ಸ್ಮಾರ್ಟ್ ಸಿಟಿ ಅಪ್ಲಿಕೇಷನ್ ಹೊರ ಬಿಟ್ಟ ಬಿಬಿಎಂಪಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 03: ಬೃಹತ್ ಬೆಂಗಳೂರು ಮಹಾನಗರದ ಜನತೆ ಸ್ಮಾರ್ಟ್ ಆಗಿರುವ ಮೊಬೈಲ್ ಅಪ್ಲಿಕೇಷನ್ ವೊಂದನ್ನು ಬಿಬಿಎಂಪಿ ಪರಿಚಯಿಸಿದೆ. ಬೆಂಗಳೂರನ್ನು 'ಸ್ಮಾರ್ಟ್ ಸಿಟಿ' ಯೋಜನೆ ಪಟ್ಟಿಗೆ ಸೇರಿಸಲು ಬಿಬಿಎಂಪಿಯಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಈ ನಿಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಮೇಯರ್ ಬಿಎನ್ ಮಂಜುನಾಥ್ ರೆಡ್ಡಿ ಹೇಳಿದ್ದಾರೆ.

ಸ್ಮಾರ್ಟ್ ಸಿಟ್ ಅಪ್ಲಿಕೇಷನ್ ಮೂಲಕ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಸುಲಭವಾಗಿ ಬಿಬಿಎಂಪಿಗೆ ತಲುಪಿಸಬಹುದು. ಕಾನೂನು ಉಲ್ಲಂಘನೆ ಘಟನೆಗಳನ್ನು ಪೊಲೀಸರಿಗೆ ನೇರವಾಗಿ ವರದಿ ಮಾಡಬಹುದು. ಬೆಂಗಳೂರು ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈ ಅಪ್ಲಿಕೇಷನ್ ಕೂಡಾ ನೆರವಾಗಲಿದೆ ಎಂದು ಮೇಯರ್ ಮಂಜುನಾಥ್ ರೆಡ್ಡಿ ಹೇಳಿದರು.[ಭಾಷೆ ಮರೆತ ಬಿಎಂಟಿಸಿ: ಸರ್ಕಾರಕ್ಕೆ ಹನುಮಂತಯ್ಯ ಪತ್ರ]

B N Manjunath Reddy

ಹಲವಾರು ಖಾಸಗಿ ಅಪ್ಲಿಕೇಷನ್ ಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಟ್ರಾಫಿಕ್ ನಿಯಮ ಉಲ್ಲಂಘನೆ, ಕಳಪೆ ರಸ್ತೆ, ಬೀದಿ ದೀಪ ಸಮಸ್ಯೆ ಸೇರಿದಂತೆ ನಗರ ಸಂಬಂಧಿಸಿದ ಸಮಸ್ಯೆಗಳನ್ನು ನೇರವಾಗಿ ರಿಯಲ್ ಟೈಮ್ ನಲ್ಲಿ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ಮುಟ್ಟಿಸುವ ವ್ಯವಸ್ಥೆ ಜಾರಿಯಲ್ಲಿದೆ.[ಮೊಬೈಲ್ ಆಡಳಿತಕ್ಕೆ ಕಾಲಿಟ್ಟ ಸಿದ್ದರಾಮಯ್ಯ ಸರ್ಕಾರ]

ಈಗ ಈ ಅಧಿಕೃತ ಅಪ್ಲಿಕೇಷನ್ ಮೂಲಕ ಆರ್ ಟಿಒ, ಬೆಂಗಳೂರು ಪೊಲೀಸ್, ಬಿಬಿಎಂಪಿ ಅಧಿಕಾರಿಗಳು ತುರ್ತು ಸೇವೆ, ಕಸದ ಸಮಸ್ಯೆ, ನಾಗರಿಕ ಕಾನೂನು ಉಲ್ಲಂಘನೆ, ಟ್ರಾಫಿಕ್, ನೈಸರ್ಗಿಕ ವಿಕೋಪ ಸೇರಿದಂತೆ ಅನೇಕ ವಿಭಾಗಗಳಲ್ಲಿ ಅಗತ್ಯ ಸೇವೆಯನ್ನು ನೀಡಲು ಮುಂದಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bruhat Bengaluru Mahanagara Palike mayor Manjunath Reddy today launched 'Smart City Application' which enables citizen to get information about civic related issuses, crime incidences in real time.
Please Wait while comments are loading...