ಪ್ರೋರೇಟಾ ಶುಲ್ಕ ಹೆಚ್ಚಿಸಿದ ಬೆಂಗಳೂರು ಜಲಮಂಡಳಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 14 : ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಜಲಮಂಡಳಿಯು ಪ್ರೋರೇಟಾ ಶುಲ್ಕವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಶುಲ್ಕ ಏರಿಕೆಯಿಂದಾಗಿ ಪ್ರತಿ ತಿಂಗಳು ಜಲಮಂಡಳಿಗೆ ಸುಮಾರು 50 ಕೋಟಿ ಆದಾಯ ಬರಲಿದೆ.

ಬೆಂಗಳೂರು ಜಲಮಂಡಳಿ ಮೂರು ತಿಂಗಳ ಹಿಂದೆ ಪ್ರೋರೇಟಾ ಶುಲ್ಕವನ್ನು ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ಸಲ್ಲಿಕೆ ಮಾಡಿತ್ತು. ಇಲಾಖೆ ಬುಧವಾರ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಪ್ರೋರೇಟಾ ಶುಲ್ಕ ಶೇ 60 ರಿಂದ ಶೇ 100ರಷ್ಟು ಹೆಚ್ಚಾಗಿದೆ. [ದರ ಏರಿಕೆ ಬಿಸಿ ಮುಟ್ಟಿಸಲಿದೆ ಜಲ ಮಂಡಳಿ]

bwssb

ಏನಿದು ಪ್ರೋರೇಟಾ ಶುಲ್ಕ? : ಜಲಮಂಡಳಿ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟುವ ಮನೆ, ಅಪಾರ್ಟ್‌ಮೆಂಟ್‌, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲ ಮಾದರಿಯ ಕಟ್ಟಡಗಳಿಗೆ ನೀರಿನ ಸಂಪರ್ಕವನ್ನು ಪಡೆಯಲು ಜಲಮಂಡಳಿಗೆ ಪ್ರೋರೇಟಾ ಶುಲ್ಕವನ್ನು ಜನರು ಪಾವತಿ ಮಾಡಬೇಕು. 2008ರ ನಂತರ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]

ಏಕ ಕಂತಿನಲ್ಲಿ ಪಾವತಿ ಮಾಡಬೇಕು : ಹೊಸದಾಗಿ ನಿರ್ಮಾಣವಾಗುವ ವಸತಿ ಕಟ್ಟಡ, ಅಪಾರ್ಟ್‌ಮೆಂಟ್‌, ವಸತಿ ಸಮುಚ್ಚಯ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲ ಮಾದರಿಯ ಕಟ್ಟಡಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಏಕ ಕಂತಿನಲ್ಲಿ ಪ್ರೋರೇಟಾ ಶುಲ್ಕವನ್ನು ಜನರು ಪಾವತಿ ಮಾಡಬೇಕು.

ವಾಸದ ಕಟ್ಟಡವು ನೆಲ ಹಾಗೂ ಒಂದು ಅಂತಸ್ತು ಇದ್ದರೆ ಪ್ರೋರೇಟಾ ಶುಲ್ಕ ಪಾವತಿ ಮಾಡಬೇಕಿಲ್ಲ. ಬಳಿಕ ಅಂತಸ್ತಿನಲ್ಲಿ ಪ್ರತಿ ಚದರ ಮೀಟರ್‌ಗೆ 150 ರೂ., ಅಪಾರ್ಟ್‌ಮೆಂಟ್‌, ವಸತಿ ಸಮುಚ್ಚಯಗಳಿಗೆ 200 ರೂ., ವಸತಿಯೇತರ, ವಾಣಿಜ್ಯ ಕಟ್ಟಡಗಳಿಗೆ ರೂ. 300 ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಈ ಮೊತ್ತ ಪರಿಷ್ಕರಣೆಯಾಗಿದೆ.

ಪ್ರೋರೇಟಾ ಶುಲ್ಕದಿಂದ ಬರುವ ಆದಾಯದಿಂದ ಜಲಮಂಡಳಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುತ್ತದೆ. ಪೈಪ್‌ಲೈನ್ ಅಳವಡಿಕೆ, ಒಳಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತದೆ. ನಗರದ ಬಹುತೇಕ ಭಾಗಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುತ್ತದೆ. ಅವರೆಲ್ಲರೂ ಪ್ರೋರೇಟಾ ಶುಲ್ಕವನ್ನು ಪಾವತಿ ಮಾಡಬೇಕಾಗಿದೆ.

'ಬೆಂಗಳೂರು ನಗರದಲ್ಲಿ ಜನಸಾಂದ್ರತೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಹೊಸ ನೀರಿನ ಮಾರ್ಗಗಳನ್ನು ನಿರ್ಮಿಸಬೇಕಿದ್ದು ದರ ಏರಿಕೆ ಅನಿವಾರ್ಯವಾಗಿತ್ತು. ದರ ಪರಿಷ್ಕರಣೆಯಿಂದ ಪ್ರತಿ ತಿಂಗಳು 50 ಕೋಟಿ ಆದಾಯ ಬರಲಿದೆ' ಎಂದು ಜಲಮಂಡಳಿ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್‌ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore Water Supply and Sewerage Board (BWSSB) hiked pro-rata charges. Pro-rata charges are one-time service charges collected by BWSSB for providing new drinking water and sanitary connections to buildings.
Please Wait while comments are loading...