ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಲ್ಲವಿ ಐಎಎಸ್ ದೂರು: ಸಿಎಂಎಚ್​ ಆಸ್ಪತ್ರೆ ವಿರುದ್ಧ ಎಫ್ಐಆರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಖಾಸಗಿ ಆಸ್ಪತ್ರೆಯ ವೈದ್ಯರು, ತಮ್ಮ ಮಗುವಿಗೆ ಹಾಕಿದ ಪೋಲಿಯೋ ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಐಎಎಸ್ ಅಧಿಕಾರಿ ಪಲ್ಲವಿ ಆಕುರಾತಿ ಅವರು ದೂರು ನೀಡಿದ್ದಾರೆ. ಆರೋಪಿತ ವೈದ್ಯರು ಹಾಗೂ ನರ್ಸ್ ಸಿಬ್ಬಂದಿಗಳ ವಿರುದ್ಧ ಇಂದಿರಾನಗರ ಪೊಲೀಸರು ಎಫ್ಐಆರ್ ಹಾಕಲಾಗಿದೆ.

ಸರಿಯಾಗಿ ಹಾಕದೆ ಅದರ ಆರೋಗ್ಯ ಹಾಳಾಗಿದೆ ಎಂದು ಐಎಎಸ್​ ಅಧಿಕಾರಿ ಪಲ್ಲವಿ ಅಕುರಾತಿ ಆಸ್ಪತ್ರೆ ವೈದ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಕರ್ನಾಟಕದ ಪೋಲಿಯೋ ಲಸಿಕೆಯಲ್ಲಿ ವೈರಸ್ ಇಲ್ಲ: ಸರ್ಕಾರ ಸ್ಪಷ್ಟನೆಕರ್ನಾಟಕದ ಪೋಲಿಯೋ ಲಸಿಕೆಯಲ್ಲಿ ವೈರಸ್ ಇಲ್ಲ: ಸರ್ಕಾರ ಸ್ಪಷ್ಟನೆ

ಪಲ್ಲವಿ ತಮ್ಮ 10 ವಾರದ ಮಗುವಿಗೆ ಲಸಿಕೆ ಹಾಕಿಸಲು ಇಂದಿರಾನಗರದ ಸಿಎಂಎಚ್​ ಆಸ್ಪತ್ರೆಗೆ ಹೋಗಿದ್ದರು. ಲಸಿಕೆ ಹಾಕಿಸಿದ ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು ಪಲ್ಲವಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಮಗುವಿಗೆ ಅವಧಿ ಮೀರಿದ ಲಸಿಕೆ ಹಾಕಿದ್ದರಿಂದ ಅದರ ಆರೋಗ್ಯ ಕೆಟ್ಟಿದೆ ಎಂದು ವೈದ್ಯ ಸುರೇಶ್​ಕುಮಾರ್​, ನರ್ಸ್​ ಕೃಷ್ಣಮ್ಮ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Case against Private hospital by IAS officer Pallavi Akurathi

ಪಲ್ಲವಿ ಅಕುರಾತಿ ಈ ಹಿಂದೆ ಮಗುವಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ಖಾಸಗಿ ಆಸ್ಪತ್ರೆ ವಿರುದ್ಧ, ಮನೆಯ ಒಳಚರಂಡಿ ದುರಸ್ತಿ ಮಾಡಿಲ್ಲ ಎಂದು ಬಿಬಿಎಂಪಿ ಅಧಿಕಾರಿ ವಿರುದ್ಧ ದೂರು ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.

English summary
An IAS officer Pallavi Akurathi filed a police complaint against the Chinmaya Mission Hospital, Indiranagar, which she said refused to reveal the name of an oral poliovirus vaccine (OPV) given to her 10-week-old baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X