ಬಿಎಂಟಿಸಿ ಬಸ್ಸುಗಳಲ್ಲಿ ಟಿಕೆಟ್ ಪಡೆಯಲು ಸ್ಮಾರ್ಟ್‌ ಕಾರ್ಡ್

Posted By:
Subscribe to Oneindia Kannada

ಬೆಂಗಳೂರು, ಜೂನ್ 15 : ಬಿಎಂಟಿಸಿ ಬಸ್ಸುಗಳಲ್ಲಿ ಇನ್ನು ಮುಂದೆ ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣ ಮಾಡಬಹುದಾಗಿದೆ. ಚಿಲ್ಲರೆ ಸಮಸ್ಯೆ, ಹಣ ನೀಡಿ ಟಿಕೆಟ್‌ ಖರೀದಿಸುವ ಜಂಜಾಟವನ್ನು ಈ ಸ್ಮಾರ್ಟ್ ಕಾರ್ಡ್ ತಪ್ಪಿಸಲಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಆಕ್ಸಿಸ್ ಬ್ಯಾಂಕ್ ಜಂಟಿಯಾಗಿ ಸ್ಮಾರ್ಟ್ ಕಾರ್ಡ್ ಹೊರ ತಂದಿವೆ. ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಮಂಗಳವಾರ ಸ್ಮಾರ್ಟ್‌ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ['ಚತುರ ಸಾರಿಗೆ' ವ್ಯವಸ್ಥೆಗೆ ಚಾಲನೆ ನೀಡಿದ ಸಿದ್ದರಾಮಯ್ಯ]

bmtc

'ಪ್ರಯಾಣಿಕರಿಗೆ ಸಮಸ್ಯೆ ರಹಿತ ಪ್ರಯಾಣ ಅನುಭವ ಒದಗಿಸಲು ಬಿಎಂಟಿಸಿ-ಆ್ಯಕ್ಸಿಸ್‌ ಬ್ಯಾಂಕ್‌ ಒಪ್ಪಂದ ಮಾಡಿಕೊಂಡಿದ್ದು, ಸ್ಮಾರ್ಟ್‌ ಕಾರ್ಟ್ ಬಿಡುಗಡೆ ಮಾಡಿವೆ. ವಿಶ್ವದ ಹಲವು ರಾಷ್ಟ್ರಗಳು ನಗದು ರಹಿತ ಪ್ರಯಾಣ ವ್ಯವಸ್ಥೆಯತ್ತ ಮುಖ ಮಾಡುತ್ತಿವೆ, ಬೆಂಗಳೂರಿನಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬಂದಿದೆ' ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕರೂಪ್‌ ಕೌರ್‌ ಹೇಳಿದರು. [ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]

ಶಾಪಿಂಗ್ ಮಾಡಬಹುದು : 'ಈ ಸ್ಮಾರ್ಟ್‌ ಕಾರ್ಟ್‌ ಬಸ್ಸುಗಳಲ್ಲಿ ಪ್ರಯಾಣಿಸಲು ಮಾತ್ರ ಅನುಕೂಲವಾಗುವುದಿಲ್ಲ.
ಶಾಪಿಂಗ್‌, ಕ್ಯಾಬ್‌, ಹೋಟೆಲ್‌ ವಹಿವಾಟಿನಲ್ಲಿಯೂ ಬಳಸುವಂತೆ ವ್ಯವಸ್ಥೆ ಮಾಡಲಾಗಿದೆ' ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್‌ ಆನಂದ್‌ ತಿಳಿಸಿದರು. [ಬಿಎಂಟಿಸಿಯ ಐಟಿಎಸ್‌ ಯೋಜನೆ ಬಗ್ಗೆ ತಿಳಿಯಿರಿ]

ಕಾರ್ಡ್‌ ಎಲ್ಲಿ ಸಿಗುತ್ತದೆ? : ಬಿಎಂಟಿಸಿಯ ಕಚೇರಿ, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಸ್ಮಾರ್ಟ್‌ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ರಿಚಾರ್ಜ್‌ ಮಾಡುವ ಮಾದರಿಯಲ್ಲಿ ಹಣ ನೀಡಿ ಈ ಕಾರ್ಡ್‌ ಅನ್ನು ಆ್ಯಕ್ಸಿಸ್‌ ಬ್ಯಾಂಕ್‌ ಇಲ್ಲವೇ ಬಿಎಂಟಿಸಿ ಕೇಂದ್ರಗಳಲ್ಲಿ ಟಾಪ್‌ ಅಪ್‌ ಮಾಡಿಕೊಳ್ಳಬೇಕು.

ಬಳಕೆ ಹೇಗೆ? : ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಪಡೆಯಲು ಹಣ ಪಾವತಿ ಮಾಡಬೇಕಿಲ್ಲ.
ಕಂಡಕ್ಟರ್‌ ಬಳಿ ಇರುವ ಯಂತ್ರಕ್ಕೆ ಕಾರ್ಡ್‌ ಹಾಕಿದರೆ, ಹಣ ಪಾವತಿಯಾಗುತ್ತದೆ. ದೇಶದ 12 ಲಕ್ಷ ಮಳಿಗೆಗಳಲ್ಲಿ ಇದನ್ನು ಬಳಸಿ ಶಾಪಿಂಗ್ ಸಹ ಮಾಡಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bengaluru Metropolitan Transport Corporation (BMTC) in association with Axis Bank launched smart card that will allow users to pay not only for bus rides, but also use it at any other merchant outlet, similar to their debit cards.
Please Wait while comments are loading...