ಕಾವೇರಿ ನೀರು ಬಿಡದಿರುವ ಬಗ್ಗೆ ಸೆ. 23ರಂದು ಅಧಿಕೃತ ಪ್ರಕಟಣೆ

Posted By:
Subscribe to Oneindia Kannada

ಬೆಂಗಳೂರು, ಸೆ. 22: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನ್ಯಾಯಯುತವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಬೇಡ. ತಮಿಳುನಾಡಿಗೆ ನೀರು ಬಿಡುವ ಅಗತ್ಯವಿಲ್ಲ ಎಂಬ ಒಮ್ಮತದ ನಿರ್ಧಾರವನ್ನು ವಿಶೇಷ ಅಧಿವೇಶನದ ನಂತರ ಪ್ರಕಟಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.[ಬಿಜೆಪಿ ನಾಯಕರೇ ನೀವಿಟ್ಟ ಹೆಜ್ಜೆ ತಪ್ಪು!]

ರಾಜ್ಯಪಾಲರಾದ ವಜುಭಾಯಿವಾಲಾ ಅವರನ್ನು ರಾಜಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಭೇಟಿ ಮಾಡಿದರು. ಕಾವೇರಿ ನದಿ ನೀರು ವಿವಾದ ಮತ್ತು ಶುಕ್ರವಾರ ವಿಧಾನ ಮಂಡಲ ಅಧಿವೇಶನ ಕರೆದಿರುವ ಕುರಿತು ಚರ್ಚೆ ನಡೆಸಿದರು. ಸಚಿವರಾದ ಮಹದೇವಪ್ಪ, ಮಹದೇವಪ್ರಸಾದ್, ಜಯಚಂದ್ರ ಮತ್ತಿತರರು ಇದ್ದರು.[ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]

Cauvery Dispute : Assembly special session to decide on September 23

ಸೆಪ್ಟೆಂಬರ್ 23ರಂದು ವಿಶೇಷ ಅಧಿವೇಶನ ಕರೆಯುವಂತೆ ಕೋರಿ ರಾಜ್ಯಪಾಲ ವಜುಭಾಯಿ ವಾಲರನ್ನು ಗುರುವಾರ ಬೆಳಗ್ಗೆ ಭೇಟಿ ಮಾಡಿದರು. ಸೆ.23ರ ಅಧಿವೇಶನ ಮುಗಿಯುವ ತನಕ ಕಾವೇರಿ ನೀರು ಹರಿಸದಿರಲು ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದರು.[ಬಂಗಾರಪ್ಪ ಬಗ್ಗೆ ಮಾತನಾಡ್ತೀರಿ, 1995ರಲ್ಲಿ ಪರಿಸ್ಥಿತಿ ಗೊತ್ತೇನ್ರಿ']

ನಂತರ ಮಾಜಿ ಮುಖ್ಯಮಂತ್ರಿ ಎಸ್ಸೆಂಕೃಷ್ಣರನ್ನು ಭೇಟಿ ಮಾಡಿ ಅವರ ಸಲಹೆ ಪಡೆದುಕೊಂಡರು. ಮಧ್ಯಾಹ್ನದ ನಂತರ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ ಅವರು ಎಐಸಿಸಿ ಮುಖಂಡರನ್ನು ಭೇಟಿ ಮಾಡಿ, ಕರ್ನಾಟಕದ ನಿಲುವನ್ನು ತಿಳಿಸಲಿದ್ದಾರೆ.[ಕಾವೇರಿಗಾಗಿ ಕೋಪ ಮರೆತು ಗೌಡ್ರ ಮನೆಗೆ ಬಂದ ಸಿದ್ದರಾಮಯ್ಯ]

ಈ ನಡುವೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಗಿ ಬಂದೋಬಸ್ತ್ ಮುಂದುವರೆಸಲಾಗಿದೆ. ಬೆಂಗಳೂರಿನಲ್ಲಿ ಮದ್ಯ ರಹಿತ ದಿನಗಳು ಸೆಪ್ಟೆಂಬರ್ 22 ರಿಂದ 25ರ ತನಕ ಮುಂದುವರೆಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister of Karnataka, Siddaramaiah meets Governor Vajubhai Vaghela. Requests him to convene a special legislative session on Cauvery on September 23.
Please Wait while comments are loading...