ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಟಿ ದೇವೇಗೌಡರೇ ಕರ್ನಾಟಕದ ಉನ್ನತ ಶಿಕ್ಷಣ ಸಚಿವರು!

|
Google Oneindia Kannada News

Recommended Video

ಕೊನೆಗೂ ಜಿ ಟಿ ದೇವೇಗೌಡ್ರು ಉನ್ನತ ಶಿಕ್ಷಣ ಖಾತೆಯ ಸಚಿವರಾಗೋಕೆ ಒಪ್ಪಿಕೊಂಡ್ರಾ? | Oneindia Kannada

ಬೆಂಗಳೂರು, ಜೂನ್ 22: ಉನ್ನತ ಶಿಕ್ಷಣ ಸಚಿವರಾಗಿ ಇಂದಿನಿಂದ ಜೆಡಿಎಸ್ ಮುಖಂಡ ಜಿಟಿ ದೇವೇಗೌಡ ಅವರು ಕಾರ್ಯಾರಂಭ ಮಾಡಲಿದ್ದಾರೆ.

ಇಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಲಿದ್ದಾರೆ.

ಸಿದ್ದರಾಮಯ್ಯ ವಿರುದ್ದ ಹೂಂಕರಿಸಿದ್ದ ಜಿ ಟಿ ದೇವೇಗೌಡ್ರು ಈಗ ಅತಂತ್ರಸಿದ್ದರಾಮಯ್ಯ ವಿರುದ್ದ ಹೂಂಕರಿಸಿದ್ದ ಜಿ ಟಿ ದೇವೇಗೌಡ್ರು ಈಗ ಅತಂತ್ರ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಂಪುಟ ರಚನೆಯ ನಂತರ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿಡಿ ಅವರಿಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡಲಾಗಿತ್ತು. ಆದರೆ ಅವರು ಆ ಖಾತೆಯನ್ನು ಒಲ್ಲೆ ಎಂದಿದ್ದರು. ಕೇವಲ 8 ನೇ ತರಗತಿಯವರೆಗೆ ವಿದ್ಯಾರ್ಹತೆ ಹೊಂದಿರುವ ಜಿಟಿಡಿಯವರು ಈ ಮಹತ್ವದ ಖಾತೆಯನ್ನು ವಹಿಸುವ ಬಗ್ಗೆ ಅಸಮಾಧಾನ ಸೃಷ್ಟಿಯಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಇವರನ್ನು ಗೇಲಿ ಮಾಡಲಾಗಿತ್ತು. ಈ ಎಲ್ಲ ಬೆಳವಣಿಗೆಯ ನಂತರ ಖಾತೆಯನ್ನು ಬದಲಿಸುವಂತೆ ಜಿಟಿಡಿ ಪಟ್ಟು ಹಿಡಿದಿದ್ದರು.

Cabinet expansion: GT Devegowda to take charge as higher education minister

ಆದರೆ ಈಗಾಗಲೇ ಸಚಿವ ಸಂಪುಟ ರಚನೆಯಾಗಿ, ಖಾತೆ ಹಂಚಿಕೆಯಾಗಿರುವುದರಿಂದ ಜಿಟಿ ದೇವೇಗೌಡ ಅವರಿಗೆ ನೀಡುವುದಕ್ಕೆ ಯಾವ ಖಾತೆಯೂ ಇಲ್ಲ ಎಂಬ ಕಾರಣಕ್ಕೆ ಅವರ ಮನವೊಲಿಸಿ, ಮತ್ತೆ ಉನ್ನತ ಶಿಕ್ಷಣ ಖಾತೆಯಲ್ಲೇ ಮುಂದುವರಿಯಲು ಸೂಚಿಸಲಾಗಿದೆ.

ನಮ್ಮನ್ನಾಳುವ ಮಂತ್ರಿಗಳಲ್ಲಿ ಪಿಯುಸಿ ಪಾಸಾದವರು ಎಷ್ಟು ಜನ? ನಮ್ಮನ್ನಾಳುವ ಮಂತ್ರಿಗಳಲ್ಲಿ ಪಿಯುಸಿ ಪಾಸಾದವರು ಎಷ್ಟು ಜನ?

"ವಿದ್ಯಾರ್ಹತೆ ಕಡಿಮೆ ಇದ್ದರೂ, ಅನುಭವದ ಮೂಲಕವೂ ಖಾತೆಯನ್ನು ನಿರ್ವಹಿಸುವ ಸಾಮರ್ಥ್ಯ ಜಿಟಿಡಿ ಅವರಿಗಿದೆ. ಆದ್ದರಿಂದ ಅವರೇ ಉನ್ನತ ಶಿಕ್ಷಣ ಸಚಿವರಾಗಿ ಮುಂದುವರಿಯುತ್ತಾರೆ" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೆಂಗಲ್ ಹನುಮಂತಯ್ಯ ಸಂಪುಟ ಸಚಿವರ ಶೈಕ್ಷಣಿಕ ಅರ್ಹತೆಕೆಂಗಲ್ ಹನುಮಂತಯ್ಯ ಸಂಪುಟ ಸಚಿವರ ಶೈಕ್ಷಣಿಕ ಅರ್ಹತೆ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಅಭ್ಯರ್ಥಿ ಜಿಟಿಡಿ ಹೀನಾಯವಾಗಿ ಸೋಲಿಸಿದ್ದರು.

English summary
Cabinet expansion: JDS MLA of Chamundeshwari constituency in Mysuru, GT Devegowda will take his charge as Higher education minister of Karnataka from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X