ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.18ರಿಂದ ಬೈಯಪ್ಪನಳ್ಳಿ-ವೈಟ್‌ಫೀಲ್ಡ್‌ ಸಬ್ ಅರ್ಬನ್ ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಅ.14 : ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಸಬ್ ಅರ್ಬನ್ ರೈಲು ಸಂಚಾರ ಆರಂಭಿಸಲು ಒಪ್ಪಿಗೆ ಸಿಕ್ಕಿದೆ. ಅ.18ರಿಂದ ರೈಲು ಸಂಚಾರ ಆರಂಭವಾಗಲಿದೆ.

ರೈಲು ಮಾರ್ಗ ಆಗ್ರಹಿಸಿ ನರೇಗಲ್ ಬಂದ್ ಯಶಸ್ವಿರೈಲು ಮಾರ್ಗ ಆಗ್ರಹಿಸಿ ನರೇಗಲ್ ಬಂದ್ ಯಶಸ್ವಿ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಸಬ್ ಅರ್ಬನ್ ರೈಲು ಸಂಚಾರ ಆರಂಭಿಸಬೇಕು ಎಂದು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು. ಲೋಕಸಭೆ ಅಧಿವೇಶನದಲ್ಲಿಯೂ ಈ ಕುರಿತು ವಿಚಾರ ಪ್ರಸ್ತಾಪಿಸಿದ್ದರು.

Byappanahalli-Whitefield suburban train service from August 18

ನಮ್ಮ ಮೆಟ್ರೋ -2ನೇ ಹಂತದ ರೀಚ್ -1 ವಿಸ್ತರಣಾ ಕಾಮಗಾರಿ ಹಿನ್ನಲೆಯಲ್ಲಿ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಆದ್ದರಿಂದ, ಕೈಗಾರಿಕೆಗಳ ಮಾಲೀಕರು, ಸಭೆ ನಡೆಸಿ ಸಬ್ ಅರ್ಬನ್ ರೈಲು ಸಂಚಾರ ಆರಂಭಿಸಲು ಮನವಿ ಮಾಡಿದ್ದರು.

ರೈಲ್ವೆಗೆ ಬರಲಿದೆː ಬಾರ್ ಕೊಡೆಡ್ ಟಿಕೆಟ್, ಸ್ವಯಂ ಚಾಲಿತ ಗೇಟ್ರೈಲ್ವೆಗೆ ಬರಲಿದೆː ಬಾರ್ ಕೊಡೆಡ್ ಟಿಕೆಟ್, ಸ್ವಯಂ ಚಾಲಿತ ಗೇಟ್

ರೈಲ್ವೆ ಇಲಾಖೆ ಸಬ್ ಅರ್ಬನ್ ರೈಲು ಸಂಚಾರ ಆರಂಭಿಸಲು ಒಪ್ಪಿಗೆ ನೀಡಿದೆ. ಅ.18ರಿಂದ ಮಾರ್ಗದಲ್ಲಿ ಮೂರು ಮೆಮು ರೈಲುಗಳು ಸಂಚಾರ ನಡೆಸಲಿವೆ. ರೈಲ್ವೆ ಇಲಾಖೆ ಶೀಘ್ರದಲ್ಲಿಯೇ ರೈಲುಗಳ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

ಸಿದ್ದರಾಮಯ್ಯ ಪತ್ರ : ಕೇಂದ್ರ ಸರ್ಕಾರ ಬೆಂಗಳೂರು ನಗರದಲ್ಲಿ ಸಬ್ ಅರ್ಬನ್ ರೈಲು ಆರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈನಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದು, ಯೋಜನೆಯ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನೀತಿಯಿಂದ ರಾಜ್ಯಕ್ಕೆ ಹೊರೆಯಾಗಲಿದೆ ಎಂದು ಹೇಳಿದ್ದಾರೆ.

English summary
Indian Railways approved for Byappanahalli-Whitefield suburban train service in Bengaluru city. Suburban train service will start from August 18, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X