ಸೆ. 14 ರಂದು ಶಾಲೆ, ಕಾಲೇಜುಗಳಿಗೆ ರಜೆ ಇಲ್ಲ

Posted By:
Subscribe to Oneindia Kannada

ಬೆಂಗಳೂರು, ಸೆ. 14: ಕಾವೇರಿ ವಿವಾದ ಹಿನ್ನಲೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ವಾತಾವರಣ ಮಂಗಳವಾರ ತಿಳಿಗೊಂಡಿದೆ. ಹಾಗಾಗಿ ಬುಧವಾರ(ಸೆ. 14) ದಂದು ಶಾಲೆ, ಕಾಲೇಜುಗಳು ಎಂದಿನಂತೆ ನಡೆಸಲು ಸೂಚಿಸಲಾಗಿದೆ. ಮಕ್ಕಳ ಭದ್ರತೆ ನಮ್ಮ ಜವಾಬ್ದಾರಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಾಳೆ (ಬುಧವಾರ) ಬಿಎಂಟಿಸಿ ಬಸ್‌ ಎಂದಿನಂತೆ ಸಂಚರಿಸಲಿದ್ದು, ಶಾಲೆ ಕಾಲೇಜುಗಳನ್ನು ಆರಂಭಿಸಲು ಸೂಚಿಸಲಾಗಿದೆ ಬಕ್ರೀದ್ ಹಬ್ಬ, ಗಣೇಶ ವಿಸರ್ಜನೆ, ಓಣಂ ಇರುವುದರಿಂದ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಭದ್ರತೆಗೆ ಇನ್ನೂ 10 ಕೇಂದ್ರದ ತುಕಡಿಗಳು ಬಂದಿದ್ದು, ಸುರಕ್ಷತೆ ಒದಗಿಸುತ್ತೇವೆ ಎಂದು ಆಯುಕ್ತ ಮೇಘರಿಕ್ ಹೇಳಿದರು.[ಬೆಂಗಳೂರಿನ ಪರಿಸ್ಥಿತಿ ಹೇಗಿದೆ?: ಪೊಲೀಸರ ಟ್ವೀಟ್ ನೋಡಿ]

Cauvery dispute: No holiday for schools and colleges 14 September

ಬೆಂಗಳೂರು ಡಿಸಿ ಹೇಳಿಕೆ: ಮಂಗಳವಾರ ಬೆಂಗಳೂರು ಸಹಜ ಸ್ಥಿತಿಗೆ ಮರಳಿದ್ದರಿಂದ ನಾಳೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಿದ್ದ ರಜೆಯನ್ನು ಜಿಲ್ಲಾಡಳಿತ ಹಿಂಪಡೆದಿದೆ ಎಂದು ನಗರ ಜಿಲ್ಲಾಧಿಕಾರಿ ವಿ ಶಂಕರ್ ಸ್ಪಷ್ಟಪಡಿಸಿದ್ದಾರೆ.[ಸೆ.14ರಂದು ಕರ್ನಾಟಕ ಬಂದ್ ಇಲ್ಲ : ವಾಟಾಳ್ ನಾಗರಾಜ್]

ನಗರದ 16 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದರಿಂದ ಜಿಲ್ಲಾಡಳಿತವು ಬುಧವಾರದಂದು ಕೂಡಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಆದರೆ, ಪೊಲೀಸ್ ಆಯುಕ್ತರ ಭರವಸೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದ ಕಾರಣ ರಜೆ ಘೋಷಣೆಯನ್ನು ಹಿಂಪಡೆಯಲಾಗಿದೆ.[ಬುಧವಾರ ರಾತ್ರಿ ತನಕ ನಿಷೇಧಾಜ್ಞೆ ಮುಂದುವರಿಕೆ]

ಖಾಸಗಿ ಶಾಲೆ, ಕಾಲೇಜು ಕಥೆ? : ಖಾಸಗಿ ಶಾಲೆ, ಕಾಲೇಜುಗಳಿಗೆ ನಾಳೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಇದೀಗ ಜಿಲ್ಲಾಡಳಿತ ರಜೆಯನ್ನು ಹಿಂಪಡೆದಿರುವುದರಿಂದ ಖಾಸಗಿ ಶಾಲೆಗಳ ರಜೆ ಬಗ್ಗೆ ಗೊಂದಲ ಮುಂದುವರೆದಿದೆ.

ಆಯಾ ಶಾಲೆಗಳ ಅಧಿಕಾರಿಗಳು ಈ ಬಗ್ಗೆ ನಿರ್ಧರಿಸಬಹುದಾಗಿದೆ. ಪೋಷಕರು ಶಾಲೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cauvery dispute: Karnataka government has not declared holiday for schools and colleges tomorrow(Sept 14). Private schools to take own call. Bengaluru police commissioner NS Megharikh has assured safety of school children said Bengaluru DC Shankar.
Please Wait while comments are loading...