ಕಾರ್ಗಿಲ್ ಕಂಪನಿಯಿಂದ ಸಾಮಾಜಿಕ ಸೇವೆ ಪರಿಶೀಲನೆಗೂ ಮೊಬೈಲ್ ಆಪ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 25: 'ಕಾರ್ಗಿಲ್' ಕಂಪನಿಯು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ನಂಬಿಕೆ ಇರಿಸಿದೆ. ಇದೀಗ ತಂತ್ರಜ್ಞಾನದ ಮೂಲಕ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಅಡಿ ಕೈಗೊಂಡ ಯೊಜನೆಗಳ ಅನುಷ್ಠಾನ ಹೇಗಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಅನುಕೂಲವಾಗುವಂಥ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಲಾಗಿದೆ.

ಕಾರ್ಗಿಲ್ ಕಂಪನಿಯು ಇದಕ್ಕಾಗಿ ನೆಕ್ಸ್ಟ್ ಜೆನ್ ಕಂಪನಿ ಸಹಭಾಗಿತ್ವದಲ್ಲಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದೆ. ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮದಡಿ ಕೈಗೊಂಡ ಕಾರ್ಯಕ್ರಮಗಳ ಮಾಹಿತಿ, ವಾಸ್ತವ ಸ್ಥಿತಿ, ಅಂಕಿ-ಅಂಶವನ್ನು ಅರಿಯಲು ಪಿ3 ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಇದರ ಪೇಟೆಂಟ್ ನೆಕ್ಸ್ಟ್ ಜೆನ್ ದಾಗಿದ್ದು, ಕರ್ನಾಟಕದಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಪ್ರಾಯೋಗಿಕವಾಗಿ ಮೊದಲು ಜಾರಿಯಾಗುತ್ತದೆ.[ಸೀಗೇಹಳ್ಳಿ ಕೆರೆ ದತ್ತು ಸ್ವೀಕರಿಸಿದ ಯುನೈಟೆಡ್ ವೇ ಬೆಂಗಳೂರು]

ಈ ಕೆಲಸವು ಕಾರ್ಗಿಲ್ ಹಾಗೂ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಸಹಯೋಗದಲ್ಲಿ ನಡೆಯಲಿದೆ. ದೊಡ್ಡಬಳ್ಳಾಪುರದ ಇಪ್ಪತ್ತೈದು ಹಳ್ಳಿಗಳಲ್ಲಿ ಹದಿನೈದು ಸಾವಿರ ಮಂದಿ (ಮಕ್ಕಳು, ಮಹಿಳೆಯರು ಮತ್ತು ಯುವ ಸಮೂಹ) ಬದುಕನ್ನು ಉತ್ತಮಗೊಳಿಸಲು ಕಾರ್ಗಿಲ್ ಕಂಪನಿ ಗುರಿ ಹಾಕಿಕೊಂಡಿದೆ.

Cargill monitors CSR project through a mobile app

ಸರಕಾರ ನಡೆಸುವ ಐದು ಅಂಗನವಾಡಿಯಲ್ಲಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡುವುದು, ಬೆಂಗಳೂರಿನ ರಾಚೇನಹಳ್ಳಿ ಕೆರೆ ಜೀರ್ಣೋದ್ಧಾರ, ಇಪ್ಪತ್ತೈದು ಹಳ್ಳಿಗಳಲ್ಲಿ ಆರೋಗ್ಯ ಕಾಳಜಿಗಾಗಿ ಮೊಬೈಲ್ ಹೆಲ್ತ್ ವ್ಯಾನ್, ನಲವತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನಾಲ್ಕು ಸರಕಾರಿ ಶಾಲೆಗಳಲ್ಲಿ ಸೌಕರ್ಯ ಹೆಚ್ಚಿಸುವುದಕ್ಕೆ ಸಹಾಯ, ಮಹಿಳೆಯರ ಜೀವನ ಉತ್ತಮಗೊಳಿಸಲು ಅನುಕೂಲ ಮಾಡಿಕೊಡುವುದು ಈ ಯೋಜನೆಯಲ್ಲಿ ಒಳಗೊಂಡಿದೆ.[ಕೌದೇನಹಳ್ಳಿ ಕೆರೆಗೆ ಮರಳಿವೆ ಚೆಂದದ ಪಕ್ಷಿಗಳು...]

ಕಾರ್ಗಿಲ್ ಕಂಪನಿಯ ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ರಾಬರ್ಟ್ ಶುಬರ್ಟ್ ಹೇಳುವ ಪ್ರಕಾರ, ದೊಡ್ಡಬಳ್ಳಾಪುರದಲ್ಲಿ ನಾವು ಕೆಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಶಿಕ್ಷಣ, ಆರೋಗ್ಯ ಹಾಗೂ ಜೀವನಾವಶ್ಯಕ ಅನುಕೂಲಗಳನ್ನು ಒದಗಿಸುವುದು ನಮ್ಮ ಉದ್ದೇಶ. ಈಗ ಹೊಸ ಮೊಬೈಲ್ ಅಪ್ಲಿಕೇಷನ್ ನಿಂದ ನಾವು ಜಾರಿಗೊಳಿಸಿದ ಯೋಜನೆಗಳ ಸ್ಥಿತಿ ಅರಿಯಲು ತುಂಬ ಅನುಕೂಲವಾಗುತ್ತದೆ ಎಂದು ಹೇಳಿದರು.

Cargill monitors CSR project through a mobile app

ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮನೀಷ್ ಮೈಕೆಲ್ ಮಾತನಾಡಿ, ಬೆಂಗಳೂರಿನಲ್ಲಿ ಕಾರ್ಗಿಲ್ ಕಂಪನಿ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಕೈಗೊಳ್ಳುವ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಸಹಭಾಗಿತ್ವ ಇರೋದು ಸಂತೋಷದ ವಿಚಾರ.[ಪರಿಸರ ಜಾಗೃತಿ ಸಾರಿದ ನಂದಿ ಹಿಲ್ಲಥಾನ್]

ಕಂಪನಿಯ ಬದ್ಧತೆ ತುಂಬ ಚೆನ್ನಾಗಿದೆ. ಇನ್ನು ಹೊಸ ಮೊಬೈಲ್ ಅಪ್ಲಿಕೇಷನ್ ನಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸಗಳಾಗುತ್ತವೆ. ಇನ್ನು ತುಂಬ ಪರಿಣಾಮಕಾರಿಯಾದ ಕೆಲಸ ಮಾಡುವುದೇ ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಹೆಗ್ಗುರುತು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cargill in India has partnered with NextGen, India’s first CSR and sustainability management platform to ensure streamlined data collection and reporting of progress of CSR programs on-ground, real time visibility through a mobile app p3. It has been applied as a pilot for an integrated development project in Karnataka.
Please Wait while comments are loading...