ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೆ ಸಿಎಂ ಆಗಿರಬಹುದು, ಮೋದಿ ಪ್ರಧಾನಿ ಅಲ್ಲವೇ ಎಂದ ಯಡಿಯೂರಪ್ಪ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿಯನ್ನ ತರಾಟೆಗೆ ತೆಗೆದುಕೊಂಡ ಬಿ ಎಸ್ ಯಡಿಯೂರಪ್ಪ | Oneindia Kannada

ಬೆಂಗಳೂರು, ಸೆಪ್ಟೆಂಬರ್ 20: ರಾಜ್ಯದಲ್ಲಿ ಕುಮಾರಸ್ವಾಮಿ ಅಧಿಕಾರದಲ್ಲಿರಬಹುದು ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ ಎಂಬುದನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಮರೆಯಬಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎದಿರೇಟು ನೀಡಿದ್ದಾರೆ.

ಗುರುವಾರ ಬೆಳಗ್ಗೆ ಕುಮಾರಸ್ವಾಮಿ ಮಾತನಾಡುತ್ತಾ ತಮ್ಮ ಬಳಿ ಅಧಿಕಾರ ಇದೆ ಎನ್ನುವುದನ್ನು ಯಡಿಯೂರಪ್ಪ ಮರೆಯ ಬಾರದು ಎಂಬ ಹೇಳಿಕೆ ನೀಡಿದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಇಂತಹ ಧಮ್ಕಿಗೆಲ್ಲ ಹೆದರುವುದಿಲ್ಲ ನನ್ನ ವಿರುದ್ಧ ಯಾವುದೇ ಪ್ರಕರಣಗಳು ಈಗ ನ್ಯಾಯಾಲಯದಲ್ಲಿ ಇಲ್ಲ, ಹಿಂದೆ ನನ್ನ ಮೇಲೆ ಇದ್ದ ಎಲ್ಲ ಆರೋಪಗಳು ಸುಳ್ಳು ಎಂಬುದು ಈಗಾಗಲೇ ತೀರ್ಮಾನವಾಗಿದೆ.

ಯಡಿಯೂರಪ್ಪನವರೇ ಅಧಿಕಾರ ನನ್ನ ಬಳಿ ಇದೆ: ಕುಮಾರಸ್ವಾಮಿ ನೇರ ಎಚ್ಚರಿಕೆ ಯಡಿಯೂರಪ್ಪನವರೇ ಅಧಿಕಾರ ನನ್ನ ಬಳಿ ಇದೆ: ಕುಮಾರಸ್ವಾಮಿ ನೇರ ಎಚ್ಚರಿಕೆ

ಆದರೆ ಕುಮಾರಸ್ವಾಮಿ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣಗಳು ನಡೆಯುತ್ತಿವೆ. ದೇವೇಗೌಡರ ಕುಟುಂಬದ ವಿರುದ್ಧ ಡಿನೋಟಿಫಿಕೇಷನ್ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿಲ್ಲವೇ ಎಂದು ಆರೋಪಿಸಿದರು.

BSY dares HDK we have power in center

ಡಿಕೆ ಶಿವಕುಮಾರ್ ಬುಧವಾರ ಪ್ತರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜೈಲಿಗೆ ಹೋಗಿ ಬಂದವರು ಎಂದು ಹೇಳಿದ್ದಾರೆ, ಶಿವಕುಮಾರ್ ಯಾಕೆ ಈ ರೀತಿ ಮಾತನಾಡಿದ್ದಾರೆ ಅದರ ಹಿಂದಿನ ಪ್ರೇರಣೆ ಯಾರು ಇದೆಲ್ಲವೂ ನನಗೆ ಗೊತ್ತಿದೆ.

ಡಿಕೆಶಿಯನ್ನು ಕುಮಾರಸ್ವಾಮಿ ಶಾಸಕರೊಂದಿಗೆ ಹಠಾತ್ ಭೇಟಿ ಮಾಡಿದ್ದೇಕೆ? ಡಿಕೆಶಿಯನ್ನು ಕುಮಾರಸ್ವಾಮಿ ಶಾಸಕರೊಂದಿಗೆ ಹಠಾತ್ ಭೇಟಿ ಮಾಡಿದ್ದೇಕೆ?

ಕಾಲ ಬಂದಾಗ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ, ಇನ್ನುಮುಂದೆ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಹದ್ದುಬಸ್ತಿನಲ್ಲಿದ್ದು ಮಾತನಾಡದಿದ್ದರೆ ಅದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ರಾಜ್ಯದ ಜನರಿಗೆ ಯಾರು ಎಷ್ಟು ಚಾರಿತ್ರ್ಯವಂತರು ಎಂದು ಗೊತ್ತಿದೆ ಎಂದು ತಿರುಗೇಟು ನೀಡಿದರು.

English summary
State Bjp president B.S.Yeddyurappa has dared chief minister H.D.Kumaraswamy that the latter might have power in the state and same time he shouldn't forget that Modi led Bjp government is in the center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X