ದಯವಿಟ್ಟು ತಬ್ಕೊತಿಯಾ ಅಂದ ಮಣಿಕಾಂತ ಆದ ಅಂದರ್

Posted By:
Subscribe to Oneindia Kannada

ಬೆಂಗಳೂರು, ಜನವರಿ 11 : "ನನ್ನನ್ನು ದಯವಿಟ್ಟು ತಬ್ಕೊತಿಯಾ" ಇಂಥ ಪ್ರಶ್ನೆಯನ್ನು ಏಕಾಂತದಲ್ಲಿ ಪ್ರೇಯಸಿಗೋ, ಪತ್ನಿಗೋ ಅಥವಾ ಆತ್ಮೀಯ ಸ್ನೇಹಿತೆಗೋ ಕೇಳಿದರೆ ಯಾವುದೇ ವಿವಾದ ಇರುತ್ತಿರಲಿಲ್ಲ. ಆದರೆ, ಶಾಲೆಗೆ ಹೋಗುವ ಹೆಣ್ಣು ಮಕ್ಕಳನ್ನು ಕೇಳಿದರೆ?

ಇಂಥದೊಂದು ಲಜ್ಜೆಗೇಡಿ ಕೆಲಸವನ್ನು ಕಾಮಾತುರವಿರುವ 22 ವರ್ಷದ ಯುವಕನೊಬ್ಬ ಇಬ್ಬರು ಅಪ್ರಾಪ್ತ ವಯಸ್ಕ ಶಾಲಾ ಬಾಲಕಿಯರಿಗೆ ಕೇಳಿ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಾನೆ. ಪೊಲೀಸರು ಆತನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಿ ಬಂಧಿಸಿದ್ದಾರೆ.[ಮದ್ದೂರಲ್ಲಿ ಕಾಮುಕನಿಗೆ ಬಿತ್ತು ಗೂಸಾ!]

Can you please hug me, asks man, arrested in Bengaluru

ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳಿಗೆ ತಬ್ಬಿಕೊಳ್ಳಿರೆಂದು ಕೇಳಿ ಸಿಕ್ಕಿಬಿದ್ದವನ ಹೆಸರು ಮಣಿಕಾಂತ. ಆ ಹೆಣ್ಣುಮಕ್ಕಳ ಪೋಷಕರು ಪೊಲೀಸರಿಗೆ ಈತನ ನಡವಳಿಕೆಯನ್ನು ಪ್ರಶ್ನಿಸಿ ದೂರು ನೀಡಿದ ಮೇಲೆ ಮಹಾಲಕ್ಷ್ಮಿ ಲೇಔಟ್ ನಿವಾಸಿ ಮಣಿಕಾಂತನನ್ನು ಪೊಲೀಸರು ಬಂಧಿಸಿದರು.

ಇಬ್ಬರು ಶಾಲಾಬಾಲಕಿಯರನ್ನು ಪುಸಲಾಯಿಸಿ ತನ್ನನ್ನು ತಬ್ಬಿಕೊಳ್ಳಿರೆಂದು ಮಣಿಕಾಂತ ಕೇಳಿಕೊಂಡಿದ್ದಾನೆ. ಎಚ್ಚೆತ್ತುಕೊಂಡ ಬಾಲಕಿಯರು ಕೂಗಿಕೊಂಡಿದ್ದಾರೆ. ಕೂಡಲೆ ಆತ ಕಾಲಿಗೆ ಬುದ್ಧಿ ಹೇಳಲು ಯತ್ನಿಸಿದರೂ ಅಲರ್ಟ್ ಆಗಿದ್ದ ಸಾರ್ವಜನಿಕರು ಆತನನ್ನು ಹಿಡಿದು ಮನಸೋಇಚ್ಛೆ ಥಳಿಸಿದರು.[ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಮೈದುನ ನಾದಿನಿ ಜೋಡಿ]

ಹೇಗೋ ಆತ ಸಾರ್ವಜನಿಕರ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ. ತೀವ್ರ ಆಘಾತ ಮತ್ತು ಆತಂಕಕ್ಕೀಡಾಗಿದ್ದ ಬಾಲಕಿಯರ ಪೋಷಕರು ವೈಯಾಲಿಕಾವಲ್ ಪೊಲೀಸರಿಗೆ ದೂರು ನೀಡಿದರು. ದೂರ ಬಂದ 5 ಗಂಟೆಯಲ್ಲಿ ಪೊಲೀಸರು ಕಾಮಿ ಮಣಿಕಾಂತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bengaluru police arrested a man accused of sexual harassment foiling his attempts to abscond. The 22-year-old man allegedly accosted two minor girls asking them for a hug on Tuesday evening when they were returning from school.
Please Wait while comments are loading...