ 312 ಮಂದಿ ಬಂಧನ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆ. 13 : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಬೆಂಗಳೂರು ಸೋಮವಾರದಿಂದ ಹೊತ್ತಿ ಉರಿಯುತ್ತಿದೆ. ಬೆಂಗಳೂರು ನಗರದ್ಯಾಂತ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದ 312 ಜನರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಮಾಹಿತಿ ನೀಡಿದ್ದಾರೆ.

ತಮಿಳುನಾಡಿನಲ್ಲಿ ಕನ್ನಡಿಗರ ಮೇಲಾದ ಹಲ್ಲೆ, ಹಾಗೂ ಸರ್ಕಾರ ಸಲ್ಲಿಸಿದ್ದ ತೀರ್ಪು ಮಾರ್ಪಾಡು ಅರ್ಜಿಯಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾವಾಗಿದೆ. ಈ ಕಾರಣಕ್ಕೆ ಸೋಮವಾರ ಬೆಂಗಳೂರು ನಗರದದ್ಯಾಂತ ಪ್ರತಿಭಟನೆ ಹಿಂಸಾತ್ಮಕವಾಗಿ ಪಡೆದುಕೊಂಡಿದೆ.[ಬುಧವಾರ ರಾತ್ರಿ ತನಕ ನಿಷೇಧಾಜ್ಞೆ ಮುಂದುವರಿಕೆ]

bengaluru police

ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಕಾಣುತ್ತಿದಂತೆ ಸೋಮವಾರ ಸಂಜೆಯಿಂದ ಬೆಂಗಳೂರಿನ 16 ಬಡಾವಣೆಗಳಲ್ಲಿ ಕಫ್ಯೂ ಜಾರಿ ಮಾಡಲಾಗಿದೆ.[ಚಿತ್ರಗಳು : ಹಿಂಸಾಚಾರಕ್ಕೆ ತಿರುಗಿದ ಕಾವೇರಿ ಪ್ರತಿಭಟನೆ]

ಈ ನಡುವೆ ಸೋಮವಾರ ನಡೆದ ವಿಧ್ವಂಸಕ ಕೃತ್ಯದ ಬಗ್ಗೆ ಕ್ರಮಕೈಗೊಳ್ಳಲು ವಿಡಿಯೋ, ಫೋಟೋಗಳಿದ್ದರೆ @BlrCityPolice ಗೆ ಕಳಿಸಿ ಅಥವಾ ವಾಟ್ಸಪ್ ನಂಬರ್ 9480801000 , ಇಮೇಲ್ : compolbcp@ksp.gov.in ಮಾಡಿ ಎಂದು ಬೆಂಗಳೂರು ನಗರ ಪೊಲೀಸರು ಕೋರಿದ್ದಾರ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
312 persons arrested so far in Bengaluru says Commissioner of Police N.S.Megharik. Cauvery protest turned into violent Bengaluru on Monday, September 12, 2016.
Please Wait while comments are loading...