ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೀಕ್ಷೆ ಮುಗಿಸಿ ಮನೆಗೆ ತೆರಳುವ ಒಳಗೆ ರಿಸಲ್ಟ್ !

By Nayana
|
Google Oneindia Kannada News

Recommended Video

ಪರೀಕ್ಷೆ ಮುಗಿಸಿ ಮನೆಗೆ ತೆರಳುವ ಒಳಗೆ ರಿಸಲ್ಟ್ ! | Oneindia kannada

ಬೆಂಗಳೂರು, ಜು.3: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ 7 ಮತ್ತು 8ನೇ ಸೆಮಿಸ್ಟರ್‌ ಪರೀಕ್ಷೆಗಳು ಮುಗಿದ ಮೂರು ಗಂಟೆಯಲ್ಲೇ ಅಂತಿಮ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಆನ್‌ಲೈನ್‌ನಲ್ಲಿ ಪರೀಕ್ಷೆಗಳ ಫಲಿತಾಂಶ ಕೆಲ ಗಂಟೆಯಲ್ಲೇ ಹೊರಬಂದಿರುವ ಉದಾಹರಣೆಗಳಿವೆ ಆದರೆ ಲಿಖಿತ ಪರೀಕ್ಷೆ ನಡೆದ ಕೆಲವೇ ಗಂಟೆಗಳಲ್ಲಿ ಒಟ್ಟಾರೆ ಫಲಿತಾಂಶ ಪ್ರಕಟವಾದ ಉದಾಹರಣೆಗಳು ಎಲ್ಲೂ ಇಲ್ಲ. ಆದರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಪರೀಕ್ಷೆ ಮುಗಿದ ಮೂರೇ ಗಂಟೆಗಳಲ್ಲಿ ತಮ್ಮ ಫಲಿತಾಂಶ ಪಡೆದುಕೊಂಡು ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ.

ಬೆಂಗಳೂರು ವಿವಿ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜುಗಳು ಜು.2ಕ್ಕೆ ಆರಂಭ ಬೆಂಗಳೂರು ವಿವಿ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜುಗಳು ಜು.2ಕ್ಕೆ ಆರಂಭ

ಕಳೆದ 10 ದಿನಗಳಿಂದ ಸುಮಾರು 150 ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಬರೆಯುತ್ತಿದ್ದರು. ಪ್ರತಿ ದಿನ 2 ಗಂಟೆಗೆ ಪರೀಕ್ಷೆ ಮುಗಿಯುತ್ತಿತ್ತು. ಉತ್ತರ ಪತ್ರಿಕೆಯ ಮೌಲ್ಯ ಮಾಪನವನ್ನು ವಿವಿಯ ಮೌಲ್ಯಮಾಪನ ವಿಭಾಗ ಆಯಾ ದಿನವೇ ಮಾಡಿದ್ದು, ಅಂತಿಮ ಪರೀಕ್ಷೆ ದಿನ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಲಾಗಿದೆ ಎಂದು ಬೆಂಗಳೂರು ವಿವಿ ಮೌಲ್ಯಮಾಪನ ವಿಭಾಗದ ಸಿ. ಶಿವರಾಜು ತಿಳಿಸಿದ್ದಾರೆ.

BU creates history declaring results within three hours of exams

ಯುವಿಸಿಇಯಲ್ಲಿ ಹಿಂದೆ ಪರೀಕ್ಷೆ ಮುಗಿದ 18 ಗಂಟೆಗಳಲ್ಲಿ, 24 ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸಿದ ಉದಾಹರಣೆಗಳಿವೆ. ಈಗ ಅದನ್ನೂ ದಾಟಿ ಕೇವಲ ಮೂರು ಗಂಟೆಗಳಲ್ಲಿ ಫಲಿತಾಂಶ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

English summary
Bengaluru university has been created history by declaring results of 7th and 8th semester of civil engineering course exams. Interestingly it was written exam rather online or any digital format.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X