ಮೆಗಾ ಫೆಸ್ಟ್ ಗೆ ಬನ್ನಿ, ಕನಸಿನ ಮನೆ ನಿಮ್ಮದಾಗಿಸಿಕೊಳ್ಳಿ

Written By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ 10 : ವಿವಿಧ ಹಂತದಲ್ಲಿರುವ ಬ್ರಿಗೇಡ್ ಗ್ರೂಪ್‍ ನ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ತಿಳಿಸಲು ಈ ಮೆಗಾ ಫೆಸ್ಟ್ ಆಯೋಜಿಸಲಾಗಿದೆ.

ಬ್ರಿಗೇಡ್ ಗೇಟ್‍ವೇಯಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್‍ ನ ನಾರ್ಥರ್ನ್ ಟೆರೇಸ್‍ ನಲ್ಲಿ ಆಯೋಜಿಸಲಾಗಿರುವ ಈ ಮೆಗಾ ಹೋಂ ಫೆಸ್ಟ್ ಗೆ ಶುಕ್ರವಾರ ಚಾಲನೆ ಸಿಕ್ಕಿದ್ದು ಫೆಬ್ರವರಿ 12ರ ವರೆಗೆ ನಡೆಯಲಿದೆ.

ಈ ಮೂರು ದಿನಗಳ ಕಾಲ ನಡೆಯುವ ಮೆಗಾ ಫೆಸ್ಟ್ ನಲ್ಲಿ ಗ್ರಾಹಕರು ತಮಗಿಷ್ಟವಾದ ಬ್ರಿಗೇಡ್ ಗ್ರೂಪ್‍ ನ ಮನೆಯನ್ನು ಆಯ್ಕೆ ಮಾಡಿಕೊಂಡು ಖರೀದಿ ಮಾಡಲು ಇದು ಒಂದು ಉತ್ತಮ ಅವಕಾಶ.

Brigade Group organized Mega Home Fest held at Bengaluru from feb 10 to 12

ಶೂನ್ಯ ಬಡ್ಡಿದರ ಮತ್ತು 2 ಲಕ್ಷ ರುಯಿಂದ 20 ಲಕ್ಷ ರೂಪಾಯಿ ಮೌಲ್ಯದವರೆಗೆ ಉಚಿತವಾಗಿ ಫರ್ನಿಶಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಮೂರು ದಿನಗಳ ಫೆಸ್ಟ್ ನಲ್ಲಿ ಮನೆಗಳನ್ನು ಬುಕ್ ಮಾಡುವವರಿಗೆ ಮುಂದಿನ 12 ತಿಂಗಳವರೆಗೆ ಪ್ರೈಸ್ ಪ್ರೊಟೆಕ್ಷನ್ ಇರಲಿದೆ.

ವರ್ಲ್ಡ್ ಟ್ರೇಡ್ ಸೆಂಟರ್‍ ನ ದಿ ನಾರ್ಥರ್ನ್ ಟೆರೇಸ್‍ ನಲ್ಲಿ ಆರಂಭವಾಗಿರುವ ಈ ಮೆಗಾ ಫೆಸ್ಟ್ ಗೆ ಗ್ರಾಹಕರು ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆವರೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ಬ್ರಿಗೇಡ್ ಗೇಟ್‍ವೇಯಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್‍ ನ ನಾರ್ಥರ್ನ್ ಟೆರೇಸ್‍ ನಲ್ಲಿ ನಡೆಯುತ್ತಿರುವ ಈ ಮೆಗಾ ಹೋಂ ಫೆಸ್ಟ್ ನಲ್ಲಿ ಬ್ರಿಗೇಡ್ ಗ್ರೂಪ್ ದಕ್ಷಿಣ ಭಾರತದ 6 ನಗರಗಳಲ್ಲಿ ಕೈಗೊಂಡಿರುವ 30ಕ್ಕೂ ಹೆಚ್ಚು ವಸತಿ ಯೋಜನೆಗಳನ್ನು ಅನಾವರಣಗೊಳಿಸಲಾಗಿದೆ.

ಈ ಮೆಗಾ ಮೇಳದ ಬಗ್ಗೆ ಮಾತನಾಡಿದ ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್‍ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಜೈಶಂಕರ್, 'ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಗಳೂರು, ಹೈದ್ರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಬ್ರಿಗೇಡ್ ಸಮೂಹ ಸಂಸ್ಥೆ ಕೈಗೊಂಡಿರುವ ವಸತಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ಈ ಮೆಗಾ ಮೇಳದಲ್ಲಿ ನೀಡಲಾಗುತ್ತಿದೆ. ಬ್ರಿಗೇಡ್ ಬ್ರಾಂಡ್‍ ನ ಮನೆಗಳನ್ನು ಖರೀದಿಸಲು ಸಾರ್ವಜನಿಕರಿಗೆ ಇದೊಂದು ಸುವರ್ಣಾವಕಾಶವಾಗಿದೆ'ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Brigade Group, one of India’s leading developers today will host three day Mega Home Fest from 10th to 12th February 2017 at The Northern Terrace, World Trade Center at Brigade Gateway Bengaluru. The three-day event will showcase the company’s 30 offerings across 6 cities in South India.
Please Wait while comments are loading...