ಸಿ ಫೋರ್ ಸಮೀಕ್ಷೆ: ಬರೀ ಬೊಗಳೆ ಎಂದ ಓದುಗರು!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 21: ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸುತ್ತೆ ಎಂಬ ಸಿ ಫೋರ್ ಸಮೀಕ್ಷೆ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಸದಾ ನಿಖರ ಸಮೀಕ್ಷೆ ನೀಡುವ ಸಿ ಫೋರ್ ಸಂಸ್ಥೆಯ ಈ ಬಾರಿಯ ಚುನಾವಣಾ ಪೂರ್ವ ಸಮೀಕ್ಷೆ ಉಲ್ಟಾ ಹೊಡೆಯುತ್ತಾ? ಅಥವಾ 2008 ಮತ್ತು 2013 ರಂತೆ ಈ ಬಾರಿಯೂ ಸಿಫೋರ್ ಸಮೀಕ್ಷೆ ನಿಜವಾಗುತ್ತಾ?

ಸಿ ಫೋರ್ ಸಮೀಕ್ಷೆ : ಸಿದ್ದರಾಮಯ್ಯ -ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಬಹುಮತ

ರಾಜ್ಯದ 165 ವಿಧಾನಸಭಾ ಕ್ಷೇತ್ರದ 24,679 ಮತದಾರರರನ್ನು ಸಂದರ್ಶಿಸಿ ನಡೆಸಿದ ಸಮೀಕ್ಷೆಯ ಪೈಕಿ 340 ನಗರ ಮತ್ತು 550 ಗ್ರಾಮೀಣ ಪ್ರದೇಶದ ವಿವಿಧ ಮತ, ಜಾತಿಯ ಜನರನ್ನು ಮಾತನಾಡಿಸಿ ವರದಿ ತಯಾರಿಸಲಾಗಿದೆ.

ವರದಿಯ ಪ್ರಕಾರ ಕಾಂಗ್ರೆಸ್ 43 ಶೇಕಡಾವಾರು ಮತ ಪಡೆಯಲಿದ್ದು, ಬಿಜೆಪಿ ಶೇ.32, ಜೆಡಿಎಸ್ ಶೇ.17 ಮತ ಪಡೆಯಲಿವೆ. 120 ರಿಂದ 132 ಸ್ಥಾನ ಪಡೆಯಲಿರುವ ಕಾಂಗ್ರೆಸ್ ಬಹುಮತ ಸಾಧಿಸಲಿದೆ ಎಂದು ಸಿ ವೋಟರ್ ಹೇಳಿದೆ. ಇದು ಸಮೀಕ್ಷೆಯ ವರದಿ. ಆದರೆ ಈ ವರದಿಯ ಕುರಿತು ಜನರು ಹೇಳುವುದೇನು? ನಿಜಕ್ಕೂ ಸಿದ್ದು ಮತ್ತೆ ಗದ್ದುಗೆ ಏರುತ್ತಾರಾ? ಸಿ ಫೋರ್ ಕುರಿತು 'ಒನ್ ಇಂಡಿಯಾ' ಪ್ರಕಟಿಸಿದ್ದ ವರದಿಗೆ ಪ್ರತಿಕ್ರಿಯಿಸಿರುವ ಓದುಗರು, ಸಮೀಕ್ಷೆ ಎಷ್ಟರ ಮಟ್ಟಿಗೆ ನಂಬಲರ್ಹವಾದದ್ದು ಎಂಬ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಸಿ-ಫೋರ್ ಸಮೀಕ್ಷೆ : ಯಾರು, ಏನು ಹೇಳಿದರು?

ಇಂಪಾಸಿಬಲ್!

ಇಂಪಾಸಿಬಲ್!

ಇಂಪಾಸಿಬಲ್!!! ಎಂಬ ಒಂದೇ ಶಬ್ದದಲ್ಲಿ ಪ್ರತಿಕ್ರಿಯಿಸಿರುವ ಓದುಗರೊಬ್ಬರು, ವರದಿ ಹೇಳುವ ಪ್ರಕಾರ ಸಿದ್ದರಾಮಯ್ಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.

ಇದಕ್ಕಿಂತ ದೌರ್ಭಾಗ್ಯ ಇಲ್ಲ!

ಇದಕ್ಕಿಂತ ದೌರ್ಭಾಗ್ಯ ಇಲ್ಲ!

ಇದು ನಿಜವಾಗಿ ನಡೆದರೆ ಕನ್ನಡಿಗರಿಗೆ ಮತ್ತು ಹಿಂದುಗಳಿಗೆ ಇದಕ್ಕಿಂತ ದೌರ್ಭಾಗ್ಯ ಮುಂದಿನ ಐದು ವರ್ಷಗಳು ಏನೂ ಇರುವುದಿಲ್ಲ. ಇಡೀ ಕಾಂಗ್ರೆಸ್ ಪಕ್ಷ ಮತ್ತು ಅದರ ನಿಷ್ಪ್ರಯೋಜಕ ರಾಜಮನೆತವನ್ನು ಸಾಕುವ ಹೊಣೆಯೂ ನಮ್ಮ ರಾಜ್ಯದ ಮೇಲೆ ಬೀಳುತ್ತೆ ಎಂದು ರಾಜನ್ ಎಂಬುವವರು ಕಮೆಂಟ್ ಮಾಡಿದ್ದಾರೆ.

ಈ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿ

ಈ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿ

ಈ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಈ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆಂದು ಸಿ ವೋಟರ್ ಸಮೀಕ್ಷೆಯನ್ನು ಕಯಾಲಿಗಾರ್ ಎಂಬುವವರು ಸ್ವಾಗತಿಸಿದ್ದಾರೆ.

ಬರಿ ಬೊಗಳೆ!

ಬರಿ ಬೊಗಳೆ!

ಬರಿ ಬೊಗಳೆ! ತಮಗೆ ಬೇಕಾದ ಜನರನ್ನು ಮಾತನಾಡಿಸಿ ಅವರ ಅನಿಸಿಕೆಯನ್ನು ಮಾತ್ರ ತೆಗೆದುಕೊಂಡು ಮಾಡುವ ಈ ಪ್ಲಾನ್ ಖಂಡಿತ ಊರ್ಜಿತವಾಗಲ್ಲ. ಈ ಹಿಂದೆ ಕಾಂಗ್ರೆಸ್ ನ ಘಟಾನುಘಟಿ ನಾಯಕರೇ ಬಿಜೆಪಿ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದ್ದಿದ್ದರು. ಕೊನೆಗೆ ಏನಾಯಿತು ? ಎಂಮದು ಶರತ್ ಶರ್ಮಾ ಎಂಬುವವರು ಕಮೆಂಟ್ ಮಾಡಿದ್ದಾರೆ.

ಒಳ್ಳೇ ಜೋಕ್ ಮಾಡ್ತೀರಪ್ಪ!

ಒಳ್ಳೇ ಜೋಕ್ ಮಾಡ್ತೀರಪ್ಪ!

ಹಹಹಹಃ ! ಒಳ್ಳೆ ಜೋಕ್ ಮಾಡ್ತೀರಪ್ಪ. ಕನ್ನಡಿಗರು ಮತ್ತೆ ಮತ್ತೆ ಅದೇ ತಪ್ಪು ಮಾಡೋವಷ್ಟು ದಡ್ಡರು ಅದ್ಕೊಂಡಿದೀರಾ? ಎಂದು ಓದುಗರೊಬ್ಬರು ಕಾಂಗ್ರೆಸ್ ವಿರುದ್ಧ ಬ್ಯಾಟ್ ಬೀಸಿದ್ದಾರೆ.

ಜನರಿಗೆ ಒಳಿತು ಮಾಡಿದವರು ಗೆದ್ದೇ ಗೆಲ್ತಾರೆ!

ಜನರಿಗೆ ಒಳಿತು ಮಾಡಿದವರು ಗೆದ್ದೇ ಗೆಲ್ತಾರೆ!

ಜನರಿಗೆ ಒಳಿತು ಮಾಡಿದ ಯಾರೇ ಆದ್ರೋ ಮತ್ತೆ ಮತ್ತೆ ಗೆದ್ದೇ ಗೆಲ್ತಾರೆ. ಎಂದು ದೀಪಕ್ ನಂದಕುಮಾರ್ ಎಂಬುವವರು ಸಿದ್ದು ಸರ್ಕಾರದ ಪರ ಕಮೆಂಟ್ ಮಾಡಿದ್ದಾರೆ.

ಸಿದ್ದು ಅವರೇ ನಂಬಲ್ಲ!

ಸಿದ್ದು ಅವರೇ ನಂಬಲ್ಲ!

ಈ ಸರ್ವೆಯನ್ನು ಸಿದ್ದರಾಮಯ್ಯ ಅವರೇ ನಂಬಲ್ಲ. ಯಾಕಂದ್ರೆ 2018 ರಲ್ಲಿ ಅವರು ಸೋಲೋದು ಗ್ಯಾರಂಟಿ ಎಂದು ನಿಖಿಲ್ ಶಾಸ್ತ್ರಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಗೆ ಮತಹಾಕುವುದಕ್ಕೆ ಬಲಿಷ್ಠ ಕಾರಣಕೊಡಿ

ಕಾಂಗ್ರೆಸ್ ಗೆ ಮತಹಾಕುವುದಕ್ಕೆ ಬಲಿಷ್ಠ ಕಾರಣಕೊಡಿ

ಕಾಂಗ್ರೆಸ್ ಪಕ್ಷಕ್ಕೆ ಏಕೆ ಮತ ಹಾಕಬೇಕು ಅನ್ನುವುದಕ್ಕೆ ಬಲಿಷ್ಠ 5 ಕಾರಣಗಳನ್ನು ಕೊಡಿ. ಹೀಗಿದೆ ನನ್ನ ಕಾರಣಗಳು ಎಂದು 5 ಕಾರಣಗಳನ್ನು ಬರೆದುಕಳಿಸಿದ್ದಾರೆ ಶ್ರೀಕಾಂತ್ ಎನ್ನುವವರು.
1. ಇಷ್ಟು ದಿನ ಅಧಿಕಾರದ ಅವಧಿಯಲ್ಲಿ ನಿದ್ದೆ ಮಾಡಿದಕ್ಕೆ? 2 . ಜನರ ತೆರಿಗೆ ಹಣ ಸರಿಯಾಗಿ ಉಪಯೋಗ ಮಾಡದುದಕ್ಕೆ?
3. ಹಣಕ್ಕಾಗಿ ಪರ ರಾಜ್ಯಕ್ಕೆ ಕಾವೇರಿ ನೀರು ಮಾರಿದ್ದಕ್ಕೆ?
4. ನಮ್ಮ ರಾಜ್ಯದ ಜನರು ನೀರಿಗಾಗಿ ಪರದಾಟ ಮಾಡಲು ಸಹಕಾರಿ ಆದುದಕ್ಕೆ?
5. ಕರ್ನಾಟಕ ರಾಜ್ಯದಲ್ಲಿ ಮಿತಿ ಮೀರಿದ ಭ್ರಷ್ಟ ಮಂತ್ರಿ ಮಂಡಳ ಸ್ಥಾಪನೆ ಮಾಡಿದುದಕ್ಕೆ?
ಈ ಎಲ್ಲ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೆ? ಕಲಿಯುಗದಲ್ಲಿ ಕತ್ತೆ ಕೂಡ ಕುದುರೆ ಅಂತ ಹೇಳಿಕೊಳ್ಳತ್ತೆ. ಆದರೆ ಕತ್ತೆ ಇಂದಿಗೂ ಕತ್ತೆಯೇ. ಅದರಲ್ಲೂ ಭ್ರಷ್ಟಾತಿ ಭ್ರಷ್ಟ ಕಾಂಗ್ರೆಸ್ ನವರ ಸಹವಾಸ ಕನ್ನಡದ ಜನತೆಗೆ ಇನ್ನೊಮ್ಮೆ ಬಾರದಿರಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After seeing report in Oneindia Kannada on C fore Pre – Poll Survey in, which predicts victory for Siddaramaiah led Congress government with 43% vote share in Karnataka assembly elections 2018, many readers express their opinion. Here are some selected comments by the readers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X