ಅಪಾರ್ಟ್ ಮೆಂಟ್ ನಿವಾಸಿಗಳ ಹೋರಾಟಕ್ಕೆ ಮಣಿದ ಜಲಮಂಡಳಿ: ಮಾತುಕತೆಗೆ ಆಹ್ವಾನ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 04 : ಬೆಂಗಳೂರಿನ ಅಪಾರ್ಟ್ ಮೆಂಟ್ ಗಳಿಗೆ ಎಸ್ ಟಿ ಪಿ ಅಳವಡಿಕೆ ವಿರೋಧಿಸಿ ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಷನ್ ನಡೆಸಿದ ಮಾನವ ಸರಪಳಿಯ ಐತಿಹಾಸಿಕ ಹೋರಾಟದ ಫಲವಾಗಿ ಬೆಂಗಳೂರು ಜಲಮಂಡಳಿ ಫೆಡರೇಷನ್ ಜತೆ ಮಾತುಕತೆಗೆ ಮುಂದಾಗಿದೆ.

ಜಲಮಂಡಳಿ ತಾರತಮ್ಯ: ಅಪಾರ್ಟ್ ಮೆಂಟ್ ನಿವಾಸಿಗಳ ಪ್ರತಿಭಟನೆ

ಅಪಾರ್ಟ್ ಮೆಂಟ್ ಗಳಲ್ಲಿ ಎಸ್ಟಿಪಿ ಅಳವಡಿಕೆ ಇನ್ನಿತರೆ ವಿಷಯಗಳನ್ನು ವಿರೋಧಿಸಿ ಡಿ.2ರಂದು ರಾಜಧಾನಿಯ ಎಲ್ಲೆಡೆ ಸುಮಾರು 40 ಕ್ಕೂ ಹೆಚ್ಚಿನ ಪ್ರದೇಶಗಳಿಂದ 10,050 ಅಪಾರ್ಟ್ ಮೆಂಟ್ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

BWSSB will talk to apartment Federation

ಅದರ ಫಲವಾಗಿ ಈಗಾಗಲೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಎಸ್ಟಿಪಿ ಅಳವಡಿಕೆಗೆ ಅಪಾರ್ಟ್ ಎಂಟ್ ಗಳಿಗೆ ನೀಡಿದ್ದ ನೋಟೀಸ್ ಹಿಂಪಡೆಯಲು ನಿರ್ಧರಿಸಿದೆ.

ಪ್ರತಿಭಟನಾ ಮೆರವಣಿಗೆ ಕೈಗೊಳ್ಳುವ ಮುನ್ನ ಬಿಎಎಫ್ ಸದಸ್ಯರೊಂದಿಗೆ ನವೆಂಬರ್ 30ರಂದು ಎಸ್ಟಿಪಿ ಅಳವಡಿಕೆ, ಝೀರೊ ಲಿಕ್ವಿಡ್ ಡಿಸ್ ಚಾರ್ಜ್ ಕುರಿತು ಮಾತುಕತೆ ನಡೆಸಲಾಗಿತ್ತು. ಅದಾದ ನಂತರ ಜಲಮಂಡಳಿಯು ಅವಸರವಸರವಾಗಿ ಡಿ.2 ರಂದು ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿದೆ.

ಇದಾದ ನಂತರ ಮಾಲಿನ್ಯ ನಿಯಂತ್ರಣ ಮಂಡಲಿ ಹಾಗೂ ಜಲಮಂಡಳಿಯು ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ (ಡಿ.04) ಮಾತುಕತೆಗೆ ಮುಂದಾಗಿದೆ. ಈ ವೇಳೆ ಎಸ್ಟಿಪಿ ಕಡ್ಡಾಯ, ನೀರಿನ ದರ 300 ಪಟ್ಟು ಹೆಚ್ಚಳ ಮುಂತಾದ ವಿಷಯಗಳ ಬಗ್ಗೆ ಚಿರ್ಚಿಸಲಾಗುತ್ತದೆ ಎಂದು ಬಿಎಎಫ್ ಆಡಳಿತ ಮಂಡಳಿ ತನ್ನೆಲ್ಲ ಸದಸ್ಯರಿಗೆ ಹೋರಾಟದ ಯಶಸ್ಸಿನ ನಂತರ ಬರೆದಿರುವ ಕೃತಜ್ಞತಾ ಪೂರ್ವಕ ಪತ್ರದಲ್ಲಿ ಈ ವಿಷಯ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To resolve the STP issue which is issued for retrospective effect. The BWSSB will discuss with Bangalore Apartment Federation on December 4, which had a huge agitation recently.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ