ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಕಾವೇರಿ ಮೇಲ್ಮನವಿಗೆ ಕರ್ನಾಟಕ ಸಜ್ಜು

ಜಯಲಲಿತಾ ಆಸ್ಪತ್ರೆವಾಸ, ಬರ ಪರಿಸ್ಥತಿ ವೀಕ್ಷಣೆಗೆ ಕೇಂದ್ರ ತಂಡ ಆಗಮನ ಹಿನ್ನೆಲೆ ಕಾವೇರಿ ಗಲಾಟೆ ಸ್ವಲ್ಗ ದಿನದಿಂದ ತಣ್ಣಗಾಗಿತ್ತು ಆದರೆ ಈಗ ಈಶಾನ್ಯ ಮಾರುತ ತಡವಾದ ಕಾರಣ ಕಾವೇರಿ ಹೋರಾಟಕ್ಕೆ ಕರ್ನಾಟಕ ಸಿದ್ಧವಾಗಿದೆ.

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 12: ಜಯಲಲಿತಾ ಆಸ್ಪತ್ರೆವಾಸ, ಬರ ಪರಿಸ್ಥತಿ ವೀಕ್ಷಣೆಗೆ ಕೇಂದ್ರ ತಂಡ ಆಗಮನ ಹಿನ್ನೆಲೆ ಕಾವೇರಿ ಗಲಾಟೆ ಸ್ವಲ್ಪ ದಿನದಿಂದ ತಣ್ಣಗಾಗಿತ್ತು ಆದರೆ ಈಗ ಈಶಾನ್ಯ ಮಾರುತ ತಡವಾದ ಕಾರಣ ಕಾವೇರಿ ಹೋರಾಟಕ್ಕೆ ಕರ್ನಾಟಕ ಸಿದ್ಧವಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಈಶಾನ್ಯ ಮಾರುತದಲ್ಲಿ ಬದಲಾವಣೆಯಾಗಿದ್ದು, ಒಂದುವರೆ ತಿಂಗಳಾದರೂ ಮಳೆಯೇ ಇಲ್ಲದಂತಾಗಿದೆ. ಈ ಬಾರಿ ಮಳೆಯು ಶೇ. 81ರಷ್ಟು ಕೊರತೆಯುಂಟಾಗಿದೆ. ಅಕ್ಟೋಬರ್ ನಲ್ಲಿ ಇನ್ನು ಮುಂದಾದರೂ ಒಳ್ಳೆ ಮಳೆಯಾಗುತ್ತದೆ ಅಂದು ಕೊಂಡ ರೈತರಿಗೆ ತೊಂದರೆಯನ್ನುಂಟುಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ಮುಂಚಿತವಾಗಿಯೇ ಕಾನೂನು ಹೋರಾಟಕ್ಕೆ ಮುಂದಾಗಿದೆ.[ಕಾವೇರಿ ಮೇಲ್ಮನವಿ ಅರ್ಜಿ ಸಲ್ಲಿಕೆಯೇ ಸರಿಯಲ್ಲ ಎಂದಿದ್ದು ಏಕೆ?]

supreme

ಸರ್ಕಾರ ಮಳೆ ಕೊರತೆ ಹಿನ್ನೆಲೆ ತಮಿಳುನಾಡಿಗೆ ನೀರು ಬಿಡುವುದಕ್ಕೆ ಸಾಧ್ಯವಿಲ್ಲ ಎಂಬ ಮೇಲ್ಮನವಿಯನ್ನು ಸುಪ್ರೀಂ ಕೋರ್ಟಿಗೆ ನೀಡಲು ಚಿಂತಿಸಿದೆ. ಈ ಹಿಂದಿನಂತೆ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂಬ ವಾದವನ್ನು ಮತ್ತೆ ಸ್ಪಷ್ಟಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿರುವ ನಮ್ಮ ಕಾನೂನು ತಂಡದೊಂದಿಗೆ ಸಮಾಲೋಚಿಸಿದ್ದಾರೆ. ಈಶಾನ್ಯ ಮಾರುತ ಕಾವೇರಿಕೊಳ್ಳದ ಪ್ರದೇಶಗಳಲ್ಲಿ ಉತ್ತಮ ಮಳೆ ತರಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅದೂ ನಮ್ಮ ಭಾಗಕ್ಕಿಲ್ಲದಂತಾಗಿದೆ. ಮಳೆ ಕೊರತೆಯಿಂದಾಗಿ ಜಲಾಶಯಗಳ ಮಟ್ಟ ತೀವ್ರ ಕುಸಿದಿದೆ. ಅಲ್ಲದೆ ರಾಜ್ಯದಲ್ಲಿ ಬರ ಪರಿಸ್ಥಿತಿಯೂ ಇದೆ ಎಂಬ ಮಾಹಿತಿಯನ್ನು ಸುಪ್ರೀಂಗೆ ಕಾನೂನು ತಜ್ಞರು ಮನವರಿಕೆ ಮಾಡಿಕೊಡಲಿದ್ದಾರೆ.[ಕಾವೇರಿ ವಿವಾದ : ಮೇಲ್ಮನವಿ ಅರ್ಜಿಗಳ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್]

ಇನ್ನು ಒಂದು ವೇಳೆ ತಮಿಳುನಾಡಿಗೆ ನೀರು ಬಿಡಲೇಬೇಕು ಎಂದು ಸುಪ್ರೀಂ ಪಟ್ಟು ಹಿಡಿದೆರೆ ರಾಜ್ಯ ಯಾವ ರೀತಿ ಪರಿಸ್ಥಿತಿಯನ್ನು ನಿಭಾಯಿಸುತ್ತದೆ. ರೈತರಿಗೆ , ಬೆಂಗಳೂರು, ಮೈಸೂರು ಜನತೆಗೆ ನೀರನ್ನು ಹೇಗೆ ಒದಗಿಸುತ್ತದೆ ಎಂಬುದು ನಂತರ ಸ್ಪಷ್ಟವಾಗಲಿದೆ.

English summary
Cauvery dispute : state want new Appeals to supreme court. drought, drinking water various problem in karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X