ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಕ್ಕು ಅಡ್ಡ ಬಂತು, ಮೆಟ್ರೋ ರೈಲೇ ನಿಂತು ಬಿಡ್ತು: ಶಕುನ ಭೀತಿನಾ?

By Nayana
|
Google Oneindia Kannada News

Recommended Video

ಬೆಕ್ಕಿನ ಕಾಟದಿಂದ ವಿಳಂಬವಾದ ನಮ್ಮ ಮೆಟ್ರೋ ಸಂಚಾರ | Oneindia Kannada

ಬೆಂಗಳೂರು, ಸೆಪ್ಟೆಂಬರ್ 8: ನಮ್ಮ ಮೆಟ್ರೋ ಸಂಚರಿಸುವ ವೇಳೆ ಪಾರಿವಾಳ, ಹದ್ದುಗಳು ಅಡ್ಡ ಬರುವುದು ಸಾಮಾನ್ಯ ಆದರೆ ಮೊದಲ ಬಾರಿಗೆ ಬೆಕ್ಕು ಅಡ್ಡ ಬಂದಿದ್ದು ಆ ಕಾರಣದಿಂದ ಮೆಟ್ರೋ ಸಂಚಾರವನ್ನೇ ಸ್ಥಗಿತಗೊಳಿಸಿರುವ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

ಮೆಟ್ರೋ ಬೈಕ್ ಇನ್ನು ಬೌನ್ಸ್ ಬೈಕ್ : ಜತೆಗೆ ಸಿಗುತ್ತೆ ಬೈಸಿಕಲ್ ಮೆಟ್ರೋ ಬೈಕ್ ಇನ್ನು ಬೌನ್ಸ್ ಬೈಕ್ : ಜತೆಗೆ ಸಿಗುತ್ತೆ ಬೈಸಿಕಲ್

ಶುಕ್ರವಾರ ರಾತ್ರಿ ವೇಳೆ ಜಾಲಹಳ್ಳಿ ಮೆಟ್ರೋ ಹಳಿಯ ಮೇಲೆ ಬಿಳಿಯ ಬೆಕ್ಕೊಂದು ಪ್ರತ್ಯಕ್ಷವಾದ ಕಾರಣ ಸಿಬ್ಬಂದಿ ಗಲಿಬಿಲಿಗೊಂಡು ಮೆಟ್ರೋ ಸಂಚಾರವನ್ನೇ ನಾಲ್ಕೈದು ನಿಮಿಷ ಸ್ಥಗಿತಗೊಳಿಸಿದರು.

ನಮ್ಮ ಮೆಟ್ರೋಗೆ ಹೋದ ಜಮೀನು ಭದ್ರಾ-ಕಾಳಿ ಅರಣ್ಯದಲ್ಲಿ ಸಿಕ್ತು ನಮ್ಮ ಮೆಟ್ರೋಗೆ ಹೋದ ಜಮೀನು ಭದ್ರಾ-ಕಾಳಿ ಅರಣ್ಯದಲ್ಲಿ ಸಿಕ್ತು

ಆದರೆ ಬೆಕ್ಕು ಅಡ್ಡ ಬಂದಿದ್ದಕ್ಕೆ ಶಕುನ ಭೀತಿಯಿದ ರೈಲನ್ನು ನಿಲ್ಲಿಸಿಲ್ಲ ಬದಲಾಗಿ ಬೆಕ್ಕಿಗೆ ಪ್ರಾಣಕ್ಕೆ ಅಪಾಯವಾಗಬಹುದು ಎನ್ನುವ ಕಾರಣಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅತ್ತಿಂದಿತ್ತ ಓಡಾಡುತ್ತಿದ್ದ ಬೆಕ್ಕು ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಗಾಬರಿಗೊಳಿಸಿತು. ರೈಲಿಗೆ ವಿದ್ಯುತ್ ನೀಡುವ ಹಳಿಯ ಪಕ್ಕದ ಥರ್ಡ್ ರೇಲ್ ಸ್ಪರ್ಶಿಸಿದರೆ ಬೆಕ್ಕು ಸಾಯುತ್ತದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು.

Cat stops metro service for few minutes

ಬೇರೆ ನಿಲ್ದಾಣಗಳಿಗೆ ಸೂಚನೆ ನೀಡಿ ಅಷ್ಟೇ ನಿಮಿಷಗಳ ಕಾಲ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮೆಜೆಸ್ಟಿಕ್ ಬಂದ ಹಸಿರು ಹಾಗೂ ನೇರಳೆ ರೈಲುಗಳಲ್ಲಿ ಜನರು ತುಂಬಿಕೊಂಡರೂ ಸುಮಾರು 2 ನಿಮಿಷ ಹೊರಡಲಿಲ್ಲ.

ನಾಲ್ಕು ಮೆಟ್ರೋ ನಿಲ್ದಾಣಗಳಲ್ಲಿ ಇ-ಚಾರ್ಜಿಂಗ್ ಘಟಕ ವಾರದಲ್ಲಿ ಶುರು ನಾಲ್ಕು ಮೆಟ್ರೋ ನಿಲ್ದಾಣಗಳಲ್ಲಿ ಇ-ಚಾರ್ಜಿಂಗ್ ಘಟಕ ವಾರದಲ್ಲಿ ಶುರು

ಥರ್ಡ್ ರೇಲ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ನಂತರ ಹಳಿಗೆ ಇಳಿದು ಸಿಬ್ಬಂದಿ ಬೆಕ್ಕಿಗಾಗಿ ಹುಡುಕಾಡಿದರೂ ಎಲ್ಲೋ ಒಮ್ಮೊಮ್ಮೆ ಸ್ವರ ಕೇಳುತ್ತಿತ್ತು ಬಳಿಕ ಮಾಯವಾಗುತ್ತಿತ್ತು, ಒಟ್ಟಿನಲ್ಲಿ ಈ ಕಾರಣದಿಂದಾಗಿ ಶುಕ್ರವಾರ ರಾತ್ರಿ ಎಲ್ಲಾ ರೈಲುಗಳ ಮೆಟ್ರೋ ಸಂಚಾರ ಹತ್ತುನಿಮಿಷಗಳ ಕಾಲ ವಿಳಂಬವಾಗಿತ್ತು.

English summary
Metro service was interrupted for few minutes near Jalahalli metro station while a cat was found in the track at around 7.30pm on Friday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X