ಬೆಂಗಳೂರಿನ ಬಾರ್ ಟೆರೇಸ್ ಮೇಲೆ ಹುಕ್ಕಾದಂಧೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 24: ಬೆಂಗಳೂರಿನ ಬ್ರಿಗೆಡ್ ರಸ್ತೆಯಲ್ಲಿನ ಹೋಟೆಲ್, ಬಾರ್ ಗಳ ಟೆರೇಸ್ ಮೇಲೆ ಹುಕ್ಕಾ ದಂಧೆಯಲ್ಲಿ ತೊಡಗಿದ್ದವರ ವಿರುದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಬ್ರಿಗೆಡ್ ರಸ್ತೆಯಲ್ಲಿರುವ ಅಝರ್ ಸೋರ್ ಕೆಫೆ ಸೇರಿದಂತೆ ಮೂರು ಅನಧೀಕೃತ ಹೋಟೆಲ್, ಬಾರ್ ಗಳ ಮೇಲೆ ಹುಕ್ಕಾ ದಂಧೆ ನಡೆಯುತ್ತಿತ್ತು ಎಂಬ ಖಚಿತ ಮಾಹಿತಿಯನ್ನು ಪಡೆದ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಹುಕ್ಕಾ ದಂಧೆಯಲ್ಲಿ ತೊಡಗಿದ್ದವರನ್ನು ಬಂಧಿಸಿದ್ದು, ರು 1 ಲಕ್ಷ ದಂಡ ವಿಧಿಸಿ ಅವರನ್ನು ಬಿಡುಗಡೆ ಗೊಳಿಸಿದ್ದಾರೆ.[ಹುಕ್ಕಾ ಪಾರ್ಲರಲ್ಲಿ ಸಿಕ್ಕಿಬಿದ್ದ ಬೆಂಗಳೂರು ಶಾಲಾ ಮಕ್ಕಳು]

brigade road hookah: bbmp raid to arrest the smoke addicted

ಇನ್ನು ಹೋಟೆಲ್ ಮತ್ತು ಬಾರ್ ಗಳನ್ನು ಶೋಧ ನಡೆಸಿದ ಆಧಿಕಾರಿಗಳು ಕೆಲವರನ್ನು ಜನರನ್ನು ಬಂಧಿಸಿದ್ದು, ದಂಧೆಗೆ ಸಂಬಂಧಿಸಿದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇಲ್ಲಿ ಅಪ್ರಾಪ್ತ ವಯಸ್ಕರು ಇದ್ದರು ಎನ್ನಲಾಗಿದೆ.

ಸುಮಾರು ದಿನಗಳಿಂದ ನಡೆಯುತ್ತಿದೆ ಎನ್ನಲಾದ ಈ ದಂಧೆಯು ಇನ್ನು ಎಲ್ಲೆಲ್ಲಿ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the bar of the hotel, the BBMP officials have attacked the smoke-addicted in Brigade Road begnaluru
Please Wait while comments are loading...