ಬೆಂಗಳೂರಿಗರೇ, ಇನ್ನೆರಡು ದಿನ ಚಳಿ ಜತೆ ಥಂಡಿ ಮಳೆ

Subscribe to Oneindia Kannada

ಬೆಂಗಳೂರು, ಜನವರಿ, 19: ಚುಮು ಚುಮು ಚಳಿಗೆ ನಡುಗುತ್ತಿದ್ದ ಬೆಂಗಳೂರಿಗರು ಇನ್ನು 3 ದಿನ ಜಿಟಿ ಜಿಟಿ ಮಳೆಯನ್ನು ಅನುಭವಿಸಬೇಕು. ಹವಾಮಾನ ಇಲಾಖೆ ನೀಡಿರುವ ವರದಿಯಂತೆ ಬೆಂಗಳೂರು ಸುತ್ತ ಮುತ್ತ ಇನ್ನು ಮೂರು ದಿನ ಮಳೆಯಾಗಲಿದೆ.

ನಗರದಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ದಾಖಲಾಗಿತ್ತು. ಚಳಿಯೊಂದಿಗೆ ಮಳೆಯೂ ಆರಂಭವಾದರೆ ತಾಪಮಾನ ಇನ್ನಷ್ಟು ಕುಸಿಯುವುದರಲ್ಲಿ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಬೆಂಗಳೂರಿಗರು ಮತ್ತೊಂದು ಆತಂಕ ಎದುರಿಸಲು ಸಿದ್ಧವಾಗಬೇಕಿದೆ.[ಚೆನ್ನೈ ಮಹಾ ಪ್ರವಾಹಕ್ಕೂ ಜಗ್ಗದ-ಕುಗ್ಗದ ಬಸ್!]

Brace for rain, cooler days ahead in Bengaluru

ಸೋಮವಾರ ರಾತ್ರಿ ಯಶವಂತಪುರ, ಮಲ್ಲೇಶ್ವರಂ, ಹೆಬ್ಬಾಳ, ರಾಜಾಜಿನಗರ ಸೇರಿದಂತೆ ಹಲವು ಕಡೆ ಧಾರಾಕಾರ ಮಳೆ ಸುರಿದಿದೆ. ಸಂಕ್ರಾಂತಿ ನಂತರ ಚಳಿ ಕೊಂಚ ಕಡಿಮೆಯಾಗಿತ್ತು ಆದರೆ ಆಗಮಿಸಿದ ವರುಣ ವಾತಾವರಣವನ್ನು ಥಂಡಿ ಮಾಡಿದ್ದಾನೆ.[ಚೆನ್ನೈ ಪ್ರಳಯ, ಪಾಠ ಕಲಿಯುವುದೇ ಬೆಂಗಳೂರು ನಗರಿ!]

ಮಂಗಳವಾರ ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದೆ. ಕೋಲಾರ ,ಚಿಕ್ಕಬಳ್ಳಾಪುರ ,ತುಮಕೂರು, ಮಂಡ್ಯ, ಮೈಸೂರು ಭಾಗದಲ್ಲಿ ಹಾಗೂ ಮಲೆನಾಡಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈಗ ಸಾಧಾರಣ ಮಳೆಯಾಗಲಿದೆ. ಜನವರಿಯಲ್ಲಿ ಮಳೆಯಾದರೆ ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದು ಸುಳ್ಳಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the delayed onset of winter, Bengaluru is now likely to receive rain in the next Three days. This will bring a further drop in temperature. There was a slight cloud cover on Monday and the Indian Meteorological Department (IMD) is expecting rain in the next couple of days over the City and south interior Karnataka.
Please Wait while comments are loading...