ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌಂದರ್ಯ ಸ್ಪರ್ಧೆ ವಿಜೇತೆ ಸೋನಿಯಾ ಸಿಂಗ್ ಬದುಕು ಎಂಥವರಿಗೂ ಸ್ಫೂರ್ತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: 'ಸೋನಿಯಾ ಸಿಂಗ್' ಹೆಸರು ಘೋಷಣೆ ಆಗುತ್ತಿದ್ದ ಹಾಗೆ ಭಾರೀ ಚಪ್ಪಾಳೆ, ಸಂತಸ ಎಲ್ಲ ವ್ಯಕ್ತವಾಯಿತು. "ಕನ್ನಡಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ನಿಜವಾದ ಪ್ರತಿಬಿಂಬ ಹೃದಯದಲ್ಲಿದೆ" ಎಂಬುದು ಸೋನಿಯಾ ಸಿಂಗ್ ರ ಮಾತು.

ಅಂದಹಾಗೆ ಆಕೆಗೆ ಸೌಂದರ್ಯ ಸ್ಪರ್ಧೆ ಗೆದ್ದ ಖುಷಿಗಿಂತ ಬೇರೆಯದೇ ಆದ ಸಂತಸ ಹಾಗೂ ದುಃಖ ಎರಡೂ ಇತ್ತು. ಅದಕ್ಕಿದ್ದ ಕಾರಣ ಕೂಡ ಅಷ್ಟೇ ಗಂಭೀರವಾಗಿತ್ತು. ಆಕೆಗೆ ತೀರಾ ಗಂಭೀರವಾದ ಮೆದುಳಿನ ಅಸ್ವಾಸ್ಥ್ಯ.

ಆದರೂ ಮೂವತ್ತೊಂದು ವರ್ಷದ ಸೋನಿಯಾ ಸಿಂಗ್ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ವಿಜಯಿಯಾಗಿದ್ದಾರೆ. ಐದು ವರ್ಷದ ಹಿಂದೆ ಸೋನಿಯಾ ಸಿಂಗ್ ಅವರಿಗೆ ಸಹಿಸಲು ಅಸಾಧ್ಯವಾದ ತಲೆ ನೋವು ಮತ್ತು ಭುಜದ ನೋವು ಕಾಣಿಸಿಕೊಂಡಿತು. ಆಕೆಯ ಸಮಸ್ಯೆಯ ಕಾರಣದಿಂದಾಗಿ ಊಟ ಮಾಡಲು ಸಹ ಆಗುತ್ತಿರಲಿಲ್ಲ.

ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!

ನೋವು ಆಗಾಗ ಕಾಣಿಸಿಕೊಳ್ಳುತ್ತಲೇ ಇತ್ತು. ಅದೂ ಆಕೆಯ ಎಡ ಭುಜದ ಸುತ್ತ ತಡೆಯಲು ಸಾಧ್ಯವೇ ಇಲ್ಲ ಎನ್ನುವಂಥ ಅಸಾಧ್ಯ ನೋವು. ಬಿಜಿಎಸ್ ಗ್ಲೋಬಲ್ ಗ್ಲೇನೆಗ್ಲಸ್ (ಆ ನಂತರ ಅದು ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಅಂತಾಯಿತು) ಆಸ್ಪತ್ರೆಗೆ 2013ರ ಜನವರಿಯಲ್ಲಿ ಕರೆದೊಯ್ಯಲಾಯಿತು.

ಸೋನಿಯಾ ಸಿಂಗ್ ಗೆ ಮೂರು ತಿಂಗಳ ಮಗು ಇತ್ತು

ಸೋನಿಯಾ ಸಿಂಗ್ ಗೆ ಮೂರು ತಿಂಗಳ ಮಗು ಇತ್ತು

ಸೋನಿಯಾ ಸಿಂಗ್ ಗೆ ಮೆದುಳಿನಲ್ಲಿ ಗಡ್ಡೆ ಆಗಿರುವುದು ಪತ್ತೆಯಾಯಿತು. ಅದು ಕೂಡ ಶಸ್ತ್ರಚಿಕಿತ್ಸೆ ಮಾಡಲಾಗದಂಥ ತುಂಬ ಸೂಕ್ಷ್ಮ ಜಾಗದಲ್ಲಿ ಗಡ್ಡೆ ಆಗಿತ್ತು. ಹಾಗೆ ಆಕೆಗೆ ಗಡ್ಡೆ ಇದೆ ಎಂದು ತಿಳಿಯುವ ವೇಳೆಗೆ ಮೂರು ತಿಂಗಳ ಮಗುವಿನ ತಾಯಿ ಅವರು. ಬ್ರೇನ್ ಟ್ಯೂಮರ್ ಅಂತ ಗೊತ್ತಾದ ತಕ್ಷಣ ಬಹಳ ಮಂದಿ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಸೋನಿಯಾ ಆ ಪರಿಸ್ಥಿತಿಯನ್ನು ತುಂಬ ಧೈರ್ಯವಾಗಿ ಎದುರಿಸಿದರು.

ವ್ಯಕ್ತಿತ್ವವನ್ನೇ ಬದಲಿಸಿಕೊಂಡರು

ವ್ಯಕ್ತಿತ್ವವನ್ನೇ ಬದಲಿಸಿಕೊಂಡರು

ಅವರ ವ್ಯಕ್ತಿತ್ವವನ್ನೇ ಬದಲಿಸಿಕೊಂಡರು. ಬದುಕನ್ನು ಸಕಾರಾತ್ಮಕವಾಗಿ ತೆಗೆದುಕೊಂಡು, ತಮ್ಮದೇ ಸ್ವಂತ ಕಂಪೆನಿ ಆರಂಭಿಸಿದರು. ಸೋನಿಯಾ ಪಾಲಿನ ಅದೃಷ್ಟ ಏನೆಂದರೆ, ಆ ಗಡ್ಡೆ ಕ್ಯಾನ್ಸರ್ ನದಾಗಿರಲಿಲ್ಲ. ಆಕೆ ಶ್ರೀಮತಿ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆ 2018ರಲ್ಲಿ ಪಾಲ್ಗೊಂಡರು.

ವಿಪರೀತ ನೋವು ಕೊಡುತ್ತಿದ್ದ ಹೈಹೀಲ್ಸ್

ವಿಪರೀತ ನೋವು ಕೊಡುತ್ತಿದ್ದ ಹೈಹೀಲ್ಸ್

ಆದರೆ, ಹೈ ಹೀಲ್ಸ್ ಧರಿಸುವುದು ಸಲೀಸಿರಲಿಲ್ಲ. ಏಕೆಂದರೆ, ಬೆನ್ನು ಮೂಳೆಯ ಚಟುವಟಿಕೆ ನಿಯಂತ್ರಿಸುವ ಮೆದುಳಿನ ಭಾಗದಲ್ಲೇ ಗಡ್ಡೆ ಇತ್ತು. ಆದ್ದರಿಂದ ಹೀಲ್ಸ್ ಮೇಲೆ ನಿಲ್ಲುವುದು ವಿಪರೀತ ನೋವು ಕೊಡುತ್ತಿತ್ತು. ಇಂದಿಗೂ ಹೀಲ್ಸ್ ಧರಿಸುವಾಗ ಸೋನಿಯಾ ನೋವು ಅನುಭವಿಸುತ್ತಾರೆ.

ಮುಖ ಊತ ಬರುತ್ತಿತ್ತು

ಮುಖ ಊತ ಬರುತ್ತಿತ್ತು

ತುಂಬ ಹೊತ್ತು ನಿಂತುಕೊಂಡಿದ್ದರೆ ಪಾದದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ನಿದ್ದೆ ಇಲ್ಲದ ಕಾರಣಕ್ಕೆ ಹಾಗೂ ವಿಶ್ರಾಂತಿ ಇಲ್ಲದೆ ಸ್ಪರ್ಧೆಯ ಸಂದರ್ಭದಲ್ಲೇ ಮುಖ ಊತ ಬರುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಸೋನಿಯಾ ಸಿಂಗ್. ಸೋನಿಯಾ ಈ ಹಿಂದೆ ಗಗನ ಸಖಿ ಆಗಿದ್ದರು. ಇದೀಗ ಸ್ಪೂರ್ತಿ ತುಂಬುವ ಭಾಷಣಗಳನ್ನು ಮಾಡುತ್ತಾರೆ ಮತ್ತು ಉದ್ಯಮಿ ಕೂಡ ಹೌದು.

English summary
Being diagnosed with a critical brain disease, Sonia Singh, 31, has shown grit and gone on to win a Karnataka state level beauty pageant title. Here is the story of Sonia Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X