ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರು ಭಾಗವಾಗಲಿದೆ ಬೆಂಗಳೂರು ವಿಶ್ವವಿದ್ಯಾಲಯ

|
Google Oneindia Kannada News

ಬೆಂಗಳೂರು, ಮೇ 26 : ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗಗಳಾಗಿ ವಿಭಜಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ವಿಧಾನಸಭೆ ಕ್ಷೇತ್ರದ ಅನ್ವಯ ಮೂರು ಭಾಗಗಳಾಗಿ ವಿಭಜಿಸಲಾಗುತ್ತಿದ್ದು, ಜ್ಞಾನ ಭಾರತಿ ಕ್ಯಾಂಪಸ್ ದಕ್ಷಿಣ ವಿವಿಗೆ ಸೇರಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿ ವಿಭಜನೆಗೆ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಎಂದು ಮೂರು ಭಾಗಗಳಾಗಿ ವಿವಿ ವಿಭಜನೆಯಾಗಲಿದೆ. [ವಿಶ್ವವಿದ್ಯಾಲಯ ಒಡೆದು ಮೂರು ಭಾಗ]

bangalore university

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ವ್ಯಾಪ್ತಿಯನ್ನು ಒಳಗೊಂಡಿದ್ದ ಬೆಂಗಳೂರು ವಿವಿ ಇನ್ನು ಮೂರು ವಿವಿಗಳಾಗಿ ಕಾರ್ಯನಿರ್ವಹಿಸಲಿದ್ದು. ಈ ವಿವಿಗಳು ಪ್ರತ್ಯೇಕ ಆಡಳಿತ ಕಚೇರಿಯನ್ನು ಹೊಂದಲಿವೆ. [ಬೆಂಕಿ, ಗಾಳಿ, ಜಲ ರಕ್ಷಿತ ಅಂಕ ಪಟ್ಟಿ ಬೇಕೇ?]

ಬೆಂಗಳೂರು ದಕ್ಷಿಣ : ದಕ್ಷಿಣ ವಿವಿಗೆ ಜ್ಞಾನ ಭಾರತಿ ಕ್ಯಾಂಪಸ್ ಆಡಳಿತ ಕಚೇರಿಯಾಗಲಿದೆ. ವಿಜಯನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಯಶವಂತಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಗೋವಿಂದರಾಜ ನಗರ, ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಡಲಿವೆ. [ಬೆಂಗಳೂರು ವಿವಿ ಇಬ್ಭಾಗಕ್ಕೆ ರಾಜ್ಯಪಾಲರ ಫೆವಿಕಾಲ್]

ಬೆಂಗಳೂರು ಕೇಂದ್ರ : ಬೆಂಗಳೂರು ಕೇಂದ್ರಕ್ಕೆ ಸೆಂಟ್ರಲ್ ಕಾಲೇಜು ಆಡಳಿತ ಕಚೇರಿಯಾಗಲಿದೆ. ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಲೇಔಟ್, ಜಯನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಸೇರಲಿವೆ.

ಬೆಂಗಳೂರು ಉತ್ತರ : ಕೋಲಾರದಲ್ಲಿರುವ ಪಿ.ಜಿ. ಸೆಂಟರ್ ಸದ್ಯಕ್ಕೆ ಆಡಳಿತ ಕಚೇರಿಯಾಗಿರುತ್ತದೆ. ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್, ಬಂಗಾರ ಪೇಟೆ, ಕೋಲಾರ, ಮಾಲೂರು, ಕೆ.ಆರ್.ಪುರಂ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ.ರಾಮನ್‌ನಗರ, ಮಹದೇವಪುರ, ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ವಿಧಾನಸಭೆ ಕ್ಷೇತ್ರಗಳು ಈ ವ್ಯಾಪ್ತಿಗೆ ಸೇರಲಿವೆ.

English summary
Karnataka government on Monday gave its approval for an amendment bill that provides for trifurcation of Bangalore University and fixing jurisdiction of the new universities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X