ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಸಂಪನ್ಮೂಲ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ: ಬಿಎಸ್ ವೈ ಆರೋಪ

|
Google Oneindia Kannada News

ಬೆಂಗಳೂರು, ಮಾರ್ಚ್ 22: ''ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಅವರ ಅಧೀನದಲ್ಲಿರುವ ಜಲಸಂಪನ್ಮೂಲ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು(ಮಾ.22) ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, '2013 ರಲ್ಲಿ ವಿಶ್ವೇಶ್ವರಯ್ಯ ಜಲನಿಗಮದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸಚಿವ ಎಂ ಬಿ ಪಾಟೀಲ್ 25 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ' ಎಂದು ದೂರಿದ್ದಾರೆ.

ಪ್ರತ್ಯೇಕ ಧರ್ಮ: ಬ್ರಾಹ್ಮಣರಿಗೆ ಎಂಥಾ ಸಲಹೆ ನೀಡಿದ್ರು ಗೊತ್ತಾ ಸಚಿವ ಪಾಟೀಲ್?ಪ್ರತ್ಯೇಕ ಧರ್ಮ: ಬ್ರಾಹ್ಮಣರಿಗೆ ಎಂಥಾ ಸಲಹೆ ನೀಡಿದ್ರು ಗೊತ್ತಾ ಸಚಿವ ಪಾಟೀಲ್?

BS Yeddyurappa blames minister MB Patil in a pressmeet in Bengaluru

"ಬೇರೆ ರಾಜ್ಯದ ಸಂಸ್ಥೆಗಳು ಸಲ್ಲಿಸಿದ ಫೇಕ್ ದಾಖಲೆಗಳ ಮೇಲೆ ಟೆಂಡರ್ ನೀಡಲಾಗಿದೆ. 'ಟೆಂಡರ್ ಗೆ ಸಲ್ಲಿಸಲಾಗಿದ್ದ ಅರ್ಜಿಗಳಲ್ಲಿ ತ್ರಿಪುರ ಮತ್ತು ಮಣಿಪುರ ರಾಜ್ಯದ ಇಲಾಖೆಯ ಒಂದೇ ವ್ಯಕ್ತಿಯ ಸಹಿ ಇದೆ. ಇದು ಹೇಗೆ ಸಾಧ್ಯ?" ಎಂದು ಬಿಎಸ್ ವೈ ಪ್ರಶ್ನಿಸಿದ್ದಾರೆ.

ಜಲ ಸಂಪನ್ಮೂಲ ಇಲಾಖೆಯಲ್ಲಿ ಸುಮಾರು 158 ಕೋಟಿ ರೂಪಾಯಿ ಹಗರಣ ನಡೆದಿದ್ದು, ಈಗಾಗಲೇ ಎಸಿಬಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು.

English summary
"Karnataka state Water resource minister M B Patil has involved in Rs.25 crore corruption scam" Karnataka stae BJP president B S Yeddyurappa told in a pressmeet in Bengaluru on March 22nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X