ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಮಂಡಳಿ: 14 ಎಸ್‌ಟಿಪಿಗಳ ಮೇಲ್ದರ್ಜೆಗೆ ಖಾಸಗಿ ಸಹಭಾಗಿತ್ವ

By Nayana
|
Google Oneindia Kannada News

ಬೆಂಗಳೂರು, ಜು.2: ಜಲಮಂಡಳಿಯು ತ್ಯಾಜ್ಯ ನೀರಿನ ಘಟಕಗಳನ್ನು ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿ ಅನುಸರಿಸಲು ತೀರ್ಮಾನಿಸಿದೆ.

ನಗರದಲ್ಲಿ ಪ್ರತಿನಿತ್ಯ 1400 ದಶಲಕ್ಷ ಲೀಟರ್‌ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಕೊಳಚೆ ನೀರನ್ನು ಮರುಬಳಕೆ ಮಾಡುವ ಉದ್ದೇಶದಿಂದ ಹಾಗೂ ಕೆರೆಗಳಿಗೆ ಶುದ್ಧ ನೀರನ್ನು ಬಿಡಲು ಜಲಮಂಡಳಿ 24 ಎಸ್‌ಟಿಪಿಗಳನ್ನು ನಿರ್ಮಿಸಿದೆ. ಈ ಘಟಕಗಳಿಂದ 1.57 ದಶಲಕ್ಷ ಲೀಟರ್‌ ಕೊಳಚೆ ನೀರನ್ನು ಸಂಸ್ಕರಿಸಲಾಗುತ್ತದೆ.

ಬೆಂಗಳೂರು ಜಲಮಂಡಳಿಗೆ ತುಂಬಿದ 2 ಕೋಟಿ ನೀರು ಶುಲ್ಕ ಮಾಯಬೆಂಗಳೂರು ಜಲಮಂಡಳಿಗೆ ತುಂಬಿದ 2 ಕೋಟಿ ನೀರು ಶುಲ್ಕ ಮಾಯ

ಇವುಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ 5 ಕೋಟಿ ರೂ. ಗೂ ಅಧಿಕ ಹಣ ಖರ್ಚಾಗಲಿದೆ. ಈ ಹೊರೆಯನ್ನು ತಗ್ಗಿಸಲು ಖಾಸಗಿ-ಸಾರ್ವಜನಿಕ ಸಹಭಾಗಿತ್ವ ಮಾದರಿ ಅನುಸರಿಸಲು ಜಲಮಂಡಳಿ ನಿರ್ಧರಿಸಿದೆ. ಹಳೆಯ 14 ಎಸ್‌ಟಿಪಿಗಳು ತಮ್ಮ ಒಟ್ಟು ಸಾಮರ್ಥ್ಯದ ಶೇ.60ರಷ್ಟು ಮಾತ್ರ ಕೆಲಸ ಮಾಡುತ್ತಿವೆ. ಬಹುತೇಕ ಎಸ್‌ಟಿಪಿಗಳು ಕೆರೆಯ ಬಳಿ ನಿರ್ಮಾಣವಾಗಿದ್ದು, ಪೂರ್ಣವಾಗಿ ಸಂಸ್ಕರಿತ ನೀರನ್ನು ಕೆರೆಗೆ ಹರಿಸಲು ಶಕ್ತವಾಗಿಲ್ಲ.

BWSSB adopts PPP model in WTP installation

14 ಎಸ್‌ಟಿಪಿಗಳನ್ನು ಮೇಲ್ದರ್ಜೆಗೇರಿಸುವ ಪೂರ್ಣ ಹೊಣೆಯನ್ನು ಜಲಮಂಡಳಿ ಹೊತ್ತುಕೊಳ್ಳಲು ಸಾಧ್ಯವಿಲ್. ಮೇಲ್ದರ್ಜೆ ಕಾಮಗಾರಿಗೆ ಜಲಮಂಡಳಿಯು ಶೇ.40 ರಷ್ಟು ಹಣ ಹೂಡಿಕೆ ಮಾಡಲಿದೆ. ಉಳಿದ ಶೇ.0ರಷ್ಟು ಮಮೊತ್ತವನ್ನು ಖಾಸಗಿ ಕಂಪನಿಗಳಿಂದ ಹೂಡಿಕೆ ಮಾಡಿಸಲಾಗುತ್ತದೆ.

English summary
Bengaluru Water Supply and Sewage Board is planning to upgrade Water Treatment Plants (WTP) with public private partnership (PPP) to reach the target of 1,400 lakhs liters of waste water treatment every day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X