ರಾಜ್ಯ ಬಿಜೆಪಿಯಲ್ಲಿ ಹೊಗೆಯಾಡುತ್ತಲೇ ಇದೆ ಭಿನ್ನಮತೀಯ ಕಿಚ್ಚು!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 7: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಹತ್ತಿರಕ್ಕೆ ಬರುತ್ತಿದೆ. ಆದರೆ, ಆ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕಿರುವ ರಾಜ್ಯ ಬಿಜೆಪಿಯಲ್ಲಿ ಮಾತ್ರ ಭಿನ್ನಮತ ಮತ್ತೆ ಮತ್ತೆ ಸ್ಫೋಟಗೊಳ್ಳುತ್ತಿರುವುದು ಆ ಪಕ್ಷದ ಕಾರ್ಯಕರ್ತರ ಮೇಲೂ ಪರಿಣಾಮ ಬೀರಲಾರಂಭಿಸಿದೆ.

ಪಿಎ ಕಿಡ್ನಾಪ್ ಕೇಸ್ ಎಲ್ಲವೂ ಕಾಂಗ್ರೆಸ್ ಕುತಂತ್ರ: ಈಶ್ವರಪ್ಪ

ಭಾನುವಾರ (ಆಗಸ್ಟ್ 6) ನಡೆದ ಪಕ್ಷದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಈಶ್ವರಪ್ಪ ಅವರ ಗೈರು ಹಾಜರಿ, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮಾತ್ರವಲ್ಲ ಹೈಕಮಾಂಡ್ ಎಷ್ಟೇ ಕಾಳಜಿ ತೋರಿದರೂ, ಅದು ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಸಾಬೀತಾಗಿದೆ.

BS Eeshwarappa absent for the Karnataka BJP working committee meeting

ಭಾನುವಾರ ನಡೆದ ಕಾರ್ಯಕಾರಿಣಿ ಸಭೆಯ ಮೊದಲ ದಿನ ಹಲವಾರು ಪದಾಧಿಕಾರಿಗಳು ಬಿಎಸ್‍ವೈ ಮತ್ತು ಈಶ್ವರಪ್ಪ ನಡುವಿನ ವೈಮನಸ್ಸು ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತಿದೆ ಎಂದು ಬಹಿರಂಗವಾಗಿಯೇ ಹೇಳಿರುವುದು ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಮತ್ತೆ ಭುಗಿಲೇಳುವಂತೆ ಮಾಡಿದೆ.

'ಸಿದ್ದರಾಮಯ್ಯ ಬತ್ತಿದ ಕೆರೆಗಳನ್ನು ಮಾರಲು ಮುಂದಾಗಿರುವುದು ಸರಿಯಲ್ಲ'

ಸಭೆಗೆ ಹಾಜರಾಗುವಂತೆ ಪಕ್ಷದ ಇತರ ನಾಯಕರು ಈಶ್ವರಪ್ಪ ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ ಎಂದು ಹೇಳಲಾಗಿದೆ. ಕೆಲವರ ದೂರವಾಗಿ ಸಂಪರ್ಕಕ್ಕೆ ಈಶ್ವರಪ್ಪ ಸಿಕ್ಕರಾದರೂ, ಸಭೆಗೆ ಆಗಮಿಸಲು ಕೆಲವಾರು ನೆಪಗಳನ್ನು ಹೇಳಿ ತಪ್ಪಿಸಿಕೊಂಡರೆಂದೂ ಹೇಳಲಾಗಿದೆ.

Nitish Kumar Forms Government In Bihar With Bjp | Oneindia Kannada

ಈಶ್ವರಪ್ಪ ಅವರು, ತಾವು ಸಭೆಗೆ ಬರದೇ ತಮ್ಮ ಬೆಂಬಲಿಗರನ್ನು ಮಾತ್ರ ಸಭೆಗೆ ಕಳುಹಿಸಿರುವುದು ಹಾಗೂ ಆ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ತಮ್ಮ ಬೆಂಬಲಿಗರ ಮೂಲಕ ತಿಳಿಸಲು ಯತ್ನಿಸಿರುವುದು ಹಲವಾರು ನಾಯಕರಿಗೆ ಬೇಸರ ತರಿಸಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The differences between Karnataka State BJP leader once again came to the surface as KS Eeshwarappa remained absent for the state working committee meeting in Bengaluru on August 7, 2017.
Please Wait while comments are loading...