ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌರಿಂಗ್ ಲಾಕರ್ ಪ್ರಕರಣ: ಸಿಸಿಟಿವಿ ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳು

By Manjunatha
|
Google Oneindia Kannada News

ಬೆಂಗಳೂರು, ಜುಲೈ 27: ಬೌರಿಂಗ್ ಇನ್ಸ್ಟಿಟ್ಯೂಟ್‌ ಲಾಕರ್ ಕೋಟ್ಯಂತರ ಹಣ ಮತ್ತು ಚಿನ್ನ ಪ್ರಕರಣ ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು. ಪ್ರಕರಣದ ಸಂಪೂರ್ಣ ತನಿಖೆಗೆ ಮುಂದಾಗಿರುವ ಆದಾಯ ತೆರಿಗೆ ಇಲಾಖೆ ಇನ್ಸಟಿಟ್ಯೂಟ್‌ನ ಸಿಸಿಟಿವಿ ಪರಿಶೀಲನೆ ಮಾಡುತ್ತಿದೆ.

ಲಾಕರ್‌ನಲ್ಲಿ ಹಣ ಮತ್ತು ಚಿನ್ನ ಇರುವುದು ಪತ್ತೆ ಆದ ನಂತರ ಹಾಲಿ ಸಚಿವರಿಗೆ ಸಂಬಂಧಿಸಿದ ವ್ಯಕ್ತಿಯೊಬ್ಬ ಇನ್ಸ್ಟಿಟ್ಯೂಟ್‌ನ ಕಾರ್ಯದರ್ಶಿಗಳ ಬಳಿ ಬಂದು ವಿವರ ಕೇಳಿದ್ದ ವಿಷಯ ಬೆಳಕಿಗೆ ಬಂದಿದ್ದು ಈ ವ್ಯಕ್ತಿಯನ್ನು ಪತ್ತೆ ಮಾಡಲು ಅಧಿಕಾರಿಗಳು ಸಿಸಿಟಿವಿ ಮೊರೆ ಹೋಗಿದ್ದಾರೆ.

ಅವಿನಾಶ್‌ ಯಾರು? ಪ್ರಭಾವಿ ವ್ಯಕ್ತಿಗಳು ರಕ್ಷಣೆಗೆ ನಿಂತಿದ್ದೇಕೆ? ಅವಿನಾಶ್‌ ಯಾರು? ಪ್ರಭಾವಿ ವ್ಯಕ್ತಿಗಳು ರಕ್ಷಣೆಗೆ ನಿಂತಿದ್ದೇಕೆ?

ಬೌರಿಂಗ್ ಇನ್ಸ್ಟಿಟ್ಯೂಟ್‌ನ ಮೂರು ಲಾಕರ್‌ಗಳಲ್ಲಿ ಕೋಟ್ಯಂತರ ನಗದು ಹಣ, ಚಿನ್ನದ ಬಿಸ್ಕೆಟ್ ಸೇರಿದಂತೆ ಹಲವು ದಾಖಲೆಗಳು ದೊರೆತಿವೆ. ಇದರ ಒಟ್ಟು ಮೌಲ್ಯ 800 ಕೋಟಿ ಎಂದು ಅಂದಾಜಿಸಲಾಗಿದೆ.

bowring institute locker case : IT officers checking CCTV

ಅವಿನಾಶ್ ಎಂಬುವರಿಗೆ ಸೇರಿದ್ದ ಲಾಕರ್‌ಗಳು ಇದಾಗಿದ್ದು. ಅವಿನಾಶ್ ಮೂಲತಃ ಟೈರ್ ಸಂಸ್ಥೆ ವ್ಯಾಪಾರಿಯಾಗಿದ್ದು ಹಲವು ಪ್ರಭಾವಿ ರಾಜಕಾರಣಿಗಳ ಜೊತೆ ಆಪ್ತರಾಗಿದ್ದಾರೆ.

ಇದೀಗ ಹೊಸ ಬೆಳವಣಿಗೆಯಂತೆ ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತರು ಬೌರಿಂಗ್ ಕಾರ್ಯದರ್ಶಿ ಬಳಿ ತೆರಳಿ ಲಾಕರ್‌ನಲ್ಲಿ ಸಿಕ್ಕ ವಸ್ತುಗಳ ಬಗ್ಗೆ ವಿಚಾರಿಸಿದ್ದು. ತನಿಖೆಯನ್ನು ಮೊಟಕುಗೊಳಿಸಲು ಸಹಾಯ ಕೇಳಿದ್ದಾರೆ ಎನ್ನಲಾಗಿದೆ. ಹಾಗಾಗಿ ಆತನ ಪತ್ತೆಗಾಗಿ ಆದಾಯ ತೆರಿಗೆ ಅಧಿಕಾರಿಗಳು ಸಿಸಿಟಿವಿ ತನಿಖೆ ನಡೆಸುತ್ತಿದ್ದಾರೆ.

English summary
IT officers checking CCTV footage of bowring institute where in a locker crores of cash and gold biscuit were found. IT officers said that total 800 crore worth property, money and gold found in three locker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X