ಬೆಂಗಳೂರಿನ ಎಲ್ಲೆಡೆ ಕರ್ಫ್ಯೂ ಹಿಂತೆಗೆತ: ಆಯುಕ್ತ ಮೇಘರಿಕ್

Posted By:
Subscribe to Oneindia Kannada

ಬೆಂಗಳೂರು, ಸೆ. 14: ಬೆಂಗಳೂರು ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ನಿಷೇದಾಜ್ಞೆಯನ್ನು ಬುಧವಾರ ಬೆಳಿಗ್ಗೆ 9 ಗಂಟೆಯಿಂದ ಹಿಂಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಘೋಷಿಸಿದ್ದಾರೆ.

ಬೆಂಗಳೂರಿನ ಆಯಾಕಟ್ಟು ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಲಾಗಿದೆ.

ಮೆಟ್ರೋ ಸೇವೆ, ಬಿಎಂಟಿಸಿ ಬಸ್ ಸಂಚಾರ, ಆಟೋ ರಿಕ್ಷಾ ಹಾಗೂ ಕ್ಯಾಬ್ ಗಳ ಚಾಲನೆ ಎಂದಿನಂತೆ ಸಂಚಾರ ಪ್ರಾರಂಭಿಸಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದು.

Curfew lifted in all 16 areas of Bengaluru says police commissioner N S Megharik.

34 ಕೆಎಸ್ ಆರ್ಪಿ, 13 ಸಿಎಆರ್, 10 ಸಿಎಪಿಎಫ್ ಜತೆಗೆ ಆರ್ಎ ಎಫ್ ಹಾಗೂ ಬೆಂಗಳೂರು ಪೊಲೀಸರು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಗಸ್ತು ತಿರುಗಿದ್ದು, ಬೆಂಗಳೂರು ಸಹಜ ಸ್ಥಿತಿಗೆ ಮರಳಲು ಕಾರಣರಾಗಿದ್ದಾರೆ.

ತುರ್ತು ಪರಿಸ್ಥಿತಿ ಎದುರಾದರೆ 100ಕ್ಕೆ ಕರೆ ಮಾಡಿ ಅಥವಾ ನಿಮಗೆ ಏನಾದರೂ ಕೇಳಬೇಕಿನಿಸಿದರೆ @BlrCityPolice ಟ್ವೀಟ್ ಮಾಡಿ ಅಥವಾ ವಾಟ್ಸಪ್ ನಂಬರ್ 9480801000 ಗೆ ಮೆಸೇಜ್ ಮಾಡಿ ಎಂದು ಬೆಂಗಳೂರು ಪೊಲೀಸರು ಕೇಳಿಕೊಂಡಿದ್ದಾರೆ.


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Curfew lifted in all 16 areas of Bengaluru says police commissioner N S Megharikh. #Curfew has been lifted from 9AM today(14-09-2016). Strong bandobust continues to prevent any mischief. Also "NO" bandh etc. In coming days ! tweeted NS Megharikh.
Please Wait while comments are loading...