ಬೆಂಗಳೂರು : ಬಳೇಪೇಟೆಯಲ್ಲಿ 60 ವರ್ಷದ ಕಟ್ಟಡ ಕುಸಿತ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15 : ಸುಮಾರು 60 ವರ್ಷದ ಹಳೆಯ ಕಟ್ಟಡವೊಂದು ಬೆಂಗಳೂರಿನ ಬಳೇಪೇಟೆಯಲ್ಲಿ ಕುಸಿದುಬಿದ್ದಿದೆ. ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಬಳೇಪೇಟೆಯಲ್ಲಿರುವ ನ್ಯೂ ಆರ್ಯಭವನ್ ಬೇಕರಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡ ಕುಸಿಯುವ ಸೂಚನೆ ಅರಿತ ಮೂವರು ಹೊರಗೆ ಓಡಿಬಂದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. [ಬೆಂಗಳೂರು : ಮೂವರ ಜೀವ ತಗೆದ 6 ಅಂತಸ್ತಿನ ಕಟ್ಟಡ]

building collapse

2 ಅಂತಸ್ತಿನ ಈ ಕಟ್ಟಡ ಶಿಥಿಲಗೊಂಡಿತ್ತು ಎಂದು ತಿಳಿದುಬಂದಿದೆ. ಎರಡು ಜೆಸಿಬಿಗಳು ಸ್ಥಳಕ್ಕೆ ಬಂದಿದ್ದು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಕೆಲವೇ ದಿನಗಳ ಹಿಂದೆ ಈ ಪ್ರದೇಶದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆದಿತ್ತು. [ಇಂಥಾ ಇಕ್ಕಟ್ಟಿನ ಪ್ರದೇಶದಲ್ಲಿ ಕಟ್ಟಿದ ಅಂಥಾ ಬಿಲ್ಡಿಂಗ್!]

ಘಟನೆಯ ಮಾಹಿತಿ ತಿಳಿದ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಶಿಥಿಲಗೊಂಡಿದ್ದ ಕಟ್ಟಡವನ್ನು ತೆರವುಗೊಳಿಸುವಂತೆ ಬಿಬಿಎಂಪಿಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಕಟ್ಟಡದ ಮಾಲೀಕರು ಅದನ್ನು ತೆರವುಗೊಳಿಸಿರಲಿಲ್ಲ. ಕಟ್ಟಡದ ಮೇಲೆ ಮತ್ತೊಂದು ನೀರಿನ ಟ್ಯಾಂಕ್ ಅಳವಡಿಕೆ ಮಾಡಲಾಗುತ್ತಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
60 year old building collapsed in Balepete, Bengaluru on Tuesday, March 15, 2016.
Please Wait while comments are loading...