ಬ್ರಾಂಡೆಡ್ ಬಟ್ಟೆ ಕಳ್ಳರ ಬಂಧನ, 20 ಲಕ್ಷ ಮೌಲ್ಯದ ಮಾಲು ವಶ!

Posted By:
Subscribe to Oneindia Kannada

ಬೆಂಗಳೂರು, ಜೂನ್ 18: ಸಿಟಿಮಾರ್ಕೆಟ್ ಪೊಲೀಸ್ ಠಾಣೆ ಸರಹದ್ದು ಸುಲ್ತಾನ್‍ ಪೇಟೆಯ ಅಂಗಡಿಯೊಂದರಲ್ಲಿ ಮೇಲೆ ಭಾನುವಾರ(ಜೂನ್ 18) ದಂದು ಸಿಸಿಬಿ ಹಾಗೂ ಸಿಟಿ ಮಾರುಕಟ್ಟೆ ಪೊಲೀಸರು ದಾಳಿ ನಡೆಸಿದ್ದಾರೆ.

ಕಂಪನಿಗಳ ನಕಲಿ ಬಟ್ಟೆಗಳನ್ನು ಅಕ್ರಮ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಈ ದಾಳಿ ನಡೆಸಲಾಗಿದೆ. ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ, ನಕಲಿ ಬಟ್ಟೆಗಳನ್ನು ಮಾರಾಟಮಾಡುತ್ತಿದ್ದ ಆಸಾಮಿ ನಿರ್ಮಲ್ ಸಿಂಗ್(24) ಎಂಬಾತನನ್ನು ಬಂಧಿಸಿ 9 ಲಕ್ಷ ರು ಮೌಲ್ಯದ ಮಾಲು ವಶಕ್ಕೆ ಪಡೆಯಲಾಗಿದೆ.

Branded clothes Robbers Arrested City Market Police and CCB

ನಿರ್ಮಲ್ ಸಿಂಗ್ ವಶದಿಂದ 9,31,500/-ರೂ ಬೆಲೆಬಾಳುವ ಬ್ರಾಂಡ್ ಗಳ ಒಟ್ಟು 495 ನಕಲಿ ಬಟ್ಟೆಗಳನ್ನು ವಶಪಡಿಸಿಕೊಂಡು, ಆಸಾಮಿ ವಿರುದ್ದ ಸಿಟಿಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

ಇನ್ನೊಂದೆಡೆ ತುಮಕೂರು ಮೂಲದ ಜಗನ್ನಾಥ್ ಅಲಿಯಾಸ್ ಜಗ್ಗಿ ಎಂಬಾತನನ್ನು ಬಂಧಿಸಿ ಬಟ್ಟೆ ವಶಕ್ಕೆ ಪಡೆಯಲಾಗಿದ್ದು, ಒಟ್ಟು 20 ಲಕ್ಷ ರು ಮೌಲ್ಯದ ಮಾಲು ವಶವಾಗಿದೆ. ಕೋರಮಂಗಲ, ಇಂದಿರಾನಗರ ಮುಂತಾದೆಡೆ ರಾತ್ರಿ ವೇಳೆ ಮಳಿಗೆಗಳಲ್ಲಿ ಬ್ರಾಂಡೆಡ್ ಬಟ್ಟೆಗಳನ್ನು ಕದ್ದು, ಬೇರೆಡೆ ವಿತರಿಸುತ್ತಿದ್ದ ಎಂದು ತಿಳಿದು ಬಂದಿದೆ.

LOUIS PHILIPPE, PUMA, ADIDAS, ALLEN SOLLEY, WRANGLER. U.S.POLO & TOMMY HILFIGER ಮುಂತಾದ ಕಂಪನಿಗಳ ಬಟ್ಟೆಗಳನ್ನು ಕದಿಯುತ್ತಿದ್ದರು. ನಂತರ ಬ್ರಾಂಡೆಡ್ ಬಟ್ಟೆಗಳನ್ನು ನಕಲಿ ಮಾಡಿ, ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Branded clothes robbers Nirmal Singh alias Bhavani Singh and Jagannath alias Jaggi are arrested by City Market Police and CCB. Clothes worth Rs 20 lakhs are seized.
Please Wait while comments are loading...