ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಅಮೆರಿಕನ್ ಮಿಕ್ಸಾಲಜಿ, ಕೃಷಿ ಉತ್ಪನ್ನಗಳ ರುಚಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 12: ಬೆಂಗಳೂರಿನಲ್ಲಿ ಉದಯೋನ್ಮುಖ ಚೆಫ್ ಮತ್ತು ಮಿಕ್ಸಾಲಜಿಸ್ಟರಿಗೆ ವಿನೂತನ ಆಹಾರ ಮತ್ತು ಮಿಕ್ಸಾಲಜಿ ಸ್ಪರ್ಧೆಯನ್ನು ಫುಡ್ ಹಾಸ್ಪಿಟಾಲಿಟಿ ವರ್ಲ್ಡ್ ಶೋ(ಎಫ್‍ಎಚ್ ಡಬ್ಲ್ಯೂ)ನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯನ್ನು ಸೌಥ್ ಇಂಡಿಯಾ ಕಲಿನರಿ ಅಸೋಸಿಯೇಷನ್(ಎಸ್‍ಐಸಿಎ) ಸಹಯೋಗದಲ್ಲಿ 'ಸೌತ್ ಇಂಡಿಯಾ ಕಲಿನರಿ ಚಾಲೆಂಜ್ ಅಂಡ್ ಬೇಕಿಂಗ್ ಕಾಂಟೆಸ್ಟ್' ಮತ್ತು 'ಮಿಕ್ಸಾಲಜಿ ಚಾಲೆಂಜ್' ಕೂಡಾ ನಡೆಸಲಾಯಿತು.

ಅಮೆರಿಕಾದ ಮುಂಚೂಣಿಯ ಕೃಷಿ ಉತ್ಪನ್ನಗಳಾದ ಯುಎಸ್ ಕ್ಯಾನ್ ಬರೀಸ್, ವಾಷಿಂಗ್ಟನ್ ಆಪಲ್ಸ್, ಯುಎಸ್ ಪಿಯರ್ಸ್, ಕ್ಯಾಲಿಫೋರ್ನಿಯಾ ವಾಲ್‍ನಟ್ಸ್ ಮತ್ತು ಯುಎಸ್ ಪಿಕಾನ್ಸ್ ಅನ್ನು ಭಾರತದ ಎಚ್‍ಆರ್‍ಐ ಉದ್ಯಮಕ್ಕೆ ಪರಿಚಯಿಸುವ ಉದ್ದೇಶ ಹೊಂದಿದೆ.[ಬೆಂಗಳೂರಿನಲ್ಲಿ ಅಮೆರಿಕದ ಆಹಾರ ಮೇಳ, ಸ್ಪರ್ಧೆ]

ಅತ್ಯಂತ ನಿರೀಕ್ಷೆಯ ಈ ಪ್ರದರ್ಶನ ಮುಂಬೈನ ಅಮೆರಿಕಾ ರಾಯಭಾರ ಕಛೇರಿಯ ಸೀನಿಯರ್ ಅಗ್ರಿಕಲ್ಚರಲ್ ಅಟ್ಯಾಚೆ ಫಾರ್ ಅಗ್ರಿಕಲ್ಚರಲ್ ಅಫೇರ್ಸ್ ಆಡಮ್ ಬ್ರಾನ್ಸನ್ ಪ್ರಾರಂಭಿಸಿ ಈ ಕಾರ್ಯಕ್ರಮವನ್ನು ಹಾರೈಸಿದರು.

Budding Chefs and Mixologists create magic with U.S. Premium Agricultural Products at Food Hospitality World, Bengaluru

ಆಡಮ್ ಬ್ರಾನ್ಸನ್ ಯುಎಸ್ ಪ್ರೀಮಿಯಂ ಅಗ್ರಿಕಲ್ಚರಲ್ ಬೂಥ್ ಉದ್ಘಾಟಿಸಿ, 'ಬೆಂಗಳೂರಿನ ಎಫ್‍ಎಚ್‍ಡಬ್ಲ್ಯೂನಲ್ಲಿ ಭಾಗವಹಿಸಲು ನಮಗೆ ಬಹಳ ಸಂತೋಷವಾಗಿದೆ. [ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ]

ಭಾರತ ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನಗಳನ್ನು ತರಲು ಶ್ರಮಿಸುತ್ತೇವೆ. ಈ ಪ್ರದರ್ಶನ ನಮ್ಮ ಉದ್ದೇಶಿತ ಗ್ರಾಹಕರಿಗೆ ಅಮೆರಿಕಾದ ಮುಂಚೂಣಿಯ ಕೃಷಿ ಉತ್ಪನ್ನಗಳ ರುಚಿ ಮತ್ತು ಅನುಭವವನ್ನು ನೀಡಲು ಅತ್ಯುತ್ತಮ ಅವಕಾಶವಾಗಿದೆ' ಎಂದರು. [ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!]

ಕಲಿನರಿ ಮತ್ತು ಮಿಕ್ಸಾಲಜಿ ಸ್ಪರ್ಧೆ ದಕ್ಷಿಣ ಭಾರತದ 55 ಬಾಣಸಿಗರು ಮತ್ತು ಮಿಕ್ಸಾಲಜಿಸ್ಟರು ಭಾಗವಹಿಸಿದ್ದು ಅಪಾರ ಯಶಸ್ಸು ಕಂಡಿತು. ಉತ್ಸಾಹಿಗಳು ಮತ್ತು ಭಾಗವಹಿಸಿದವರು ವಿನೂತನ ರುಚಿಗಳನ್ನು ಮುಂಚೂಣಿಯ ಅಮೆರಿಕಾದ ಕೃಷಿ ಉತ್ಪನ್ನಗಳಾದ ಯುಎಸ್ ಕ್ರಾನ್‍ಬೆರ್ರೀಸ್, ವಾಷಿಂಗ್ಟನ್ ಆಪಲ್ಸ್, ಯುಎಸ್ ಪಿಯರ್ಸ್, ಕ್ಯಾಲಿಫೋರ್ನಿಯಾ ವಾಲ್‍ನಟ್ಸ್ ಮತ್ತು ಯುಎಸ್ ಪಿಕಾನ್ಸ್ ಗಳನ್ನು ಮುಖ್ಯ ಅಳವಡಿಕೆಗಳಾಗಿಸಿ ಸಿದ್ಧಪಡಿಸಿದರು. [ಜ್ವಾಳದ ರೊಟ್ಟಿ ವಿದೇಶದಲ್ಲೂ ಸಿಕ್ತಾವ್ರೀ!]

ಬೆಂಗಳೂರಲ್ಲಿ ಅಮೆರಿಕನ್ ಮಿಕ್ಸಾಲಜಿ, ಕೃಷಿ ಉತ್ಪನ್ನಗಳ ರುಚಿ

ಯು.ಎಸ್ ಕ್ಯಾನ್ ಬರಿ ಮಾರ್ಕೆಟಿಂಗ್ ಕಮಿಟಿಯ ಭಾರತದ ಪ್ರತಿನಿಧಿ ಕೀತ್ ಸುನ್ಡ್ರೆಲ್ ಮಾತನಾಡಿ, ಈ ಮಿಕ್ಸಾಲಜಿ ಹಾಗೂ ಕಲ್‍ನರಿ ಸ್ಪರ್ಧೆಯಲ್ಲಿ ಭಾಗವಹಿಸಿ ಅಮೇರಿಕಾದ ಪ್ರೀಮಿಯಂ ಅಗ್ರಿಕಲ್ಚರಲ್ ಉತ್ಪನ್ನಗಳನ್ನು ಬಳಸಿ ಬಹಳ ಕ್ರೀಯಾಶೀಲತೆಯಿಂದ ಹೊಸ ರೆಸಿಪಿಗಳನ್ನು ರೂಪಿಸಿದ ವಿಜೇತರಾದವರಿಗೆ ಅಭಿನಂದನೆಗಳು. ನಾವು ಇಲ್ಲಿ ಸಿಕ್ಕ ರೆಸ್ಪಾನ್ಸಿಂದ ಬಹಳ ಉತ್ಸುಕರಾಗಿದ್ದು, ನಮ್ಮ ಪದಾರ್ಥಗಳನ್ನು ಜನರತ್ತ ಕೊಂಡೊಯ್ಯುವ ನಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು. [ಬಾರ್ಬಿಕ್ಯೂ ನೇಷನ್ ಫುಡ್ ರುಚಿ ಎಲ್ಲೆಡೆ ಹಬ್ಬುತ್ತಿದೆ]

ಬಾರ್ ಸ್ಕೈರ್ ನ ಟಿ ಹಾವ್‍ಕಿಪ್ ಮತ್ತು ಸಾಯಿ ವೆಂಕಟ್, ವಿಜಯ ಕಲಿನರಿ ಮತ್ತು ಮಿಕ್ಸಾಲಜಿ ಸ್ಪರ್ಧೆಯ ವಿಜೇತರೆನಿಸಿದರು. ಅವರು ರಚಿಸಿದ ಬೆರ್ರಿ ಬ್ಲಾಷ್ ಮಾರ್ಟಿನಿ ಮತ್ತು ಎನ್‍ಲೈಟನ್ ಮೂನ್ ವಿಜೇತ ಸೃಷ್ಟಿಗಳನ್ನು ಎಸ್‍ಐಸಿಎ ಪ್ರತಿನಿಧಿಗಳು, ಉದ್ಯಮ ಸದಸ್ಯರು ಮತ್ತು ಯುಎಸ್ಡಿಎ ಅಧಿಕಾರಿಗಳು ತೀರ್ಪುಗಾರರಾಗಿದ್ದು ಆಯ್ಕೆ ಮಾಡಿದರು.

English summary
Bengaluru saw an exciting Culinary & Mixology Competition for budding chefs and mixologists at the Food Hospitality World Show (FHW) today. The competition was organized as a special event in concurrence with the “South India Culinary Challenge & Baking Contest” and “Mixology Challenge” in association with the South India Culinary Association (SICA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X