ಜೂಮ್ ಕಾರ್ ಪಲ್ಟಿ: ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 09: ಮೂವರು ವಿದ್ಯಾರ್ಥಿಗಳನ್ನು ಬಲಿತೆಗೆದುಕೊಳ್ಳಲು ಜವರಾಯ ಕಾರಿನಲ್ಲಿಯೇ ಕಾದು ಕುಳಿತಿದ್ದು ವಿದ್ಯಾರ್ಥಿಗಳಿಗೇ ಕೊನೆಗೂ ತಿಳಿಯಲೇ ಇಲ್ಲ. ಕಾರು ಅಪಘಾತಕ್ಕೀಡಾಗಿ ಮೂವರು ವಿದ್ಯಾರ್ಥಿಗಳ ಪ್ರಾಣಪಕ್ಷಿ ಸ್ಥಳದಲ್ಲೇ ಹಾರಿಹೋಯಿತು.

ಕಾರು ಅಪಘಾತಕ್ಕೀಡಾಗಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಗರದ ನೈಸ್ ರಸ್ತೆಯ ಬನ್ನೇರುಘಟ್ಟ ಜಂಕ್ಷನ್ ಬಳಿ ಶುಕ್ರವಾರ ಸಂಭವಿಸಿದೆ.

ಕಾರ್ ನಂ.ಕೆಎ05ಎಜಿ1043 ಜೂಮ್ ಕಾರ್ ನಲ್ಲಿ ತೆರಳುತ್ತಿದ್ದರು. ಬೇಗೂರು ಕೊಪ್ಪ ಬ್ರಿಗೇಡ್ ಸಮೀಪ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ನಿಯಂತ್ರಣ ಸಿಗದೆ ಕಾರು ಪಲ್ಟಿಯಾಗಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರ್ಷ, ಹರ್ಷಿತಾ, ಶ್ರುತಿ ಮೃತ ದುರ್ದೈವಿಗಳು.

Car over turns in NICE road claims three students life

ಅತಿಯಾದ ವೇಗವೇ ವಿದ್ಯಾರ್ಥಿಗಳ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ, , ಮೂವರು ಹುಡುಗಿಯರು ಹಾಗೂ ಮೂವರು ಹುಡುಗರು ಇದ್ದರು ಎನ್ನಲಾಗಿದೆ. ಹರ್ಷ, ಹರ್ಷಿತಾ, ಶ್ರುತಿ ಮೃತ ದುರ್ದೈವಿಗಳು, ಅಲಾಯನ್ಸ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ವಿಜಯಶ್ರೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಚಾಲನೆ ವೇಳೆ ಮದ್ಯ ಸೇವಿಸರಲಿಲ್ಲ ಎಂದು ತಿಳಿದುಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AS a car over turned at Bannerghatta junction in NICE road three students were died on Friday. Students are identifie as Harshita, Harsha, shruthi of Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ