ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ 25 ಜೆಟ್ಟಿಂಗ್ ಯಂತ್ರ ಖರೀದಿ

|
Google Oneindia Kannada News

ಬೆಂಗಳೂರು, ಮಾರ್ಚ್ 06: ನಗರದಲ್ಲಿರುವ ಮ್ಯಾನ್ ಹೋಲ್ ಗಳು ಮೃತ್ಯುಕೂಪಗಳಾಗಿವೆ. ಒಮ್ಮೆ ಇಳಿದವರು ಮತ್ತೆಂದೂ ಬಾರದ ಲೋಕಕ್ಕೆ ಹೋಗುವಂತಾಗಿದೆ. ಹೀಗಾಗಿ ಜಲಮಂಡಳಿಯು 25 ಜೆಟ್ಟಿಂಗ್ ಯಂತ್ರಗಳನ್ನು ಖರೀದಿಸಲು ಮುಂದಾಗಿದೆ.

ಮ್ಯಾನ್ ಹೋಲ್ ಗಳಿಗೆ ಬಿದ್ದು ಕಾರ್ಮಿಕರು ಮೃತಪಡುತ್ತಿರುವ ಪ್ರತಕರಣಗಳು ಹೆಚ್ಚಿದ ನಂತರ ಎಚ್ಚೆತ್ತುಕೊಂಡಿರುವ ಜಲಮಂಡಳಿ, ಶುಚಿಗೊಳಿಸಲು ಹೊಸದಾಗಿ 25 ಜೆಟ್ಟಿಂಗ್ ಯಂತ್ರಗಳನ್ನು ಖರೀದಿಸಲು ಮುಂದಾಗಿದೆ. ಆದರೆ, ಈ ವಾಹನಗಳು ಮಧ್ಯಮ ಗಾತ್ರವಾಗಿದ್ದು, ನಗರಕ್ಕೆ ಅಗತ್ಯವಾಗುವ ಸಣ್ಣ ವಾಹನಗಳ ಖರೀದಿ ಬಗ್ಗೆ ಮಂಡಳಿ ಯಾವುದೇ ತೀರ್ಮಾನ ಕೈಗೊಂಡಿಲ್ಲ.

9.5 ಕೋಟಿ ರೂ ವೆಚ್ಚದಲ್ಲಿ ಖರೀದಿಸಲಾಗುತ್ತಿರುವ ವಾಹನಗಳನ್ನು ನಗರದ ಹೃದಯ ಭಾಗದಲ್ಲಿರುವ ಹಳೇ ಪ್ರದೇಶಗಳಿಗೆ ಸೂಕ್ತವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇನ್ನು ಮುಂದೆ ಮ್ಯಾನ್ ಹೋಲ್ ಕಟ್ಟಿಕೊಂಡ ದೂರುಗಳಿಗೆ ಸಕಾಲದಲ್ಲಿ ಸ್ಪಂದನೆ ದೊರೆಯಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

BWSSB will purchase 25 sewer jetting machines

ದೂರುಗಳೇ ಹೆಚ್ಚು: ನಗರದಲ್ಲಿ 2.25 ಲಕ್ಷಕ್ಕೂ ಅಧಿಕ ಶೌಚಗುಂಡಿಗಳಿದ್ದು, ಇದಕ್ಕೆ ಸಂಬಂಧಿಸಿದ ಕನಿಷ್ಠ 350 ದೂರುಗಳು ಜಲಮಂಡಳಿಯಲ್ಲಿ ದಾಖಲಾಗುತ್ತಿವೆ. ಈವರೆಗೆ ನಗರದಲ್ಲಿ 118 ವಾಹನಗಳ ಮೂಲಕ ಮ್ಯಾನ್ ಹೋಲ್ ಸ್ವಚ್ಛತೆ ಕಾಮಗಾರಿ ನಿರ್ವಹಿಸಲಾಗುತ್ತಿತ್ತು.

ಬೃಹದಾಕಾರದ ಜೆಟ್ಟಿಂಗ್ ಯಂತ್ರಗಳಿಂದ ಸಣ್ಣಪುಟ್ಟ ಬೀದಿಗಳಲ್ಲಿ ಶುಚಿಗೊಳಿಸುವುದು ಅಸಾಧ್ಯವಾಗಿದೆ. ಮಂಡಳಿ ತನ್ನ ಬಳಿಇರುವ 30 ವಾಹನನಗಳನ್ನು ಮ್ಯಾನ್ ಹೋಲ್ ಸ್ವಚ್ಛತೆಗೆ ಬಳಸುತ್ತಿದೆ ಹೆಬ್ಬಾಳ ಶಾಸಕರ ಅನುದಾನದಲ್ಲಿಯೂ 8 ವಾಹನ ಖರೀದಿಸಲಾಗಿದೆ.

ಹೊಸ ವಾಹನಗಳು ಸಿದ್ಧ: ಹೊಸ 25 ಮಾರ್ಚ್ ಅಂತ್ಯಕ್ಕೆ ಬಳಕೆಗೆ ಸಿಗಲಿವೆ. ವಾಹನಗಳ ನೋಂದಣಿ ಸೇರಿ ಇತರ ಕಾರ್ಯಗಳ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ, ಪ್ರತಿ ವಾಹನಗಳ ಜೆಸ್ಸಿಗೆ 4.5 ಕೋಟಿ ರೂ ಹಾಗೂ ಜೆಟ್ಟಿಂಗ್ ಯಂತ್ರಕ್ಕಾಗಿ 5 ಕೋಟಿ ರೂ ವೆಚ್ಚ ಮಾಡಲಾಗಿದೆ.

English summary
BWSSB has decided to purchase 25 sewer jetting machine for sewage manhole cleaning in the city. As recently many manhole tragedies reported in the city the authorities have increasing facilities to avoid such incidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X