ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿಯಿಂದ ಲಿಂಗಾಯತ ಮಠಾಧೀಶರಿಗೆ ಅವಮಾನ: ಬಿಎಸ್‌ವೈ ಆರೋಪ

By Nayana
|
Google Oneindia Kannada News

ಬೆಂಗಳೂರು, ಮೇ 24: ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲಾ ಮಠಾಧೀಶರಿಗೆ ಅಪಮಾನ ಮಾಡಿದ್ದಾರೆ, ಸ್ವಾಮೀಜಿಗಳಿಗೆ ಬನ್ನಿ ರಾಜಕೀಯಕ್ಕೆ ಎಂದು ಹಗುರವಾಗಿ ಮಾತಾಡಿದ್ದಾರೆ, ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಸ್ವಾಮೀಜಿಗಳಿಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕಿಡಿಕಾರಿದ್ದಾರೆ.

ಡಾಲರ್ಸ್‌ ಕಾಲೊನಿಯ ನಿವಾಸದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಹಾಗೂ ಸಾಣೇಹಳ್ಳಿ ಶ್ರೀಗಳ ಬಗ್ಗೆ ಕುಮಾರಸ್ವಾಮಿ ಹಗುರವಾಗಿ ಮಾತಾಡಿದ್ದಾರೆ. ಕುಮಾರಸ್ವಾಮಿಯವರೇ ನೀವು ಎಷ್ಟು ಕ್ಷೇತ್ರದಲ್ಲಿ ಗೆದ್ದಿದೀರಿ, ಅಶ್ವಮೇಧಯಾಗದ ಕುದುರೆ ಕಟ್ಟಿ ಹಾಕಲು ನೀವು ಎಷ್ಟು ಸೀಟ್ ಗೆದ್ದಿದ್ದೀರಿ ಎಂದು ಗೊತ್ತಿದೆಯಾ ಎಂದು ಪ್ರಶ್ನಿಸಿದರು.

BSY accuses HDK insulted seers of Lingayath

ಬಿಜೆಪಿಗರು ಟೀಕೆಯಲ್ಲೇ ಕಾಲ ದೂಡುತ್ತಿದ್ದಾರೆ: ಎಚ್‌ಡಿಕೆ ವಾಗ್ದಾಳಿಬಿಜೆಪಿಗರು ಟೀಕೆಯಲ್ಲೇ ಕಾಲ ದೂಡುತ್ತಿದ್ದಾರೆ: ಎಚ್‌ಡಿಕೆ ವಾಗ್ದಾಳಿ

ಕುಮಾರಸ್ವಾಮಿಯವರೆ ನೀವು 149 ಕಡೆ ಠೇವಣಿ ಕಳೆದುಕೊಂಡಿರೋದು ಗೊತ್ತಿದೆಯಾ, ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ, ರಾಷ್ಟ್ರೀಯ ನಾಯಕರನ್ನು ತಬ್ಬಿಕೊಳ್ಳುತ್ತೀರಾ ಆದರೆ ನಿಮ್ಮ ಮುಖ್ಯಮಂತ್ರಿ ಮಾಡಿದ ಸಿದ್ದರಾಮಯ್ಯನವರನ್ನು ಮಾತನಾಡಿಸಿಲ್ಲ, ಇದು ಸಿದ್ದರಾಮಯ್ಯ ಮತ್ತು ಅವರ ಸಮುದಾಯಕ್ಕೆ ಮಾಡಿರುವ ಅಪಮಾನ ಅಲ್ಲವಾ ಎಂದರು.

ಎಚ್‌ಡಿ ಕುಮಾರಸ್ವಾಮಿಯವರು ಮೇ 23ರಂದು ಕರ್ನಾಟದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ಹಲವು ದೇವಾಲಯಗಳು ಹಾಗೂ ಮಠಗಳಿಗೆ ಭೇಟಿ ನೀಡಿದ್ದರು.

English summary
Former chief minister B.S Yeddyurappa accused that chief minister H.D.Kumaraswamy has insulted all Lingayat seers accusing they were involved in politics during recent political crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X