ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಪೇಟೆ-ಬೆಂಗಳೂರು ನಡುವೆ ನಿತ್ಯ ಇಂಟರ್‌ಸಿಟಿ ರೈಲಿಗೆ ಆಗ್ರಹ

By Nayana
|
Google Oneindia Kannada News

ಬೆಂಗಳೂರು, ಜೂನ್ 22: ವಿಶ್ವವಿಖ್ಯಾತ ಹಂಪಿ ಸಂಪರ್ಕಿಸುವ ಹೊಸಪೇಟೆಯಿಂದ ರಾಜಧಾನಿ ಬೆಂಗಳೂರಿಗೆ ಮಧ್ಯೆ ಇಂಟರ್‌ಸಿಟಿ ರೈಲು ಆರಂಭಿಸುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಕರ್ನಾಟಕ ರೈಲ್ವೆ ಬಳಕೆದಾರರ ವೇದಿಕೆ ಅಭಿಯಾನ ಆರಂಭಿಸಿದೆ.

ಹಾಸನ-ಮಂಗಳೂರು ರೈಲು ಮಾರ್ಗ ಸಂಚಾರಕ್ಕೆ ಸಿದ್ಧಹಾಸನ-ಮಂಗಳೂರು ರೈಲು ಮಾರ್ಗ ಸಂಚಾರಕ್ಕೆ ಸಿದ್ಧ

ಪ್ರಧಾನಮಂತ್ರಿ ನರೇಂದ್ರ ಮೋದಿ ರೈಲ್ವೆ ಸಚಿವ ಪಿಯೂಷ್ ಗೋಯಲ್, ಹಿರಿಯ ರೈಲ್ವೆ ಅಧಿಕಾರಿಗಳು ರಾಜ್ಯಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ , ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳನ್ನು ಟ್ಯಾಗ್ ಮಾಡಿ ಟ್ವಿಟ್ಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಹೊಸಪೇಟೆಯಿಂದ ಬಳ್ಳಾರಿ ಮಾರ್ಗವಾಗಿ ರಾಯದುರ್ಗ, ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಜಾಜೂರು, ಬೀರೂರು, ಕಡೂರು ಅರಸೀಕೆರೆ ಹಾಗೂ ತುಮಕೂರು ಮೂಲಕ ಬೆಂಗಳೂರನ್ನು ಸಂಪರ್ಕಿಸಲು ನಿತ್ಯ ರೈಲು ಸಂಪರ್ಕ ಆರಂಭಿಸಬೇಕು. ಇದರಿಂದ ವಿಶ್ವವಿಖ್ಯಾತ ತಾಣವಾದ ಹಂಪಿಗೆ ಪ್ರವಾಸಕ್ಕೆ ಬರುವವರಿಗೆ ಅನುಕೂಲವಾಗಲಿದೆ.

Campaign for intercity rail between Hospet to Bengaluru

ದೇಶವಿದೇಶಗಳಿಂದ ನಿತ್ಯ ಸಹಸ್ರಾರು ಜನರು ಹಂಪಿಗೆ ಭೇಟಿ ನೀಡುತ್ತಿದ್ದು, ರಾಜಧಾನಿ ಬೆಂಗಳೂರಿನಿಂದ ಸರಿಯಾದ ರೈಲು ಸಂಪರ್ಕವಿಲ್ಲ ಹೀಗಾಗಿ ನಿತ್ಯ ಇಂಟರ್‌ಸಿಟಿ ರೈಲು ಆರಂಭಿಸಿದರೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಂಪಿ ಅಭಿವೃದ್ಧಿಗೆ ಮತ್ತಷ್ಟು ನೆರವಾಗಲಿದೆ. ಹಾಗೂ ಈ ಭಾಗದ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ರೈಲ್ವೆ ಬಳಕೆದಾರರ ವೇದಿಕೆ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.

English summary
Karnataka rail users forum has launched a campaign on tweeter urging new intercity rail between Hospet and Bengaluru to strengthen connectivity to world heritage Hampi in Bellary district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X