ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಜೂನ್‌ 18ಕ್ಕೆ ಬಿನ್ನಿಪೇಟೆ ವಾರ್ಡ್‌ ಉಪಚುನಾವಣೆ

By Nayana
|
Google Oneindia Kannada News

ಬೆಂಗಳೂರು, ಜೂನ್ 15: ಬಿನ್ನಿಪೇಟೆ ವಾರ್ಡ್‌ನ ಸದಸ್ಯ ಸ್ಥಾನಕ್ಕೆ ಜೂನ್ 18ಕ್ಕೆ ಉಪಚುನಾವಣೆ ನಡೆಯಲಿದೆ. ಬಿಬಿಎಂಪಿ ಕಾರ್ಪೊರೇಟರ್‌ ಆಗಿದ್ದ ಮಹದೇವಮ್ಮ ಅವರ ನಿಧನನಿಂದ ತೆರವಾಗಿತ್ತು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿನ್ನಿಪೇಟೆ ವಾರ್ಡ್‌ನಿಂದ ಗೆದ್ದಿದ್ದ ಮಹದೇವಮ್ಮ ಅವರು ಜ.23ರಂದು ತಿರುಪತಿಯಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರು. ಹೀಗಾಗಿ, ಜೂನ್ 18ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಉಪ ಚುನಾವಣೆ ನಡೆಯಲಿದೆ.

ಬಿನ್ನಿಪೇಟೆ ಕಾರ್ಪೊರೇಟರ್ ಮಹದೇವಮ್ಮ ನಾಗರಾಜ್ ನಿಧನ ಬಿನ್ನಿಪೇಟೆ ಕಾರ್ಪೊರೇಟರ್ ಮಹದೇವಮ್ಮ ನಾಗರಾಜ್ ನಿಧನ

ಅರಮನೆ ರಸ್ತೆಯಲ್ಲಿರುವ ಗೃಹ ವಿಜ್ಞಾನ ಕಾಲೇಜಿನಲ್ಲಿ ಜೂ.20ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿಯಿಂದ ಜಿ. ಚಾಮುಂಡೇಶ್ವರಿ, ಕಾಂಗ್ರೆಸ್‌ನಿಂದ ಪಾಲಿಕೆ ಮಾಜಿ ಸದಸ್ಯೆ ವಿದ್ಯಾ ಶಶಿಕುಮಾರ್ ಮತ್ತು ಜೆಡಿಎಸ್ ನಿಂದ ಮಹಾದೇವಮ್ಮ ಅವರ ಪುತ್ರಿ ಪಿ.ಎನ್. ಐಶ್ವರ್ಯ ಸ್ಪರ್ಧಿಸಿದ್ದಾರೆ.

By election for Binnipet ward on June 18

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಗೆಲುವಿಗೆ ಜಿದ್ದಾಜಿದ್ದಿಯ ಪೈಪೋಟಿ ನಡೆಯುತ್ತಿದೆ. ಕೆಪಿಸಿಸಿ ಕಾಯಾಧ್ಯಕ್ಷೆ ದಿನೇಶ್‌ ಗುಂಡೂರಾವ್ ಅವರು ಪಕ್ಷದ ಅಭ್ಯರ್ಥಿ ವಿದ್ಯಾ ಶಶಿಕುಮಾರ್ ಅವರನ್ನು ಗೆಲ್ಲಿಸಿಕೊಳ್ಳು ರಣತಂತ್ರ ರೂಪಿಸುತ್ತಿದ್ದಾರೆ.

By election for Binnipet ward on June 18

ಬಿನ್ನಿಪೇಟೆ ವಾರ್ಡ್‌ನಲ್ಲಿ 17,746 ಪುರುಷರು ಮತ್ತು 16,826 ಮಹಿಳೆಯರು ಸೇರಿ ಒಟ್ಟು 34,572 ಮತದಾರರಿದ್ದಾರೆ. ಇಲ್ಲಿ 37 ಮತಗಟ್ಟೆಗಳನ್ನು ಸ್ಥಾಪಿಸುತ್ತಿದ್ದು, ಈ ಪೈಕಿ 30 ಸಾಮಾನ್ಯ ಮತ್ತು 7 ಸೂಕ್ಷ್ಮ ಮತೆಗಟ್ಟೆಗಳನ್ನು ಗುರುತಸಿಲಾಗಿದೆ. ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

English summary
By election for Binnipet ward under BBMP jurisdiction will be held on June 18.Counting will be conducted on June 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X