ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದಿಬದಿ ಪ್ರಾಣಿಗಳ ಸಂರಕ್ಷಣೆಗೆ ಮನಮಿಡಿದ ಗ್ಲೋಬಲ್ ಗಿವಿಂಗ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಬೆಂಗಳೂರಿನ ಬೀದಿಬದಿಯ ಪ್ರಾಣಿಗಳನ್ನು ಸಂರಕ್ಷಿಸಲು ಚಾರ್ಲಿಸ್ ಎನಿಮಲ್ ರಿಹ್ಯಾಬಿಲಿಟೇಶನ್ ಸೆಂಟರ್ (ಕೇರ್) ಸಂಸ್ಥೆಯು ಬೀದಿಬದಿ ಪ್ರಾಣಿಗಳ ಚಿಕಿತ್ಸಾ ಕೇಂದ್ರ ಆರಂಭಿಸಲು ಮುಂದಾಗಿದೆ.

ಸಂದೀಪ್ ಉನ್ನಿಕೃಷ್ಣನ್ ಸ್ಮಾರಕಫಲಕ ಧ್ವಂಸ: ಸಂಸದ ರಾಜೀವ್ ಆಕ್ರೋಶ ಸಂದೀಪ್ ಉನ್ನಿಕೃಷ್ಣನ್ ಸ್ಮಾರಕಫಲಕ ಧ್ವಂಸ: ಸಂಸದ ರಾಜೀವ್ ಆಕ್ರೋಶ

ಇದರೊಂದಿಗೆ ಜಾಗತಿಕ ಸ್ವಯಂಸೇವಾ ಸಂಸ್ಥೆ ಗ್ಲೋಬಲ್ ಗಿವಿಂಗ್ ಕೈಜೋಡಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಕಳೆದ ಐದು ವರ್ಷಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಬೀದಿಬದಿಯ ಅನಾಥ, ಗಾಯಗೊಂಡ, ರೋಗಪೀಡಿತ ಪ್ರಾಣಿಗಳಿಗೆ ಶುಶ್ರೂಷೆ ಮೂಲಕ ಪುನರ್ವಸತಿ ಕಲ್ಪಿಸುತ್ತಿರುವ ಕೇರ್ ಸಂಸ್ಥೆಯು ಐದು ಸಾವಿರ ಡಾಲರ್ ವೆಚ್ಚದಲ್ಲಿ ಟ್ರೌಮಾ ಕೇರ್ ಸೆಂಟರ್ ಆರಂಭಿಸಲು ಮುಂದಾಗಿದೆ.

ಅದಕ್ಕಾಗಿ ದಾನಿಗಳಿಂದ ಐದು ಸಾವಿರ ಡಾಲರ್ ಗಳ ಹಣವನ್ನು ಸಂಗ್ರಹಿಸಲು ಮುಂದಾಗಿತ್ತು, ಅದಕ್ಕೆ ಸ್ಪಂದಿಸಿ ಈಗಾಗಲೇ 5,800 ಡಾಲರ್ ಗೂ ಹೆಚ್ಚು ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗಿದೆ.

CARE plans for trauma center for street animals in Bengaluru

ಕೇರ್ ಸಂಸ್ಥೆಯ ಕಾರ್ಯವನ್ನು ಮೆಚ್ಚಿರುವ ಜಾಗತಿಕ ಸಂಸ್ಥೆ ಗ್ಲೋಬಲ್ ಗಿವಿಂಗ್ ಇದೀಗ ಕೇರ್ ನ ಐದು ಸಾವಿರ ಡಾಲರ್ ಗೆ ಮ್ಯಾಚಿಂಗ್ ಡೊನೇಶನ್ ಆಗಿ ಮತ್ತೆ 10 ಸಾವಿರ ಡಾಲರ್ ನ್ನು ಒದಗಿಸಲು ಮುಂದಾಗಿದೆ.

ಸುಪ್ರೀಂ ತೀರ್ಪು ಖಾಸಗಿತನದ ಹಕ್ಕಿನ ಕಡೆಗೆ ಮಹತ್ವದ ಹೆಜ್ಜೆ: ರಾಜೀವ್ ಸುಪ್ರೀಂ ತೀರ್ಪು ಖಾಸಗಿತನದ ಹಕ್ಕಿನ ಕಡೆಗೆ ಮಹತ್ವದ ಹೆಜ್ಜೆ: ರಾಜೀವ್

ಜಾಗತಿಕ ಕ್ರೌಡ್ ಫಂಡಿಂಗ್ ಕಮ್ಯುನಿಟಿಯಲ್ಲಿ ಹೆಸರು ಮಾಡಿರುವ ಗ್ಲೋಬಲ್ ಗಿವಿಂಗ್ ಸೆಪ್ಟೆಂಬರ್ ತಿಂಗಳು ಪೂರ್ತಿ ಕೇರ್ ಸಂಸ್ಥೆಗೆ ಹೇರಳ ಧನ ಸಹಾಯವನ್ನು ಸಾರ್ವಜನಿಕರಿಂದ ಆಹ್ವಾನಿಸಿದೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೇರ್ ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಗ್ಲೋಬಲ್ ಲಿವಿಂಗ್ ಕೈಜೋಡಿಸುತ್ತಿರುವುದು ಶ್ಲಾಘನೀಯ, ಬೆಂಗಳೂರಿನ ಹೃದಯವಂತ ನಾಗಕರಿಕರು ಹೆಚ್ಚು ಪ್ರಮಾಣದಲ್ಲಿ ಮ್ಯಾಚಿಂಗ್ ಗ್ರ್ಯಾಂಟ್ ಡೊನೇಶನ್ ಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

English summary
Rehabilitation of street animals is the Mantra of CARE, non profitable agency in Bangalore. The institution is planning for a trauma center for street animals. Global Giving joining hands with CARE by crowd funding for the cause.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X