ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನ ದರ ಹೆಚ್ಚಳದ ಶಾಕ್ ಕೊಟ್ಟ ಜಲಮಂಡಳಿ

|
Google Oneindia Kannada News

ಬೆಂಗಳೂರು, ಮೇ.14 : ನಿರೀಕ್ಷೆಯಂತೆ ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ. ಇಂದು ನಡೆದ ಜಲಮಂಡಳಿ ಅಧಿಕಾರಿಗಳ ಸಭೆಯಲ್ಲಿ ನೀರಿನ ದರವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

ಜಲಮಂಡಳಿ ಕಚೇರಿಯಲ್ಲಿ ಬುಧವಾರ ಜಲಮಂಡಳಿ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಎಂ.ಡಿ.ಲಕ್ಷ್ಮೀನಾರಾಯಣ, ಬಿಡಿಎ ಆಯುಕ್ತ ಶ್ಯಾಂ ಭಟ್ ಸೇರಿದಂತೆ ಜಲ ಮಂಡಳಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ನೀರಿನ ದರ ಹೆಚ್ಚಳದ ಕುರಿತು ಚರ್ಚೆ ನಡೆಸಿ ದರವನ್ನು ಪರಿಷ್ಕರಣೆ ಮಾಡಲಾಯಿತು. ಆದರೆ, ನೂತನ ದರ ಒಂದು ತಿಂಗಳ ನಂತರ ಜಾರಿಗೆ ಬರಲಿದೆ.

bwssb

ಸದ್ಯ ಜಲಮಂಡಳಿ ಆದಾಯ ಮಾಸಿಕ ಸರಾಸರಿ 50 ಕೋಟಿ ರೂ. ಇದ್ದರೆ ಅದರಲ್ಲಿ 35 ರಿಂದ 37 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಲಾಗುತ್ತದೆ. ನೀರು ಸರಬರಾಜು ನಿರ್ವಹಣೆಗೆ ಸುಮಾರು 10 ಕೋಟಿ ರೂ. ಖರ್ಚಾಗುತ್ತದೆ. ಆದ್ದರಿಂದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುದಾನದ ಕೊರತೆ ಕಾಡುತ್ತಿದೆ ಎಂಬ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. [ನೀರಿನ ದರ ಎಷ್ಟಿತ್ತು?]

ವಿದ್ಯುತ್ ದರ ಏರಿಕೆಗೆ ಅನುಗುಣವಾಗಿ ಮನೆ ಬಳಕೆ ಮತ್ತು ವಾಣಿಜ್ಯ ಬಳಕೆಯ ನೀರಿನ ದರವನ್ನು ಪರಿಷ್ಕರಣೆ ಮಾಡಲಾಯಿತು. ಗೃಹ ಬಳಕೆ ನೀರಿನ ದರದಲ್ಲಿ ಎರಡು ಪಟ್ಟು ಏರಿಕೆಯಾಗಿದ್ದರೆ, ವಾಣಿಜ್ಯ ಬಳಕೆ ನೀರಿನ ದರವನ್ನು ಹೆಚ್ಚಳ ಮಾಡಲಾಗಿದೆ.

ಸಭೆಯ ಬಳಿಕ ಮಾತನಾಡಿದ ಜಲಮಂಡಳಿ ಅಧ್ಯಕ್ಷ ರವಿಶಂಕರ್, ದರ ಹೆಚ್ಚಳದ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಲಾಗಿದೆ. ಸರ್ಕಾರ ಕೆಲವು ವಿವರಗಳನ್ನು ಕೇಳಿದೆ. ಅದನ್ನು ಒದಗಿಸಲಾಗಿದ್ದು, ಮುಂದಿನ ಒಂದು ತಿಂಗಳಿನಲ್ಲಿ ನೂತನ ದರ ಜಾರಿಗೊಳಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ನೀರಿನ ದರ ಪಟ್ಟಿ ಹೀಗಿದೆ

ಗೃಹ ಬಳಕೆ ದರ
* 6000 ಲೀಟರ್​ ನೀರಿಗೆ 6 ರೂ.ನಿಂದ 12ರೂಪಾಯಿಗೆ ಏರಿಕೆ
* 6000 ಲೀ. ನಿಂದ 20 ಸಾವಿರ ಲೀಟರ್​ ಗೆ 9 ರೂ. ನಿಂದ 25 ರೂ.ಗೆ ಏರಿಕೆ
* 20 ಸಾವಿರ ಲೀ. ನಿಂದ 40 ಸಾವಿರ ಲೀಟರ್​ ಗಳಿದೆ 15 ರೂ. ನಿಂದ 35 ರೂ. ಗೆ ಏರಿಕೆ
* 40 ಸಾವಿರ ಲೀಟರ್​ನಿಂದ 60 ಸಾವಿರ ಲೀಟರ್​ ಗಳಿಗೆ 30 ರೂ.ನಿಂದ 54 ರೂ. ಏರಿಕೆ
* 60 ಸಾವಿರ ಲೀಟರ್​ನಿಂದ ಮೇಲ್ಪಟ್ಟು 80 ರೂ. ಗೆ 57 ರೂ.ಗಳಿಂದ 80 ರೂ. ಗೆ ಏರಿಕೆ

ವಾಣಿಜ್ಯ ಬಳಕೆಗೆ ನೀರು
* 6 ಸಾವಿರ ಲೀಟರ್ ಗಳಿಗೆ 35 ರೂ. ನಿಂದ 65 ರೂ. ಗೆ ಏರಿಕೆ
* 40 ಸಾವಿರ ಲೀಟರ್​ಗೆ 70 ರೂಪಾಯಿ
* 60 ಸಾವಿರ ಲೀಟರ್​ಗೆ 75 ರೂಪಾಯಿ
* 60 ಸಾವಿರ ಲೀಟರ್ ಮೇಲ್ಪಟ್ಟು 80 ರೂ.

English summary
Bangalore Water Supply and Sewerage Board (BWSSB) gave shock to Bangaloreans by hiking the water tariff. Revised tariff will be come to effect form next month said BWSSB president Ravishankar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X