ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಮಂಡಳಿಗೆ ಬೋರ್‌ವೆಲ್‌ ರಿಪೇರಿ ಅಂದ್ರೆ ಇಷ್ಟ: ಸುರೀತಾರೆ ಲಕ್ಷ!

By Nayana
|
Google Oneindia Kannada News

ಬೆಂಗಳೂರು, ಮೇ 16: ಜಲಮಂಡಳಿಯು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ನಗರದಲ್ಲಿ ಸಾಕಷ್ಟು ಕಡೆಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಿದೆ. ಅದರ ನಿರ್ವಹಣೆಗೆ ಭಾರಿ ಮೊತ್ತ ವ್ಯಯ ಮಾಡಲಾಗುತ್ತಿದೆ. ದುರಸ್ತಿಗೊಳಿಸದೆಯೂ ಖರ್ಚು ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ.

ಪ್ರತಿ ತಿಂಗಳು 10ರಿಂದ 20 ಲಕ್ಷ ರೂ. ವೆಚ್ಚ ಮಾಡಿದರೆ ಮಾರ್ಚ್ ನಲ್ಲಿ 4 ಕೋಟಿ ರೂ.ಗಳಿಗೂ ಅಧಿಕ ಮೊತ್ತ ನಮೂದಿಸಿ ಹಣ ಮಂಜೂರು ಮಾಡಿಸಿಕೊಂಡಿದೆ. 2013-14ನೇ ಸಾಲಿನಿಂದ ನಾಲ್ಕು ವರ್ಷಗಳ ಅವಧಿಯಲ್ಲಿಯೂ ಜಲಮಂಡಳಿ ಇದೇ ರೀತಿಯಲ್ಲಿ ಮೊತ್ತ ನಮೂದಿಸಿದೆ.

ಬಿಡಿಎ ಹಾಗೂ ಕೆಇಬಿ ಬಡಾವಣೆಗಳಲ್ಲಿ ಅಸಮರ್ಪಕ ನೀರು ಪೂರೈಕೆಬಿಡಿಎ ಹಾಗೂ ಕೆಇಬಿ ಬಡಾವಣೆಗಳಲ್ಲಿ ಅಸಮರ್ಪಕ ನೀರು ಪೂರೈಕೆ

ವರ್ಷದ 10 ತಿಂಗಳು ಸಾಮಾನ್ಯ ವೆಚ್ಚವನ್ನೇ ತೋರಿಸುವ ಜಲಮಂಡಳಿ ಬೇಸಿಗೆ ಬರುತ್ತಿದ್ದಂತೆ ಸುರಸ್ತಿಗೆ ಮೂರ್ನಾಲ್ಕು ಪಟ್ಟು ಹೆಚ್ಚು ಮೊತ್ತ ನಮೂದಿಸಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗೆ ನೀಡಿರುವ ವಿವರದಲ್ಲಿ ಬಹಿರಂಗಗೊಂಡಿದೆ. 2013-14ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಜಲಮಂಡಳಿ ಬೋರ್‌ವೆಲ್‌ಗಳ ದುರಸ್ತಿ ವೆಚ್ಚಗಳ ಮಾಹಿತಿ ಲಭ್ಯವಾಗಿದೆ.

BWSSB spending money like water for bore well repair

ಜಲಮಂಡಳಿಯ ಮಲ್ಲೇಶ್ವರ ಉಪ ವಿಭಾಗದಲ್ಲಿ 2,196, ಜಯನಗರದಲ್ಲಿ 1.250, ವಿಜಯನಗರ ವಿದ್ಯುತ್ -4 ರಲ್ಲಿ 2,490 ಸೇರಿ ಪಂಪಿಂಗ್ ಸ್ಟೇಷನ್ ಮತ್ತು ಬೋರ್‌ವೆಲ್ ವಿಭಾಗದಿಂದ 4, 811 ಬೋರ್‌ವೆಲ್‌ಗಳಿವೆ. ಇದರ ನಂತರವೂ 700ಕ್ಕೂ ಅಧಿಕ ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ.

ಇದನ್ನು ಹೊರತುಪಡಿಸಿ ಬಿಬಿಎಂಪಿಯ ಬೋರ್‌ವೆಲ್‌ಗಳು ಸಹ ಸೇರ್ಪಡೆಗೊಂಡಿದೆ. 4,811 ಬೋರ್‌ವೆಲ್‌ಗಳಿಗೆ ಮಾತ್ರವೇ ತಿಂಗಳಿಗೆ 4 ಕೋಟಿಗೂ ಮೀರಿದ ವೆಚ್ಚವನ್ನು ಮಾಡಲಾಗುತ್ತಿದೆ. ಇನ್ನುಳಿದ ಬೋರ್‌ವೆಲ್‌ಗಳಿಗೆ ಎಷ್ಟು ಮೊತ್ತ ಖರ್ಚು ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನಾಲ್ಕು ವರ್ಷಗಳ ಮಾರ್ಚ್‌ನಲ್ಲಿ ಕನಿಷ್ಠ 3.80 ಕೋಟಿ ರೂ.ಗಳಿಂದ ಗರಿಷ್ಠ 4.90ಕೋಟಿ ರೂಗಳವರೆಗಿನ ಮೊತ್ತ ವ್ಯಯಿಸಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ.

English summary
Every one will be surprised that the BWSSB is spending around Rs.20 crores for repair and maintainance of bore wells in Bangalore city before summer season. There is a allegations of misappropriation of fund in this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X