ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ನೀರಿನ ಸಂಪರ್ಕ ಪಡೆದಿದ್ದರೆ ಕ್ರಿಮಿನಲ್ ಕೇಸ್

|
Google Oneindia Kannada News

ಬೆಂಗಳೂರು, ಜ. 2 : ಬೆಂಗಳೂರು ಜಲ ಮಂಡಳಿ ಅಕ್ರಮ ನೀರಿನ ಸಂಪರ್ಕ ಹೊಂದಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಸಜ್ಜಾಗಿದೆ. ಅಕ್ರಮ ನೀರಿನ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ಜಲಮಂಡಳಿ ನೀಡಿದ ಗುಡುವು ಡಿ.31ಕ್ಕೆ ಮುಕ್ತಾಯಗೊಂಡಿದೆ.

ಅಕ್ರಮ ನೀರಿನ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಿ ಅವರಿಗೆ ಕಾನೂನು ರೀತಿ ನೋಟಿಸ್ ನೀಡಲು ಮಂಡಳಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಡೆಡ್‌ಲೈನ್ ವೊಳಗೆ 25 ಸಾವಿರದಷ್ಟು ಸಂಪರ್ಕಗಳನ್ನು ದಂಡ ಪಾವತಿ ಮಾಡಿಸಿಕೊಂಡು ಸಕ್ರಮಗೊಳಿಸಲಾಗಿದೆ. [ಹೊಸ ನೀರಿನ ಸಂಪರ್ಕ ಪಡೆಯುವುದು ಹೇಗೆ?]

water

ಡೆಡ್‌ಲೈನ್ ಮುಗಿದ ಹಿನ್ನಲೆಯಲ್ಲಿ ಮುಂದಿನ ಹಂತವಾಗಿ ಕ್ರಿಮಿನಲ್ ಕೇಸ್ ದಾಖಲಿಸಲು ಜಲಮಂಡಳಿ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಲಿದೆ. ಡೆಡ್‌ಲೈನ್ ಮೀರಿದರೂ ಅಕ್ರಮ ಸಂಪರ್ಕಗಳನ್ನು ಪಡೆದಿರುವ ಗ್ರಾಹಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ. [ನೀರಿನ ಸಂಪರ್ಕ ಸಕ್ರಮಗೊಳಿಸಲು ಅಂತಿಮ ಗಡುವು]

ಉಪ ವಿಭಾಗಗಳಲ್ಲಿ ವಕೀಲರೊಬ್ಬರನ್ನು ನೇಮಿಸಿಕೊಂಡು ಕಾನೂನು ರೀತಿ ನೋಟಿಸ್ ನೀಡಲು ಮಂಡಳಿ ಸಿದ್ಧತೆ ನಡೆಸಿದೆ. ಬೆಂಗಳೂರು ನಗರದಲ್ಲಿ ಸುಮಾರು ಒಂದು ಲಕ್ಷ ಅಕ್ರಮ ನೀರಿನ ಸಂಪರ್ಕವಿರಬಹುದು ಎಂದು ಮಂಡಳಿ ಅಂದಾಜಿಸಿದ್ದು, ಸೋಮವಾರದಿಂದ ವಿಶೇಷ ತಂಡ ಕಾರ್ಯಾಚರಣೆ ಆರಂಭಿಸಲಿದೆ. [ನೀರಿನ ಬೆಲೆ ಏರಿದೆ, ವಿವರಗಳು ಇಲ್ಲಿದೆ]

ಜಲಮಂಡಳಿಯ ನಿರ್ದೇಶಕರಾದ ಅಂಜುಂ ಪರ್ವೇಜ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, ಪದೇ ಪದೇ ನೋಟಿಸ್ ಜಾರಿ ಮಾಡಿದರೂ ನೀರಿನ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳದ ಗ್ರಾಹಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ನೀರಿನ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳುವಂತೆ ಹಲವಾರು ಬಾರಿ ಗ್ರಾಹಕರಿಗೆ ಮನವಿ ಮಾಡಲಾಗಿದೆ. ಅಂತಿಮ ಗಡುವು ನೀಡಿದರೂ ಜನರು ಸ್ಪಂದಿಸಿಲ್ಲ ಆದ್ದರಿಂದ ಇಂತಹ ಕ್ರಮ ಅನಿವಾರ್ಯವಾಗಿದೆ ಎಂದು ಅಂಜುಂ ಪರ್ವೇಜ್ ಹೇಳಿದ್ದಾರೆ.

English summary
Bengaluru Water Supply and Sewerage Board (BWSSB) will start filing criminal complaints against those having illegal water connections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X