ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಯವಿಟ್ಟು ಕ್ಷಮಿಸಿ ಎಂದು ಕನ್ನಡಿಗರ ಮುಂದೆ ಕೈಮುಗಿದ ಅಂಬಿ

By Mahesh
|
Google Oneindia Kannada News

ಬೆಂಗಳೂರು, ಸೆ. 28: 'ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೆ ಮತ್ತೆ ಅನ್ಯಾಯವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಈಗ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ಧರಾಗಲಿ' ಎಂದು ಮಾಜಿ ಸಚಿವ, ಮಂಡ್ಯ ಶಾಸಕ ಎಂಎಚ್ ಅಂಬರೀಶ್ ಅವರು ದಿಢೀರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾವೇರಿಗಾಗಿ ನಡೆದ ಪ್ರತಿಭಟನೆ, ಹೋರಾಟದಲ್ಲಿ ಪಾಲ್ಗೊಳ್ಳಲ್ಲದ ಅಂಬರೀಶ್ ಅವರ ವಿರುದ್ಧ ಮಂಡ್ಯದಲ್ಲಿ ಸಹಜವಾಗಿ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕಾಗಿ ಮಂಡ್ಯದ ರೈತರು ಹಾಗೂ ರಾಜ್ಯದ ಜನತೆ ಮುಂದೆ ಕ್ಷಮೆಯಾಚಿಸುತ್ತೇನೆ ಎಂದು ಅಂಬರೀಷ್ ಹೇಳಿದರು. ಸೆ.30ರಂದು ಸುಪ್ರೀಂಕೋರ್ಟಿನ ತೀರ್ಪು ನೋಡಿಕೊಂಡು ಮಂಡ್ಯಕ್ಕೆ ಭೇಟಿ ನೀಡುತ್ತೇನೆ.[ನಿರ್ವಹಣಾ ಮಂಡಳಿ ರಚನೆ, ಸುಪ್ರೀಂ ಪೀಠಗಳಲ್ಲೇ ದ್ವಂದ್ವ!]

Cauvery Dispute : Former Minister Mandya MLA Ambareesh Press conference Highlights

ಇವತ್ತು ನನ್ನ ದೌರ್ಭಾಗ್ಯ ಈ ಸಮಸ್ಯೆ ನಾನು ಇಲ್ಲದೇ ಇರುವಾಗ ಆಗಿದೆ. ನಾನು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗ್ಲಿಲ್ಲ ಅಂತ ನನ್ನ ಮನಸ್ಸಿನಲ್ಲೂ ಗಾಯ ಇದೆ. ಅದಕ್ಕೆ ನಾನು ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ ಎಂದರು.[ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!]

ಕಾವೇರಿ ಕರ್ನಾಟಕದ ಆಸ್ತಿ. ಮುಖ್ಯಮಂತ್ರಿಗಳು ಒಳ್ಳೆಯ ತೀರ್ಮಾನ ಮಾಡಿದ್ದಾರೆ. ಅದನ್ನ ಕೇಳಿ ಮನಸ್ಸಿಗೆ ಸ್ವಲ್ಪ ಸಂತೋಷ ಆಯ್ತು. ಹೀಗಾಗಿ ನಾನು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏನೇ ಆಗಲಿ, ಅಧಿಕಾರ ಹೋದರೂ ಪರ್ವಾಗಿಲ್ಲ, ನಾವು ಮಾತ್ರ ನೀರನ್ನ ಬಿಡಬಾರದು. ನಾನು ಕುಡಿಯಲು ನೀರು ಕೇಳುತ್ತಿದ್ದೇವೆ ಹೊರತು, ಸುಪ್ರೀಂ ಕೋರ್ಟ್ ಗೆ ಅವಮಾನ ಮಾಡುವ ಉದ್ದೇಶ ನಮ್ಮದಲ್ಲ.[ಕಾವೇರಿ ನೀರು ಬಿಡುವುದು ಬಿಡದಿರುವುದು ದೈವೇಚ್ಛೆ ಮೈಲಾರ್ಡ್!]

ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಬೇಕು. ಕನ್ನಡಿಗರ ಹಿತರಕ್ಷಣೆಗೋಸ್ಕರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಒಳ್ಳೆ ತೀರ್ಮಾನ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಅಂತ ಸುಪ್ರೀಂ ಕೋರ್ಟ್ ಈಗ ಹೇಳಿದೆ. ಇದನ್ನ ಕೇಳಿ ಖುಷಿ ಆಯ್ತು ಎಂದರು.[ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

English summary
Cauvery Dispute : Former minister and Mandya MLA Ambareesh addressed today(September 28, 2016) held press conference at his residency and explained why he was not able to participate in Cauvery agitation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X