ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್ ರನ್‌ವೇ ಮೇಲೆ ಮ್ಯಾರಥಾನ್: ಭಾರತದಲ್ಲಿ ಮೊದಲು

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ದೇಶದಲ್ಲೇ ಇದೇ ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿರುವ ವಿಮಾನಗಳ ರನ್ ವೇ ಮೇಲೆ ಮ್ಯಾರಥಾನ್ ಆಯೋಜಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ವಿಶಾಲ ರನ್ ವೇಗಳ ಮೇಲೆ ನೂರಾರು ಕಿ.ಮೀ ವೇಏಗದಲ್ಲಿ ವಿಮಾನ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುತ್ತದೆ. ಅಂತಹ ರನ್ ವೇ ಹತ್ತಿರ ಸುಳಿಯಲು ಕೂಡ ಯಾರಿಗೂ ಅವಕಾಶವಿಲ್ಲ. ಆದರೆ, ಮೇ 8ರಂದು ರನ್ ವೇ ಮೇಲೆ ಓಡುವ ಸುವರ್ಣಾವಕಾಶ ಕೆಲವೇ ಜನರಿಗೆ ಸಿಗಲಿದೆ.

ಏರ್‌ಪೋರ್ಟ್ ಮೆಟ್ರೋ: ಬಳಕೆದಾರ ಶುಲ್ಕ ಪ್ರಸ್ತಾವ ತಿರಸ್ಕೃತಏರ್‌ಪೋರ್ಟ್ ಮೆಟ್ರೋ: ಬಳಕೆದಾರ ಶುಲ್ಕ ಪ್ರಸ್ತಾವ ತಿರಸ್ಕೃತ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭವಾದ ಹತ್ತು ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ರನ್ ವೇ ಮೇಲೆ 10ಕೆ ಓಟವನ್ನು ವಿಮಾನ ನಿಲ್ದಾಣ ಆಡಳಿತ ಮಂಡಳಿ ಆಯೋಜಿಸಿದೆ.

Can you believe this?! Marathon on KIAL runway!

ಮೇ.8ರಂದು ಮಧ್ಯಾಹ್ನ 12.45ರಿಂದ ಮಧ್ಯಾಹ್ನ 2.15ರವರೆಗೆ ರನ್ ವೇ ಮೇಲೆ ಫನ್ ರನ್ ಆಯೋಜನೆ ಮಾಡಲಾಗಿದ್ದು, ಈ ಅವಧಿಯಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗುತ್ತದೆ. ಈ ಹಿಂದೆ ಮ್ಯಾರಥಾನ್ ಮತ್ತು ಓಟಗಳಲ್ಲಿ ಭಾಗವಹಿಸಿದ ಅನುಭವ ಹೊಂದಿರುವವರು ಈ ವಿಶೇಷ ಓಟದಲ್ಲಿ ಭಾಗವಹಿಸಬಹುದು.

ಕೇವಲ ನೂರು ಜನರಿಗೆ ಮಾತ್ರ ಅವಕಾಶವಿರುತ್ತದೆ. ಏ.30ರೊಳಗಾಗಿ 18 ವರ್ಷ ಮೇಲ್ಪಟ್ಟವರು ತಮ್ಮ ಹೆಸರನ್ನು ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದು. ಲಂಡನ್ ಹಿಥ್ರೊ, ನ್ಯೂಯಾರ್ಕ್ ನ ಜೆ.ಎಫ್ ಕೆನಡಿ ಏರ್ ಪೋರ್ಟ್ ನ ರನ್ ವೇ ಸೇರಿದಂತೆ ಜಗತ್ತಿನ ಕೆಲ ಪ್ರಮುಖ ಏರ್ ಪೋರ್ಟ್ ಗಳ ರನ್ ವೇ ಮೇಲೆ ಓಟ ಆಯೋಜಿಸಲಾಗಿತ್ತು. ಭಾರತದಲ್ಲಿ ಇದೇ ಮೊದಲು.
ಹೆಚ್ಚಿನ ಮಾಹಿತಿಗಾಗಿ-http://www.unitedin10.com/contests/runway

English summary
To celebrate the tenth anniversary of Kempegowda International Airport, the authorities have organised a 10K marathon at KIAL runway on May 8. This is the first time in the country where marathon will be allowed on airport runway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X