ಅಪಹರಣವಾದ 15 ಗಂಟೆಯಲ್ಲೇ ಬಾಲಕನ ರಕ್ಷಣೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 27: ಶನಿವಾರ ಕೆ.ಆರ್. ಪುರಂ ನ ಅಯ್ಯಪ್ಪನಗರದ ಮುಖ್ಯ ರಸ್ತೆಯಿಂದ ಅಪಹರಿಸಲ್ಪಟ್ಟಿದ್ದ ಬಾಲಕ ಮಾಯಾಂಕ್ (10) ನನ್ನು ಕೇವಲ 15 ಗಂಟೆಯಲ್ಲಿ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ರಕ್ಷಿಸಿದ್ದಾರೆ.

ಆಂಧ್ರ ಪ್ರದೇಶ ಪಲಮನೇರ್ ಬಳಿ ಪತ್ತೆ ಬಾಲಕನನ್ನು ದುಷ್ಕರ್ಮಿಗಳಿಂದ ರಕ್ಷಿಸಲಾಗಿದೆ. ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮಯಾಂಕ್, ತಾತನ ಜತೆ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದಾಗ ಅಯ್ಯಪ್ಪ ನಗರದ ಕಡೆಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ತಾತನ್ನು ಕೆಳಗೆ ತಳ್ಳಿ ಮಯಾಂಕ್ ನನ್ನು ಕಾರಿನಲ್ಲಿ ಎಳೆದುಕೊಂಡು ಪರಾರಿಯಾಗಿದ್ದರು.

Boy kidnapped on way to school, rescued in 15 hrs

ಸ್ವಲ್ಪ ಸಮಯದಲ್ಲೇ ಹರೀಶ್ ಅವರಿಗೆ ಕರೆ ಮಾಡಿದ್ದ ಒಬ್ಬಾತ 'ನಿಮ್ಮ ಮಗನನ್ನು ಅಪಹರಿಸಿದ್ದೇವೆ ನಮಗೆ ಹಣ ಬೇಕು ಎಂದು ಒತ್ತಾಯಿಸಿದ್ದರು. ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ನಿಮ್ಮ ಮಗ ಜೀವಂತವಾಗಿ ಸಿಗುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.

ಕೂಡಲೇ ಹರೀಶ್ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಕರೆ ವಿವರ ಪರಿಶೀಲಿಸಿದ ಪೊಲೀಸರು ಅಪಹರಣಕಾರರು ಆಂಧ್ರಪ್ರದೇಶ ಗಡಿ ಭಾಗದಲ್ಲಿ ಇದ್ದಾರೆ ಎಂಬುದು ತಿಳಿದು ಬಂದಿತ್ತ್ತು.
ಕೂಡಲೇ ಪೂರ್ವ ವಿಭಾಗದ ಪೊಲೀಸರು, ನಾಲ್ಕು ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು.

ಆರೋಪಿಗಳು ಕೆ.ಆರ್.ಪುರಂ ನಿವಾಸಿಗಳಾಗಿದ್ದು, ಬಡಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಹರೀಶ್ ಅವರು ಟಿಂಬರ್ ಯಾರ್ಡ್ ಹೊಂದಿರುವುದರಿಂದ ಕೆಲಸದ ವಿಚಾರವಾಗಿ ಆರೋಪಿಗಳು ಅವರ ಜತೆ ಸಂಪರ್ಕ ಹೊಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 10-year-old boy, who was kidnapped while on his way to school in KR Puram on Saturday morning, was rescued within 15 hours after a swift operation by city police.
Please Wait while comments are loading...