ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕಾದ್ಯಂತ ಬೋರ್‌ವೆಲ್ ಕೊರೆಯುವ ದರ ದುಪ್ಪಟ್ಟು

|
Google Oneindia Kannada News

Recommended Video

ಕರ್ನಾಟಕಾದ್ಯಂತ ಬೋರ್‌ವೆಲ್ ಕೊರೆಯುವ ದರ ದುಪ್ಪಟ್ಟು | Oneindia Kannada

ಬೆಂಗಳೂರು, ಸೆಪ್ಟೆಂಬರ್ 14: ಕುಡಿಯುವ ನೀರು ಹಾಗೂ ಕೃಷಿ ಉದ್ದೇಶಕ್ಕಾಗಿ ಬೋರ್ ವೆಲ್ ಕೊರೆಸುವ ರಾಜ್ಯದ ಜನರಿಗೆ ಭಾರಿ ಆಘಾತ ಕಾದಿದೆ. ಈವರೆಗೆ ಅಡಿಗೆ 60-70ರೂ ಬೋರ್ ವೆಲ್ ಕೊರೆಸಲು ಹಣ ಖರ್ಚು ಮಾಡುತ್ತಿದ್ದ ರಾಜ್ಯದ ಜನರು ಇನ್ನು ಒಂದು ಅಡಿಗೆ 120 ರೂಗಳ ಬೆಲೆ ತೆರಬೇಕಾಗುತ್ತದೆ.

ಕರ್ನಾಟಕ ರಾಜ್ಯ ಬೋರ್ ವೆಲ್ ಮಾಲೀಕರ ಸಂಘ ಕಳೆದ ಮೂರು ದಿನಗಳಿಂದ ಬೋರ್ ವೆಲ್ ಕೊರೆಯುವುದನ್ನು ಸ್ಥಗಿತಗೊಳಿಸಿದ್ದಾರೆ, ಡೀಸೆಲ್ ದರ ಹೆಚ್ಚಳದಿಂದ ಉಂಟಾಗಿರುವ ಆರ್ಥಿಕ ನಷ್ಟವನ್ನು ಭರಿಸಿಕೊಳ್ಳಲು ಬೋರ್ ವೆಲ್ ಕೊರೆಯುವ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಲು ಮುಂದಾಗಿದ್ದಾರೆ.

ತೈಲ ಬೆಲೆಯಲ್ಲಿ ಮತ್ತೆ ಹೆಚ್ಚಳ: ಪೆಟ್ರೋಲ್ 28, ಡೀಸೆಲ್ 22 ಪೈಸೆ ತುಟ್ಟಿತೈಲ ಬೆಲೆಯಲ್ಲಿ ಮತ್ತೆ ಹೆಚ್ಚಳ: ಪೆಟ್ರೋಲ್ 28, ಡೀಸೆಲ್ 22 ಪೈಸೆ ತುಟ್ಟಿ

ಈ ಕುರಿತು ಸೆಪ್ಟೆಂಬರ್ 16ರಂದು ಭಾನುವಾರ ಬೆಂಗಳೂರಿನ ಕೆಂಗೇರಿ ಬಳಿ ಕರ್ನಾಟಕ ರಾಜ್ಯ ಬೋರ್ ವೆಲ್ ಮಾಲೀಕರ ಸಂಘದ ಬೃಹತ್ ಸಭೆ ನಡೆಯಲಿದೆ. ಬೋರ್ ವೆಲ್ ಕೊರೆಯುವ ಶುಲ್ಕವನ್ನು ಪ್ರತಿ ಅಡಿಗೆ 60ರಿಂದ 120 ರೂಗಳಿಗೆ ಹೆಚ್ಚಿಸಲು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

Bore well charges will be doubled in the state!

ಪ್ರತಿಯೊಂದು ಬೋರ್ ವೆಲ್ ಕೊರೆಯುವ ವಾಹನದ ಮೌಲ್ಯ 1.2ಕೋಟಿ ರೂ. ಆಗಿದ್ದು, ಇದರ ನಡುವೆಯೇ ಡೀಸೆಲ್ ದರ ಕಳೆದ ಆರು ತಿಂಗಳಲ್ಲಿ ಶೇ.3ರಷ್ಟು ಹೆಚ್ಚಾಗಿದೆ. ಹೀಗಾಗಿ ಬೋರ್ ವೆಲ್ ಕೊರೆಯುವುದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಿರುವ ಬೋರ್ ವೆಲ್ ಮಾಲೀಕರು ಆರ್ಥಿಕ ನಷ್ಟ ಭರಿಸಲಾಗದೆ ಕಳೆದ ಮೂರು ದಿನಗಳಿಂದ ಕಾರ್ಯ ಸ್ಥಗಿತಗೊಳಿಸಿದ್ದಾರೆ.

ಪೆಟ್ರೋಲ್, ಡಾಲರ್, ಪರಿಸರ ಎಲ್ಲಕ್ಕೂ ಇಥೆನಾಲ್ ಪರಿಹಾರ: ಏನೀ ವಿಚಾರ?ಪೆಟ್ರೋಲ್, ಡಾಲರ್, ಪರಿಸರ ಎಲ್ಲಕ್ಕೂ ಇಥೆನಾಲ್ ಪರಿಹಾರ: ಏನೀ ವಿಚಾರ?

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸುಂಆರು 300 ವಾಹನಗಳು ಕೆಂಗೇರಿ ಸ್ಯಾಟಲೈಟ್ ಟೌನ್ ಬಳಿ ಜಮಾವಣೆಗೊಂಡಿ, ಅನಿರ್ಧಿಷ್ಟ ಮುಷ್ಕರ ನಡೆಸಿ ಮುಂದೇನು ಮಾಡಬೇಕು ಎನ್ನುವ ಗೊಂದಲದಲ್ಲಿ ಮುಳುಗಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಕರ್ನಾಟಕ ಬೋರ್ ವೆಲ್ ಮಾಲೀಕರ ಸಂಘಟದ ನಿರ್ದೇಶಕ ಅನಿಲ್ ಕುಮಾರ್ , ಪ್ರತಿ ಚದರಡಿಗೆ 60 ರೂಗಳನ್ನು ಶುಲ್ಕವಾಗಿ ವಸೂಲಿ ಮಾಡುತ್ತಿದ್ದೇವೆ, ನಮಗೆ ಪ್ರತಿ ಬೋರ್ ವೆಲ್ ಕೊರೆಯಲು ಕನಿಷ್ಠ 50 ರೂ ವೆಚ್ಚವಾಗುತ್ತಿದೆ. ಹೀಗಾಗಲೇ ಕೇವಲ 10-15 ರೂಗೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ವಾಹನವನ್ನು ಇಟ್ಟುಕೊಂಡು ವಹಿವಾಟು ನಡೆಸುವುದು ದುಸ್ತರವಾಗಿದೆ.

Bore well charges will be doubled in the state!

ದೇಶದಲ್ಲೇ ಮೊದಲ ಬಾರಿಗೆ 300 ಕ್ಕೂ ಹೆಚ್ಚು ವಾಹನಗಳನ್ನು ಒಂದೆಡೆ ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದೇವೆ, ನಾವು ಸರ್ಕಾರದ ವಿರುದ್ಧ ಮುಷ್ಕರ ನಡೆಸುತ್ತಿಲ್ಲ, ಬದಲಾಗಿ ನಮ್ಮ ಉದ್ಯಮವನ್ನು ಮುನ್ನಡೆಸಲು ಆರ್ಥಿಕವಾಗಿ ಸಾಧ್ಯವಾಗದೆ ನಷ್ಟಕ್ಕೀಡಾಗಿ ಎಲ್ಲರೂ ವಹಿವಾಟು ನಿಲ್ಲಿಸಿದ್ದೇವೆ.

ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?

ಒಂದೆಡೆ ಕೇಂದ್ರ ಸರ್ಕಾರ ನಮ್ಮ ಸಂಕಷ್ಟವನ್ನು ಆಲಿಸಬೇಕು. ಮತ್ತೊಂದೆಡೆ ಬೋರ್ ವೆಲ್ ಕೊರೆಸುವ ಗ್ರಾಹಕರು ನಮಗೆ ಹೊಸ ಶುಲ್ಕವನ್ನು ನಿಗದಿಮಾಡಲು ಒಪ್ಪಿಕೊಳ್ಳಬೇಕು. ಒಂದೊಮ್ಮೆ ಒಪ್ಪಿಕೊಳ್ಳದಿದ್ದರೆ ನಮ್ಮ ಉದ್ಯಮ ನಿಂತು ಹೋಗುವ ಪರಿಸ್ಥಿತಿಯಲ್ಲಿದೆ ಎಂದು ಅಳಲನ್ನು ತೋಡಿಕೊಂಡರು.

English summary
As diesel prices has gone beyond unbearable for the people, bore well vehicle owners have fed up with the same. They have decided to increase bore well digging price Rs.65 to Rs.120 per feet of dig up the bore well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X