• search

ಬೆಂಗಳೂರಲ್ಲಿ 100 ಹೊಸ ಸಿಗ್ನಲ್‌ಗಳ ಅಳವಡಿಕೆ, ಹಳೆ ಸಿಗ್ನಲ್‌ಗಳು ಮೇಲ್ದರ್ಜೆಗೆ

Subscribe to Oneindia Kannada
For bangalore Updates
Allow Notification
For Daily Alerts
Keep youself updated with latest
bangalore News

  ಬೆಂಗಳೂರು, ಅಕ್ಟೋಬರ್ 9: ಬೆಂಗಳೂರಲ್ಲಿರುವ ಟ್ರಾಫಿಕ್ ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ಹೊಸ 100 ಸಿಗ್ನಲ್ ಅಳವಡಿಕೆಗೆ ಸಂಚಾರ ಪೊಲೀಸರು ಮುಂದಾಗಿದ್ದಾರೆ.

  ಬೆಂಗಳೂರು ಟ್ರಾಫಿಕ್ ಸಿಗ್ನಲ್ ಸ್ಮಾರ್ಟ್‌ಗೊಳಿಸಲಿದೆ ಜಪಾನ್

  ಈ ಕುರಿತು ಸಂಚಾರ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತ ಆರ. ಹಿತೇಂದ್ರ ಅವರು ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜತೆಗೂಡಿ ನಗರದಲ್ಲಿರುವ ಟ್ರಾಫಿಕ್ ಸಿಗ್ನಲ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜತೆಗೆ 100 ಹೊಸ ಸಿಗ್ನಲ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

  ಸೀಟ್‌ ಬೆಲ್ಟ್ ಧರಿಸದೆ ಅಪಘಾತ, ಕರ್ನಾಟಕದಲ್ಲೇ ಹೆಚ್ಚು: ವರದಿ

  ಬೆಂಗಳೂರಿನಲ್ಲಿ 400 ಕ್ಕೂ ಹೆಚ್ಚು ಟ್ರಾಫಿಕ್ ಸಿಗ್ನಲ್‌ಗಳಿವೆ ಆದರೆ ಎಷ್ಟು ಸಿಗ್ನಲ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ, ಒಂದು ದಿನ ಸರಿ ಇದ್ದರೆ ಮತ್ತೊಂದು ದಿನ ಸಿಗ್ನಲ್ ಕೆಟ್ಟಿ ನಿಂತಿರುತ್ತದೆ, ಸಂಚಾರ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

  BTP to install 100 new signals in the city

  ಈಗಿರುವ ಸಿಗ್ನಲ್‌ಗಳಲ್ಲಿ ಸಮಯವನ್ನು ತೋರಿಸುವ ಸಿಗ್ನಲ್‌ಗಳು ಕಡಿಮೆ ಇದೆ, ಇನ್ನೊಂದೆಡೆ ಸಿಗ್ನಲ್ ಗೆ ಕಾಯುತ್ತಿರುವ ವಾಹನ ಸವಾರರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ, ಸಮಯವನ್ನು ತೋರಿಸುವ ಸಿಗ್ನಲ್‌ಗಳನ್ನು ಹೆಚ್ಚೆಚ್ಚು ಅಳವಡಿಸಬೇಕಿದೆ. ಆಗ ಇಂಧನವನ್ನೂ ಹೆಚ್ಚು ಉಳಿತಾಯಮಾಡಬಹುದು. ಇನ್ನು ಎಷ್ಟು ಸಮಯ ಇದೆ ಎಂದು ಮೊದಲೇ ತಿಳಿದರೆ ವಾಹನವನ್ನು ಆಫ್ ಮಾಡಿಕೊಂಡು ನಿಲ್ಲಬಹುದಾಗಿದೆ.

  ಸಂಚಾರ ಸೂಚನಾ ಫಲಕಗಳಿಗೆ ಅಡ್ಡವಾಗಿದ್ದ ಫ್ಲೆಕ್ಸ್‌ಗಳ ತೆರವು

  ಬೆಂಗಳೂರಲ್ಲಿ 2019ರ ವೇಳೆ ಜಪಾನ್ ಮಾದರಿಯ 29 ಸಿಗ್ನಲ್ ಗಳು ಬೆಂಗಳೂರಿಗೆ ಕಾಲಿಡಲಿವೆ. ಜಪಾನ್ ಇಂಟರ್ ನ್ಯಾಷನಲ್ ಕಾರ್ಪೊರೇಷನ್ ಏಜೆನ್ಸಿಯು ಸುಮಾರು 72 ಕೋಟಿ ಹಣವನ್ನು ಹೂಡಿಕೆ ಮಾಡಲಿದೆ. ಕಾಂಬೋಡಿಯಾ, ಮಯನ್ಮಾರ್, ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆಯನ್ನು ಜೆಐಸಿಎ ಅಭಿವೃದ್ಧಿಗೊಳಿಸಿದ್ದು ಯಶಸ್ವಿಯಾಗಿದೆ. ಈಗ ಬೆಂಗಳೂರು ನಗರದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

  ಇನ್ನಷ್ಟು ಬೆಂಗಳೂರು ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Bengaluru traffic police has given work orders to Bharat Electronics Ltd to upgrade the existing traffic signals to adaptive signals and to install 100 new signals in the city.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more