ದೇವೇಗೌಡರ ಕಂಬನಿ: ಕಾವೇರಿ ವಿಷ್ಯದಲ್ಲಿ ಕರ್ನಾಟಕಕ್ಕೆ ಅನ್ಯಾಯ

Posted By:
Subscribe to Oneindia Kannada

ಬೆಂಗಳೂರು, ಸೆ. 28: ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಮರುಕಗೊಂಡು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಗದ್ಗದಿತರಾದ ಘಟನೆ ಬುಧವಾರ ಸಂಜೆ ನಡೆಯಿತು. ನಾನು ಈ ವಯಸ್ಸಿನಲ್ಲಿ ಅಳುವಂಥ ಪರಿಸ್ಥಿತಿ ಬಂತಲ್ಲ ಎಂದು ಕಣ್ಣೀರು ಒರೆಸಿಕೊಂಡಿದ್ದಾರೆ.

ತಮಿಳುನಾಡಿಗೆ ಮೂರು ದಿನಗಳಲ್ಲಿ 18,000 ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ಮಾತನಾಡಲು ಸುದ್ದಿಗೋಷ್ಠಿ ಕರೆದಿದ್ದರು. [2012ರಲ್ಲೂ ಕಣ್ಣೀರಿಟ್ಟಿದ್ದ ದೇವೇಗೌಡ್ರು]

ಪದ್ಮನಾಭನಗರದ ನಿವಾಸದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಹಠಮಾರಿ ಧೋರಣೆಯನ್ನು ಖಂಡಿಸಿ, ಪರೋಕ್ಷ ದಾಳಿ ನಡೆಸಿದರು. ಕುಡಿಯುವ ನೀರಿಗೂ ಬೆಲೆ ಇಲ್ಲದ್ದಂತಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. [ಗಳಗಳನೆ ಅಳುವ ಕರ್ನಾಟಕದ 5 ಮುಖ್ಯಮಂತ್ರಿಗಳು]

Cauvery Dispute: HD Deve Gowda sheds tears again

ನ್ಯಾಯಾಂಗಕ್ಕೆ ಅಗೌರವ ಸಲ್ಲಿಸಿಲ್ಲ: ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದು ನಿರ್ಣಯ ಕೈಗೊಂಡಿದೆಯೇ ಹೊರತು ಸುಪ್ರೀಂಕೋರ್ಟ್​ಗೆ ಅಗೌರವ ತೋರಿಲ್ಲ. ನಾನು ಕಾನೂನು ಪಂಡಿತ ಅಲ್ಲ. ಆದರೆ ಜನ ಸಾಮಾನ್ಯನಾಗಿ ಕೇಳುತ್ತೇನೆ.[ಸುಪ್ರೀಂಕೋರ್ಟ್ ಆದೇಶಕ್ಕೆ ಕರ್ನಾಟಕ ಬಗ್ಗಲೇಬೇಕು ಏಕೆ?]

ಸುಪ್ರೀಂಕೋರ್ಟ್ ಮತ್ತೆ ನೀರು ಬಿಡಬೇಕೆಂದು ತೀರ್ಪು ನೀಡುವುದು ಎಷ್ಟು ಸರಿ? ಬಿಟ್ಟ ನೀರು ವಾಪಸ್ ಬರುತ್ತದೆಯೇ? ಹೀಗಾಗಿ ಸುಪ್ರೀಂಕೋರ್ಟ್ ಎರಡೂ ರಾಜ್ಯದ ಜಲಾಶಯಗಳಿಗೆ ಪರಿಶೀಲನಾ ತಂಡ ಕಳುಹಿಸಿ ಎಲ್ಲಿ ಎಷ್ಟು ನೀರಿದೆ ಎನ್ನುವುದರ ಬಗ್ಗೆ ಏಕೆ ವರದಿ ತರಿಸಿಕೊಳ್ಳಬಾರದು? ಆ ಬಳಿಕ ತೀರ್ಪು ಕೊಟ್ಟರೆ ಒಳ್ಳೆಯದಲ್ಲವೇ? ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟ್ ತೀರ್ಪಬಂದ ಬಳಿಕ ಆಸ್ಪತ್ರೆಯಿಂದಲೇ ಅಭಿನಂದನೆ ಸಲ್ಲಿಸುತ್ತಾರೆ. ಅಲ್ಲೇ ಸಭೆ ಮಾಡುತ್ತಾರೆ. ಮೂರು ದಿನಗಳಲ್ಲಿ ನೀರು ಸಿಗದಿದ್ದರೆ ಬೆಳೆ ನಾಶ ಎಂದು ವಾದಿಸುತ್ತಾರಲ್ಲ, ಇಂಥ ಮೊಂಡುತನವನ್ನು ನನ್ನ 50 ವರ್ಷಗಳ ರಾಜಕೀಯ ಜೀವನದಲ್ಲಿ ಕಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ವಪಕ್ಷಗಳ ಸಭೆ ಹಾಗೂ ಮಂತ್ರಿ ಪರಿಷತ್ತಿನಲ್ಲಿ 'ಮುಂದಿನ ವಿಚಾರಣೆ ತನಕ ನೀರು ಬಿಡಬಾರದು' ಎಂಬ ಒಂದೇ ನಿರ್ಣಯ ಕೈಗೊಂಡಿದ್ದು, ನಾಳೆ ಉಮಾಭಾರತಿ ಅವರ ಮುಂದೆ ಅದನ್ನೇ ಪ್ರಸ್ತಾಪಿಸಲಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former HD Devegowda again shed tears for farmers. Deve Gowda reportedly was regretted for political game played by adamant Jayalalithaa cm of Tamil Nadu regarding sharing of Cauvery river water.
Please Wait while comments are loading...