ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಾಶ್ ಕಾರ್ ಸೆಂಟರ್ ಆರಂಭ

Posted By:
Subscribe to Oneindia Kannada

ಬೆಂಗಳೂರು, ಜನವರಿ 20: ಬಾಶ್ ಲಿಮಿಟೆಡ್ ತನ್ನ ಮೊದಲ ಕಂಪನಿ ಮಾಲೀಕತ್ವದ ಬಾಶ್ ಕಾರ್ ಸರ್ವೀಸ್ ಸೆಂಟರ್(Company Owned Company Operated (CoCo) ಸರ್ವೀಸ್ ಸೆಂಟರ್) ಅನ್ನು ಶುಕ್ರವಾರ (ಜನವರಿ 20)ರಂದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆರಂಭಿಸಿದೆ. ಬಾಶ್ ಗ್ರೂಪ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು ಈ ಸರ್ವೀಸ್ ಸೆಂಟರ್ ಗೆ ಚಾಲನೆ ನೀಡಿದರು.


ಈ ಸೇವಾ ಕೇಂದ್ರದಲ್ಲಿ ಬಾಶ್ ತನ್ನದೇ ಆದ ಉಪಕರಣಗಳೊಂದಿಗೆ ಹಲವಾರು ಬ್ರಾಂಡ್ ನ ಕಾರುಗಳಿಗೆ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಲಿದೆ. ಹೆಚ್ಚುತ್ತಿರುವ ಗ್ರ್ರಾಹಕರ ಬೇಡಿಕೆ, ತಂತ್ರಜ್ಞಾನ ಆಧಾರಿತ ಉತ್ಪನ್ನಗಳು ಮತ್ತು ಸಿಸ್ಟಂಗಳು, ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪ್ರೀ ಓನ್ಡ್ ಕಾರುಗಳ ಮಾರಾಟ ಮತ್ತು ವಾರಂಟಿ ಮುಗಿದ ನಂತರ ಸರ್ವೀಸ್ ಗೆ ಬರುತ್ತಿರುವ ಕಾರುಗಳಲ್ಲಿ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಸೇವಾ ಕೇಂದ್ರವನ್ನು ಆರಂಭಿಸಲಾಗಿದೆ.

ಇಲ್ಲಿ ಎಲ್ಲಾ ಬಗೆಯ ಸೇವೆಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತದೆ. ಬಾಶ್ ಇದೀಗ ತನ್ನ ಮಾಲೀಕತ್ವದ ಕಾರ್ ಸರ್ವೀಸ್ ಸೆಂಟರ್ ಆರಂಭಿಸಿದ್ದು, ಮುಂದಿನ 5 ವರ್ಷಗಳ ಅವಧಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಂದರೆ, ಫ್ರಾಂಚೈಸಿ ಮಾದರಿಯಲ್ಲಿ ಇಂತಹ 700 ಸರ್ವೀಸ್ ಸೆಂಟರ್ ಗಳನ್ನು ಆರಂಭಿಸುವ ಗುರಿಯನ್ನು ಕಂಪನಿ ಹೊಂದಿದೆ.

Bosch opens CoCo Bosch car service centre in Bengaluru

ಬೆಂಗಳೂರಿನ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯ 2 ನೇ ಹಂತದ ರಾಷ್ಟ್ರೀಯ ಹೆದ್ದಾರಿ-7 ರಲ್ಲಿ ಈ ಕೊಕೊ ಬಾಶ್ ಕಾರ್ ಸರ್ವೀಸ್ ಸೆಂಟರ್ ಆರಂಭವಾಗಿದೆ. 20,000 ಚದರಡಿಯ ವಿಸ್ತೀರ್ಣದಲ್ಲಿರುವ ಈ ಸೆಂಟರ್ ನಲ್ಲಿ ಏಕಕಾಲದಲ್ಲಿ 14 ಕಾರುಗಳ ಸರ್ವೀಸ್ ಗೆ ಅವಕಾಶ ಕಲ್ಪಿಸಲಾಗಿದೆ. ಅಂದರೆ, 14 ಕಾರ್ ಬೇಗಳನ್ನು ನಿರ್ಮಾಣ ಮಾಡಲಾಗಿದೆ.

ಬಾಶ್ ಉಪಕರಣಗಳಿಂದ ಸುಸಜ್ಜಿತವಾದ ಕೇಂದ್ರ ಇದಾಗಿದ್ದು, ಇಲ್ಲಿ ಬಾಶ್ ನಿರ್ಮಿತ ವ್ಹೀಲ್ ಅಲೈನರ್ ಮತ್ತು ಬ್ಯಾಲೆನ್ಸರ್, ಟೈರ್ ಬದಲಿಸುವ ಯಂತ್ರ, ನೈಟ್ರೋಜನ್ ಟೈರ್ ಇನ್‍ಫ್ಲೇಟರ್, ಕೆಟಿಎಸ್(ಇಎಸ್ ಐ ಸಾಫ್ಟ್ ವೇರ್ ಒಳಗೊಂಡ ಇಸಿಯು ಡಯಾಗ್ನಾಸ್ಟಿಕ್ ಸ್ಕ್ಯಾನರ್), 2-ಪೋಸ್ಟ್ ಮತ್ತು 4 ಪೋಲ್ ಲಿಫ್ಟ್‍ಗಳು, ಎಸಿ ಸರ್ವೀಸ್ ಮಶಿನ್, ಹೆಡ್‍ಲೈಟ್ ಅಲೈನರ್, ಅಟೋಮೇಟೆಡ್ ಕಾರ್ ವಾಶ್ ಸ್ಭೆರಿದಂತೆ ಇನ್ನಿತರೆ ಅತ್ಯಾಧುನಿಕ ಸೇವೆಗಳು ಲಭ್ಯವಿವೆ.

ಇತ್ತೀಚಿನ ಕೊಲಿಶನ್ ರಿಪೇರ್ ಸಿಸ್ಟಂ, ಪೇಂಟ್ ಬೂತ್ ಸೇರಿದಂತೆ ಅಪಘಾತಕ್ಕೀಡಾದ ಕಾರನ್ನು ರಿಪೇರಿ ಮಾಡುವ ವ್ಯವಸ್ಥೆಯನ್ನೂ ಹೊಂದಿದೆ.

ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಸ್ಟಮರ್ ಲಾಂಜ್ ಅನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಮಾಹಿತಿ ನೀಡುವ ಕಿಯಾಸ್ಕ್ ಗಳು, ಉಚಿತ ವೈ-ಫೈ, ಕಾಫಿ/ಟಿವಿ ಲಾಂಜ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.


ದಿನದ 24 ಗಂಟೆಯೂ ರೋಡ್ ಸೈಡ್ಡ್ ಅಸಿಸ್ಟೆನ್ಸ್, ಪ್ರೀಓನ್ಡ್ ಕಾರ್ ಇನ್ಸ್ ಪೆಕ್ಷನ್ , ಪ್ರಮಾಣಿಕರಣ ಮತ್ತು ವಾರಂಟಿಯ ವಿಸ್ತರಣೆ, ಸುಲಭ ಕಂತುಗಳ ಪಾವತಿ ಸೇರಿದಂತೆ ಇನ್ನೂ ಹತ್ತು ಹಲವಾರು ಸೌಲಭ್ಯಗಳನ್ನು ಗ್ರಾಹಕರು ಈ ಸೇವಾ ಕೇಂದ್ರದಿಂದ ಪಡೆಯಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bosch Limited today inaugurated its first Company Owned Company Operated (CoCo) Bosch Car Service Centre here, and announced that it plans to add 700 more such centres under the franchisee model in the next five years.
Please Wait while comments are loading...