ಊಟ-ತಿಂಡಿ ಮನೆಗೆ ತಲುಪಿಸುವ- 'ಬ್ರಾಹ್ಮಿನ್ ಲಂಚ್ ಬಾಕ್ಸ್'

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 8 : 'ಬ್ರಾಹ್ಮಿನ್ ಲಂಚ್ ಬಾಕ್ಸ್' ಎಂಬುದೊಂದು ಇದೇ ತಿಂಗಳ ಹದಿನೈದರಿಂದ ಆರಂಭವಾಗಲಿದೆ. ಬೆಂಗಳೂರಿನ ಜೆಪಿ ನಗರದಲ್ಲಿ ಶುರುವಾಗುವ ಈ ಸೇವೆ, ಆ ಬಡಾವಣೆಯ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಊಟ-ತಿಂಡಿಯನ್ನು ಮನೆಗೆ ತಂದುಕೊಡುವ ಉದ್ದೇಶವನ್ನು ಹೊಂದಿದೆ.

ಕಡಿಮೆ ದರದಲ್ಲಿ ರುಚಿ-ಶುಚಿಯಾದ ಊಟ-ತಿಂಡಿಯನ್ನು ಮನೆಗೆ ತಲುಪಿಸುವುದು ಇವರ ಉದ್ದೇಶ. ಮನೆಗೆ ತಲುಪಿಸುತ್ತಾರಲ್ಲ ಅದಕ್ಕೆ ಹೆಚ್ಚುವರಿಯಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಈಗ ಆರಂಭದಲ್ಲಿ ಜೆಪಿ ನಗರ ಸುತ್ತಮುತ್ತ ಮಾತ್ರ ಊಟ-ತಿಂಡಿಯನ್ನು ತಲುಪಿಸಲು ಶುರು ಮಾಡಲಿದ್ದಾರೆ.

ಅಪ್ಪಾಜಿ ಕ್ಯಾಂಟೀನ್ ನಲ್ಲಿ 3 ರುಪಾಯಿಗೆ ಕಾಫಿ, 5ಕ್ಕೆ ತಿಂಡಿ, 10ಕ್ಕೆ ಊಟ...

ಅಂದಹಾಗೆ, ದರ್ಶನ್ -ಶ್ರೀನಿಧಿ ಎಂಬ ಸಹೋದರರು ಈ ಲಂಚ್ ಬಾಕ್ಸ್ ತಲುಪಿಸುವ ಯೋಚನೆಯನ್ನು ಸಾಕಾರಗೊಳಿಸುತ್ತಿದ್ದಾರೆ. ಈ ಯುವಕರ ಪ್ರಯತ್ನಕ್ಕೆ ತಾಯಿಯ ಸಹಕಾರ ಇದೆ. ಜತೆಗೆ ಒಬ್ಬರು ಅಡುಗೆ ಭಟ್ಟರನ್ನು ಸಹ ನೇಮಿಸಿಕೊಂಡಿದ್ದಾರೆ.

ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...

ಇವರಿಬ್ಬರ ಪೈಕಿ ದರ್ಶನ್ ಬಿಬಿಎಂ ಓದಿದ್ದು, ಶ್ರೀನಿಧಿ ಡಿಪ್ಲೊಮಾ ಮಾಡಿದ್ದಾರೆ. ಇಬ್ಬರೂ ಆಗಮ ಶಾಸ್ತ್ರ ಓದಿಕೊಂಡಿದ್ದಾರೆ. ಸದ್ಯಕ್ಕೆ ಒಂದು ದೇವಸ್ಥಾನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಆದರೆ ಮೊದಲಿಗೆ ಈ ಇಬ್ಬರಿಗೂ ಬೇರೆ ಬೇರೆ ಕನಸುಗಳಿದ್ದವಂತೆ.

ಹೊಸ ಆಲೋಚನೆ ಮೂಡಿತು

ಹೊಸ ಆಲೋಚನೆ ಮೂಡಿತು

ದರ್ಶನ್ ಅವರಿಗೆ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ಗುರಿ. ಶ್ರೀನಿಧಿ ಅವರಿಗೆ ಬಟ್ಟೆ ವ್ಯಾಪಾರದ ಕನಸು. ಆದರೆ ಅದು ಕೈಗೂಡದಿದ್ದಾಗ ಈ ರೀತಿ 'ಬ್ರಾಹ್ಮಿನ್ ಲಂಚ್ ಬಾಕ್ಸ್' ಎಂಬ ಆಲೋಚನೆ ಚಿಗುರೊಡೆದಿದೆ.

ನಮ್ಮ ಅಡುಗೆ ಪದ್ಧತಿ ಗೊತ್ತಾಗಬೇಕು

ನಮ್ಮ ಅಡುಗೆ ಪದ್ಧತಿ ಗೊತ್ತಾಗಬೇಕು

ನಮಗೆ ಜಾತಿ ಹೆಸರಿಂದ ಏನೋ ಲಾಭ ಪಡೆಯಬೇಕು ಅಂತಿಲ್ಲ. ಬ್ರಾಹ್ಮಣರು ಅಂದರೆ ಅಡುಗೆ, ಪೌರೋಹಿತ್ಯ ವೃತ್ತಿಗಳಲ್ಲೇ ಪ್ರಧಾನವಾಗಿ ಗುರುತಿಸಿಕೊಂಡವರು. ಆದ್ದರಿಂದ ಈ ಹೆಸರು ಇಟ್ಟಿದ್ದೇವೆ. ಇನ್ನೊಂದು ಕಾರಣ ಏನೆಂದರೆ, ನಮ್ಮ ಅಡುಗೆ ಪದ್ಧತಿಯೂ ಜನರಿಗೆ ಗೊತ್ತಾಗುತ್ತದೆ. ಅಷ್ಟನ್ನು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದರು ಒನ್ಇಂಡಿಯಾ ಕನ್ನಡ ಜತೆಗೆ ಮಾತನಾಡಿದ ದರ್ಶನ್.

ಕೆಲಸಕ್ಕೆ ಬ್ರಾಹ್ಮಣ ಯುವಕರು ಬೇಕಾಗಿದ್ದಾರೆ

ಕೆಲಸಕ್ಕೆ ಬ್ರಾಹ್ಮಣ ಯುವಕರು ಬೇಕಾಗಿದ್ದಾರೆ

ಅಂದಹಾಗೆ, ಒಬ್ಬರು ರಿಸೆಪ್ಷನಿಸ್ಟ್ ಹಾಗೂ ಹತ್ತು ಬ್ರಾಹ್ಮಣ ಯುವಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಉದ್ದೇಶಿಸಿರುವ ಈ ಸಹೋದರರು, ದ್ವಿಚಕ್ರ ವಾಹನ ಇರುವವರಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನು ಬೆಂಗಳೂರಿನ ವಿವಿಧೆಡೆ ಕೂಡ ಲಂಚ್ ಬಾಕ್ಸ್ ವಿಸ್ತರಿಸುವ ಇರಾದೆ ಕೂಡ ಇದೆ.

ಮೂರು ಬಗೆಯ ಲಂಚ್ ಬಾಕ್ಸ್

ಮೂರು ಬಗೆಯ ಲಂಚ್ ಬಾಕ್ಸ್

ಮೂರು ರೀತಿಯಲ್ಲಿ ಲಂಚ್ ಬಾಕ್ಸ್ ತಲುಪಿಸುತ್ತಾರೆ. ಮೂರು ಚಪಾತಿ, ಪಲ್ಯ, ಬಜ್ಜಿಗೆ 40 ರುಪಾಯಿ, ಅನ್ನ, ಸಾಂಬಾರ್, ರಸಂ, ಚಪಾತಿ, ಪಲ್ಯ, ಮಜ್ಜಿಗೆ, ಉಪ್ಪಿನಕಾಯಿ, ಹಪ್ಪಳಕ್ಕೆ 45 ರುಪಾಯಿ, ಅನ್ನ, ಸಾಂಬಾರ್, ರಸಂ, ಚಪಾತಿ, ಪಲ್ಯ, ಮಜ್ಜಿಗೆ, ಉಪ್ಪಿನಕಾಯಿ, ಹಪ್ಪಳ, ಸ್ವೀಟ್ ಹಾಗೂ ಬಜ್ಜಿಗೆ 60 ರುಪಾಯಿ.

ಊಟ ಬುಕ್ ಮಾಡುವ ಸಮಯ

ಊಟ ಬುಕ್ ಮಾಡುವ ಸಮಯ

ಊಟ ಬುಕ್ ಮಾಡಬೇಕು ಅಂದರೆ ಮಧ್ಯಾಹ್ನ ಆದರೆ ಒಂದು ಗಂಟೆಗೂ ಮುಂಚೆ ಹಾಗೂ ರಾತ್ರಿ ಎಂಟು ಗಂಟೆಗೂ ಮುಂಚೆ ಮಾಡಬೇಕು. ಮಧ್ಯಾಹ್ನ ಒಂದರಿಂದ ಎರಡೂವರೆ ಮಧ್ಯೆ ಹಾಗೂ ರಾತ್ರಿ ಎಂಟರಿಂದ ಒಂಬತ್ತೂವರೆ ಮಧ್ಯೆ ಲಂಚ್ ಬಾಕ್ಸ್ ತಲುಪಿಸುತ್ತಾರೆ.

ತಿಂಗಳ ಪೂರ್ತಿ ಬುಕ್ ಮಾಡಿದರೆ ಇಷ್ಟು ಮೊತ್ತ

ತಿಂಗಳ ಪೂರ್ತಿ ಬುಕ್ ಮಾಡಿದರೆ ಇಷ್ಟು ಮೊತ್ತ

ತಿಂಗಳ ಆಫರ್ ಕೂಡ ಇದೆ. ಮೂವತ್ತು ತಿಂಡಿ+ಅರವತ್ತು ಊಟ (ಮಧ್ಯಾಹ್ನ ಹಾಗೂ ರಾತ್ರಿ) 3,000

ಮೂವತ್ತು ತಿಂಡಿ+ಅರವತ್ತು ವಿಶೇಷ ಊಟ (ಮಧ್ಯಾಹ್ನ ಹಾಗೂ ರಾತ್ರಿ) 3,600

ಮೂವತ್ತು ಚಪಾತಿ ಊಟ+ ಮೂವತ್ತು ಊಟ 2,200

ಮೂವತ್ತು ಊಟ (ಬೆಳಗ್ಗೆ ಅಥವಾ ರಾತ್ರಿ ಊಟ) 1,200

Roti Charity Trust: Gulab
ಶೇ ಐವತ್ತರಷ್ಟು ಅಡ್ವಾನ್ಸ್

ಶೇ ಐವತ್ತರಷ್ಟು ಅಡ್ವಾನ್ಸ್

ತಿಂಗಳಿಡೀ ಲಂಚ್ ಬಾಕ್ಸ್ ಬೇಕು ಅನ್ನೋರು ಆಯಾ ದಿನದ ಹಣವನ್ನು ಅವತ್ತೇ ಕೊಟ್ಟರೂ ಆಯಿತು. ಅಥವಾ ಶೇ ಐವತ್ತರಷ್ಟು ಅಡ್ವಾನ್ಸ್ ಅಂತ ಕೊಡಬೇಕಾಗುತ್ತದೆ. ತಿಂಗಳಿಡೀ ತೆಗೆದುಕೊಳ್ಳುವವರಿಗೆ ಅವರೇ ಲಂಚ್ ಬಾಕ್ಸ್ ತಂದುಕೊಡ್ತಾರೆ. ಗ್ರಾಹಕರೇ ಬಾಕ್ಸ್ ಕೊಟ್ಟರೂ ಸರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Brahmin lunch box service starts in Bengaluru from August 15th.Service will be provide with in radius of 5 KM of JP Nagar. Here is the details of service, contact number.
Please Wait while comments are loading...